ಬೇರೆ ಲೆಕ್ಕಾಚಾರ ಶುರು ಮಾಡಿದ ಮಾಜಿ ಸಿ.ಎಂ ಕುಮಾರಸ್ವಾಮಿ
Former CM Kumaraswamy started a different calculation for his Next Step
ಬೇರೆ ಲೆಕ್ಕಾಚಾರ ಶುರು ಮಾಡಿದ ಮಾಜಿ ಸಿ.ಎಂ ಕುಮಾರಸ್ವಾಮಿ
ದೋಸ್ತಿ ಪಾಳೆಯದ ಸರ್ಕಾರ ಉರುಳಿ ಹೋಗಿದೆ, ಮತ್ತೊಂದೆಡೆ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಿ ಕೇಕೆ ಹಾಕಿ ನಗುತ್ತಿದೆ. ಇತ್ತ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರೆಯುತ್ತಾ ಇಲ್ಲವಾ ? ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಕೆಲ ನಾಯಕರು ಹೇಳುವಂತೆ ಮೈತ್ರಿ ಮುಂದುವರಿಸುವುದರ ಬಗೆಗೆ ಕೊನೆಯ ನಿರ್ಣಾಯಕ ನಿರ್ಧಾರ ಹೈಕಮಾಂಡ್ ನಿಂದ ಬರಬೇಕಿದೆ.
ಅರ್ಥಾತ್ ಇದೀಗ ಕಾಂಗ್ರೆಸ್ ಗಿಂತ ಹೆಚ್ಚು ಜೆಡಿಎಸ್ ಚಿಂತೆಗೊಳಗಾಗಿದೆ, ಜೆಡಿಎಸ್ ಗೆ ಮುಂದಿನ ಭವಿಷ್ಯದ ಚಿಂತೆಯಾಗಿದ್ದು ಅದಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಶಾಸಕರಿಗೆ ಒಗ್ಗಟ್ಟಿನಿಂದಿರಲು ತಿಳಿಸಿದ್ದಾರೆ, ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ.
ಸರ್ಕಾರ ಉರುಳಿ ಹೋಯಿತು ಎಂಬ ಚಿಂತೆಗಿಂತ ,ಮುಂದೆ ನಮ್ಮ ಪಕ್ಷದ ಸಂಘಟನೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಶಾಸಕರಿಗೆ ಪಾಠ ಮಾಡಿದ್ದಾರೆ. ಜೊತೆಗೆ ಕುಮಾರಸ್ವಾಮಿಯ ನಿರ್ಧಾರಕ್ಕೆ ಸಮ್ಮತಿಸಿರುವ ಶಾಸಕರೆಲ್ಲರೂ ಒಗ್ಗಟ್ಟಿನಿಂದ ಇರಲು ತೀರ್ಮಾನಿಸಿದ್ದಾರೆ ಪಕ್ಷವನ್ನು ಇನ್ನಷ್ಟು ಸಂಘಟಿಸಲು ಮುಂದಾಗಿದ್ದಾರೆ.
ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮಾಜಿ ಜಿ ಸಿಎಂ ಕರೆದ ತುರ್ತು ಸಭೆಯಲ್ಲಿ ಈ ಬಗ್ಗೆ ಚರ್ಚಿಸಿರುವ ಕುಮಾರಸ್ವಾಮಿ ಮಧ್ಯಂತರ ಚುನಾವಣೆಯ ಸುಳಿವನ್ನು ಸಹ ಕೊಟ್ಟಿದ್ದಾರೆ.
ಈಗ ಮಾಜಿ ದೋಸ್ತಿಯಲ್ಲಿ ಟೆನ್ಶನ್ ಶುರುವಾಗಿದೆ, ಮುಂದೆ ಏನು ಮಾಡುವುದು ಎಂಬುದರ ಚರ್ಚೆಗಳು ಜೋರಾಗಿವೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರಿಯಬೇಕೆ ಬೇಡವೆ ಅನ್ನುವುದರ ಬಗ್ಗೆ ಚರ್ಚೆ ತೀವ್ರಗೊಳ್ಳುತ್ತಿದೆ . ಈ ನಡುವೆ ಎಚ್.ಡಿ.ಕೆ ಬೇರೆಯದ್ದೇ ಲೆಕ್ಕಾಚಾರ ಶುರು ಮಾಡಿದ್ದಾರೆ.
ತಾಜ್ ವೆಸ್ಟ್ ಎಂಡ್ ನಲ್ಲಿ ತುರ್ತು ಸಭೆ
ತಾಜ್ ವೆಸ್ಟ್ ಎಂಡ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಕುಮಾರಸ್ವಾಮಿ , ತಮ್ಮ ಶಾಸಕರಿಗೆ, ” ನಾವೆಲ್ಲರೂ ಒಗ್ಗಟ್ಟಾಗಿ ಇರೋಣ, ನಿಮ್ಮೊಂದಿಗೆ ನಾನು ಹಾಗೂ ಜೆಡಿಎಸ್ ವರಿಷ್ಠರು ಇರುತ್ತೇವೆ, ಮೈತ್ರಿ ಮುಂದುವರೆಸುವುದರ ಬಗೆಗೆ ಮುಂದೆ ನಿರ್ಧರಿಸೋಣ ಎಂದಿದ್ದಾರೆ.
