‘ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ’ : ಈಶ್ವರ್ ಖಂಡ್ರೆ

ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ, ಎಂದು ಅಭಿಪ್ರಾಯ ಪಟ್ಟಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕನ್ನಡಿಗರಿಗೆ ಸರ್ಕಾರದಿಂದ ಅನ್ಯಾಯವಾಗಿದೆ ಎಂದಿದ್ದಾರೆ.

ಬೆಂಗಳೂರು ( Kannada News ) : ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ, ಅವರು ಬದುಕಿರುವಾಗಲೇ ಅವರ ಬದುಕು ಕಟ್ಟಿಕೊಳ್ಳಲು ಹಾಗೂ ನೆರವಾಗವುದು ಅಲ್ಲದೆ, ಅವರ ಸ್ಥಿತಿಗತಿಗಳ ಬಗ್ಗೆ ಯೋಚಿಸುವುದು ಸರ್ಕಾರದ ಕರ್ತವ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಲಾಕ್ ಡೌನ್ ನ ಹಿನ್ನೆಲೆ ಹೇಗಾದರೂ ಮಾಡಿ ತಮ್ಮ ಊರುಗಳನ್ನು ತಲುಪಬೇಕು ಎಂಬ ಕಾತುರ ಮತ್ತು ಆಸೆಯಿಂದ ಸಾವಿರಾರು ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಪ್ರಾಯಾಣದ ಯುದ್ಧಕ್ಕೆ ಮುಂದಾದರು, ಇತ್ತೀಚೆಗೆ ಇಂತಹದ್ದೇ ಘಟನೆಯಲ್ಲಿ ಕಾಲ್ನಡಿಗೆಯಲ್ಲಿ ಹೋರಾಟ ಹಲವು ಕಾರ್ಮಿಕರು ರೈಲು ದುರಂತದಲ್ಲಿ ಅಸುನೀಗಿದರು.

ಇನ್ನು, ತಮ್ಮ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು, ರಾಜ್ಯಕ್ಕೆ ಮರಳಲು ಇಚ್ಛಿಸುವ ಕನ್ನಡಿಗರಿಗೆ ಸರ್ಕಾರದಿಂದ ಅನ್ಯಾಯವಾಗಿದೆ ಎಂದರು. ಲಾಕ್ ಡೌನ್ ಬಿಕ್ಕಟ್ಟಿನಿಂದಾಗಿ ದುಡಿಯುತ್ತಿದ್ದ ಕೈಗೆ ಕೆಲಸವಿಲ್ಲದಾಯಿತು, ಇನ್ನೊಬ್ಬರಿಗೆ ಹಸಿವು ನೀಗಿಸುತ್ತಿದ್ದ ರೈತ ಹಸವಿನಿಂದ ಮಲಗುವಂತಾಯಿತು.

ಈ ಸಂದರ್ಭದಲ್ಲಿ ಸರ್ಕಾರವು ನೀಡುವ ಅಥವಾ ದಾನಿಗಳು ನೀಡುವ ಆಹಾರ, ದವಸ ಧಾನ್ಯಕ್ಕೆ ಕೈಯೊಡ್ಡಲು ಮನಸ್ಸಾಗದೆ ಸಾವಿರಾರು ಸ್ವಾಭಿಮಾನಿ ವಲಸೆ ಕಾರ್ಮಿಕರು, ಗಂಜಿ ಆದರೂ ಪರವಾಗಿಲ್ಲವೆಂದು, ತಮ್ಮ ತಮ್ಮ ಊರಿನ ಕಡೆ ಮುಖ ಮಾಡಿದರು. ಇಂತವರ ಬಗೆಗೆ ಸರ್ಕಾರ ಮಾನವೀಯತೆ ತೋರಬೇಕು ಎಂದಿದ್ದಾರೆ.

ಹೊರ ರಾಜ್ಯಗಳಲ್ಲಿ ಹೋಗಿ ದುಡಿಯುತ್ತಿರುವ ಲಕ್ಷಾಂತರ ಕನ್ನಡಿಗರ ಸ್ಥಿತಿ ಅತಂತ್ರವಾಗಿದ್ದು, ಪ್ರಸ್ತುತ 91,077ಕ್ಕೂ ಹೆಚ್ಚು ಜನರು ರಾಜ್ಯಕ್ಕೆ ಮರಳಲು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ ಲೈನ್  ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರ ಸಲ್ಲಿಸಿರುವ ಅರ್ಜಿಗಳಲ್ಲಿ ಈವರೆಗೆ 706 ಜನರಿಗೆ ಅನುಮತಿ ನೀಡಿದೆ. ಇನ್ನೂ 51,241  ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡದೆ ಸರ್ಕಾರ ವಿಳಂಬ ಮಾಡುತ್ತಿದೆ. ಕೆಲವು ಅರ್ಜಿಗಳು ಜಿಲ್ಲಾಧಿಕಾರಿಗಳ ಬಳಿಯೇ ಇದೆ ಮತ್ತೆ ಕೆಲವು ನೋಡಲ್ ಅಧಿಕಾರಿಗಳ ಬಳಿ ಇವೆ ಎಂದು ಅವರು ಹೇಳಿದರು.

Web Title : eshwar khandre press meet on migrant workers

Contact for web design services Mobile