ಮೋದಿಗೆ ಸವಾಲ್ ನೀಡಿದ ಸಿದ್ದರಾಮಯ್ಯ

Former Chief Minister Siddaramaiah challenges Prime Minister Narendra Modi

ಮೋದಿಗೆ ಸವಾಲ್ ನೀಡಿದ ಸಿದ್ದರಾಮಯ್ಯ – Former Chief Minister Siddaramaiah challenges Prime Minister Narendra Modi

ಬಾಗಲಕೋಟೆ : ಕಾಂಗ್ರೆಸ್ ಮತ್ತು ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ , ಪ್ರಧಾನಿ ನರೇಂದ್ರ ಮೋದಿಗೆ ನೇರವಾದ ಪ್ರಶ್ನೆ ಹಾಕಿದ್ದಾರೆ. ಮೋದಿ ನೀಡಿರುವ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದು ಕಾಲೆಳೆದಿದ್ದಾರೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ನಾನು ವೈಯಕ್ತಿಕವಾಗಿ ನರೇಂದ್ರ ಮೋದಿ ವಿರೋಧಿ ಅಲ್ಲ, ಐದು ವರ್ಷ ಪ್ರಧಾನಿಯಾಗಿ ನರೇಂದ್ರ ಮೋದಿ ಮಾಡಿರುವುದಾದರೂ ಏನು ಎಂದು ತೋರಿಸಲಿ” ಎಂದು ಸಿದ್ಧರಾಮಯ್ಯ ಅವರು ಸವಾಲೆಸೆದಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿ ಮೋದಿ ನೀಡಿದ ಭರವಸೆಗಳನ್ನು ಎಲ್ಲಿ ಈಡೇರಿಸಿದ್ದಾರೆ ? ಅವರು ಮಾಡಿರುವ ಪ್ರಗತಿಯನ್ನು ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ನಮ್ಮ ಸರ್ಕಾರ ಚುನಾವಣೆಯಲ್ಲಿ ಸೋತಿರಬಹುದು ಆದರೆ ಐದು ವರ್ಷದ ಆಡಳಿತದ ಅವಧಿಯಲ್ಲಿ ಜನರಿಗೆ ನೀಡಿದ 165 ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದು ತಿಳಿಸಿದರು. ಮೋದಿ ಸಮರ್ಥ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಹೀಗಾಗಿ ಮತ ಗಳಿಸಲು ಭಾವನಾತ್ಮಕ ವಿಚಾರ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಕೇವಲ ಊಹಾತ್ಮಕ ಭರವಸೆಗಳನ್ನು ನೀಡುತ್ತಾ ಬಂದಿರುವ ಮೋದಿಯ ಬಗ್ಗೆ ಈಗಾಗಲೇ ಜನರಿಗೆ ತಿಳಿದಿದೆ, ಈ ಬಾರಿ ಅವರು ಗೆಲ್ಲಲು ಯಾವುದೇ ಕಾರಣಗಳು ಇಲ್ಲ, ಮತ್ತೆ ಸುಳ್ಳು ಭರವಸೆಗಳನ್ನು ಜನ ನಂಬುವುದಿಲ್ಲ ಎಂದಿದ್ದಾರೆ.//// ವರದಿ : ರವಿಚಂದ್ರ ಮುರಾಳ