ಆಲ್ಲದೆ, ಮೈತ್ರಿಯ ಬಗೆಗೆ ಕಾಂಗ್ರೆಸ್ ಯಾವ ನಿರ್ಧಾರ ತೆಗೆದು ಕೊಳ್ಳುತ್ತದೆಯೋ ನೋಡೋಣ, ಆ ನಂತರ ಆ ಬಗ್ಗೆ ಆಲೋಚಿಸೋಣ ಎಂದಿದ್ದಾರೆ, ಜೊತೆಗೆ ಮುಂದಿನ ದಿನಗಳಲ್ಲಿ ಉಪ ಚುನಾವಣೆಗಳು ಎದುರಾಗುತ್ತವೆ, ಅಷ್ಟರಲ್ಲಿ ನಮ್ಮ ಪಕ್ಷವನ್ನು ಬಲಿಷ್ಠಗೊಳಿಸಬೇಕು, ಪಕ್ಷವನ್ನು ಸಂಘಟಿಸಬೇಕು, ಸಧ್ಯದ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆ ಯಾವುದೇ ಸಮಯದಲ್ಲಾದರೂ ಎದುರಾಗಬಹುದು, ಅದಕ್ಕಾಗಿ ನಾವು ಸಿದ್ಧರಾಗೋಣ ಎಂದು ತಿಳಿಸಿದ್ದಾರೆ.
ಇನ್ನು, ಎಲ್ಲಿಯೂ ಸಹ, ಯಾವುದೇ ಕಾರಣಕ್ಕೂ ಮೈತ್ರಿ ವಿಚಾರವಾಗಿ ಹೇಳಿಕೆ ನೀಡಬೇಡಿ, ಹಿಂದಿನ ಹದಿನಾಲ್ಕು ತಿಂಗಳ ಕಾರ್ಯವೈಖರಿಯನ್ನು ಮುಂದಿಟ್ಟು ಪಕ್ಷ ಸಂಘಟಿಸಿ, ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಫುಲ್ ಟೈಮ್ ಪ್ಲಾನ್
ಅಷ್ಟಕ್ಕೂ ಅಧಿಕಾರದಲ್ಲಿದ್ದಾಗ , ಇವೆಲ್ಲವನ್ನೂ ಆಲೋಚಿಸಲು ಕುಮಾರಸ್ವಾಮಿಯವರಿಗೆ ಬಿಡುವಿನ ಅಭಾವವಿತ್ತು, ಆದರೆ ಈಗ ಹಾಗಲ್ಲ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ” ಫುಲ್ ಟೈಮ್ ಪ್ಲಾನ್ ” ಮಾಡುವ ಅವಕಾಶವಿದೆ, ಈ ಬಗ್ಗೆ ಬಿ.ಜೆ.ಪಿ ಗೆ ಗೊತ್ತಿದೆ. ಈ ಸಮಯವನ್ನೇ ಬಳಸಿಕೊಂಡು ಜೆಡಿಎಸ್ ತಮ್ಮ ಪಕ್ಷವನ್ನು ಬಲಿಷ್ಠಗೊಳಿಸಬಹುದು, ಇನ್ನಷ್ಟು ಸಕ್ರಿಯವಾಗಿ ಕಾರ್ಯ ನಿರ್ವಹಿಸಬಹುದು ಎಂಬ ಎಲ್ಲಾ ಲೆಕ್ಕಾಚಾರ ಜೆಡಿಎಸ್ ಮಾಡಿದೆ.
ಈ ನಡುವೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಮಂತ್ರಿ ಸ್ಥಾನದ ನಿರ್ಧಾರ ಹೈ ಕಮಾಂಡ್ ಮಾಡಲಿದೆ. ಎಂದು ತಿಳಿಸಿದ್ದಾರೆ. ಅತೃಪ ಶಾಸಕರನ್ನು ಮತ್ತು ತಮ್ಮದೇ ಶಾಸಕರನ್ನು ಬ್ಯಾಲೆನ್ಸ್ ಮಾಡೋ ದೊಡ್ಡ ಸಮಸ್ಯೆ ಬಿ.ಜೆ.ಪಿ ಯದ್ದಾದರೆ, ಪಕ್ಷ ಸಂಘಟನೆ ಮಾಡಿ, ಪಕ್ಷ ಬಲಿಷ್ಠಗೊಳಿಸಿ ಬಿ.ಜೆ.ಪಿ ಗೆ ಪಾಠ ಕಲಿಸೋದು ಜೆಡಿಎಸ್ ಮತ್ತು ಕಾಂಗ್ರೆಸ್ ಲೆಕ್ಕಾಚಾರ . . . ////
Web Title : Former CM Kumaraswamy started a different calculation for his Next Step
Get All Karnataka Politics and Political News Updates at Kannada News Today
Follow us On
Google News |