ಕುಡುಕರನ್ನು ಬದುಕಿಸಿ, ಸಾರಾಯಿ ಮಾರಾಟ ಪ್ರಾರಂಭಿಸಿ : ಮಾಜಿ ಸಚಿವ ತಿಮ್ಮಾಪುರ

Former minister expressed his opinion to sell liquor in Karnataka

🌐 Kannada News :

ಬಾಗಲಕೋಟೆ : ರಾಜ್ಯದಲ್ಲಿ ಕೊರೋನಾಗಿಂತ ಎಣ್ಣೆ ಬಂದ್ ಆಗಿರೋ ಸಮಸ್ಯೆಯೇ ಹೆಚ್ಚಾದಂತಿದೆ, ಸಾಮಾಜಿಕ ಜಾಲತಾಣಗಳಲ್ಲಿ ಎಣ್ಣೆ ಬೇಕು ಎಣ್ಣೆ ಎಂದೇ ವೈರಲ್ ಆಗ್ತಾಯಿರೋ ಕುಡುಕರ ಬೇಡಿಕೆಗೆ ಈಗ ಮಾಜಿ ಸಚಿವ ತಿಮ್ಮಾಪುರ ದನಿಯಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾಸೋಂಕಿನಿಂದ ಕೇವಲ 6 ಜನ ಮೃತ ಪಟ್ಟಿದ್ದರೆ ಸಾರಾಯಿ ಬಂದ್‌ ಮಾಡಿರುವುದಕ್ಕೆ 28 ಜನ ಸತ್ತಿದ್ದಾರೆ. ಸತ್ತವರು ಸಹ ಮನುಷ್ಯರೇ, ಮದ್ಯಪಾನ ಚಟದವರು ದಿನೇ ದಿನೇ ಮನೋರೋಗಿಗಳಾಗುತ್ತಿದ್ದಾರೆ. ಅವರ ಕಡೆಯೂ ಗಮನಹರಿಸಬೇಕಾಗಿದೆ, ಈ ಸಂದರ್ಭದಲ್ಲಿ ಮದ್ಯದಂಗಡಿಗಳನ್ನು ಆರಂಭಿಸಿದರೆ ಒಳ್ಳೆಯದು ಎಂದು ಮಾಜಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಪಂಜಾಬ್​ ಪೊಲೀಸರ ಮೇಲೆ ಹಲ್ಲೆ, ಕತ್ತರಿಸಿದ್ದ ಕೈ ಮರುಜೋಡಣೆ, ಕಿಡಿಗೇಡಿಗಳ ಬಂಧನ

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಮಾಜಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ, ಲಾಕ್‌ಡೌನ್‌ ತರುವಾಯ ಸರ್ಕಾರ ಮದ್ಯ ಮಾರಾಟವನ್ನು ಬಂದ್‌ ಮಾಡಿ ಆದೇಶಿಸಿದೆ, ಅಷ್ಟಕ್ಕೇ ರಾಜ್ಯದಲ್ಲಿ ಮದ್ಯ ಮಾರಾಟ ನಿಂತಿಲ್ಲ. ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಹೆಚ್ಚು ಬೆಲೆಗೆ ಮದ್ಯ ಮಾರಾಟವಾಗುತ್ತಿದ್ದು, ಇದರ ಕಡಿವಾಣಕ್ಕೆ ಮದ್ಯ ಮಾರಾಟ ಪ್ರಾರಂಭವಾಗಬೇಕು ಎಂದಿದ್ದಾರೆ.

ಇದನ್ನೂ ಓದಿ : ಈಜುಕೊಳದಲ್ಲಿ ಈಜಾಡುತ್ತಾ ಟ್ವೀಟ್ ಮಾಡಿದ ಸಚಿವ ಸುಧಾಕರ್, ಟೀಕೆಗೆ ಗುರಿಯಾಯ್ತು ಸಚಿವರ ನಡೆ

ಇನ್ನೊಂದೆಡೆ ಇಬೇ ಸಮಯವನ್ನು ಬಳಸಿಕೊಂಡು ರಾಜ್ಯದ ಹಲವೆಡೆ ಕಳ್ಳಭಟ್ಟಿ ಸಾರಾಯಿ ಎಗ್ಗಿಲ್ಲದೆ ತಯಾರಾಗಿ ಮಾರಾಟ ವಾಗುತ್ತಿದೆ. ಇವೆಲ್ಲಾ ಸಮಸ್ಯೆಗಳ ಪರಿಹಾರಕ್ಕೆ ನನ್ನ ಅಭಿಪ್ರಾಯದ ಪ್ರಕಾರ ಮದ್ಯ ಮಾರಾಟವನ್ನು ಆರಂಭಿಸಿದರೆ ತಪ್ಪಿಲ್ಲಾ ಎಂದು ಮಾಜಿ ಅಬಕಾರಿ ಸಚಿವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

📣 ಇನ್ನಷ್ಟು ಕನ್ನಡ ಕರ್ನಾಟಕ ನ್ಯೂಸ್ ಗಳಿಗಾಗಿ Karnataka News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today