“ಸಫಲವಾಗಲಿಲ್ಲ ದೊಡ್ಡಗೌಡರ ಲೆಕ್ಕಾಚಾರ” ತುಮಕೂರಿನಲ್ಲಿ ದೇವೇಗೌಡ ಸೋಲು
former prime minister H D Deve Gowda was defeated in Tumkur
“ಸಫಲವಾಗಲಿಲ್ಲ ದೊಡ್ಡಗೌಡರ ಲೆಕ್ಕಾಚಾರ” ತುಮಕೂರಿನಲ್ಲಿ ದೇವೇಗೌಡ ಸೋಲು
ಕರ್ನಾಟಕದ ಲೋಕಸಭಾ ಸಮರದ ರಣರಂಗದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಾಜಿ ಪ್ರಧಾನಿ ಮಣ್ಣಿನ ಮಗ ಎಂದೇ ಖ್ಯಾತರಾದ ಶ್ರೀ ಎಚ್ ಡಿ ದೇವೇಗೌಡ ಅವರು ಅನುಭವಿಸಿದ ಸೋಲು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ದೊಡ್ಡ ಶಾಕ್ ಅನುಭವಿಸಿದೆ. ತುಮಕೂರಿನಲ್ಲಿ 27 ಸಾವಿರ ಮತಗಳಿಂದ ಅವ್ರು ಸೋಲುಂಡಿದ್ದಾರೆ.
ಅಧಿಕಾರವನ್ನು ಹಿಡಿಯಬೇಕೆಂಬ ಹುಚ್ಚಿನಿಂದಾಗಿ ಈ ಸಾರಿ ಸಹ ಜನರು ತಮ್ಮನ್ನು ಸ್ವೀಕರಿಸುತ್ತಾರೆ ಎಂಬ ಮನೋಭಾವದಿಂದಾಗಿ ಶ್ರೀ ಎಚ್ ಡಿ ದೇವೇಗೌಡ ಅವರು ಇದು ತಮ್ಮ ಕೊನೆ ಚುನಾವಣೆ ಎಂದು ದೇವೇಗೌಡರು ಮೊದಲೇ ಹೇಳಿದ್ದರು. ಆದ್ರೆ ಕೊನೆ ಬಾರಿ ಜನರು ದೇವೇಗೌಡರ ಕೈ ಹಿಡಿದಿಲ್ಲ ಇದಕ್ಕೆ ಕಾರಣ ಮೈತ್ರಿ ಒಪ್ಪಂದ ದೇವೇಗೌಡರ ಕೈ ಹಿಡಿದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ದೇವೇಗೌಡರ ಸೋಲಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ತಮ್ಮ ಮೂಲ ಕ್ಷೇತ್ರವಾದ ಹಾಸನವನ್ನು ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದ ದೇವೇಗೌಡರು, ತುಮಕೂರಿನಿಂದ ಅದೃಷ್ಟ ಪರೀಕ್ಷೆ ಹುಡುಕು ವಂತಾಯಿತು. ದೇವೇಗೌಡರ ವಿರುದ್ಧ ಜಿ.ಎಸ್. ಬಸವರಾಜು ಸ್ಪರ್ಧಿಸಿದ್ದರು.
ದೇವೇಗೌಡರಿಗೆ ಪ್ರಬಲ ಸ್ಪರ್ಧೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಬಸವರಾಜು ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದರು ಹಾಗಾಗಿ ಮಣ್ಣಿನ ಮಗನ ಕನಸು ಮಣ್ಣುಪಾಲಾಯಿತು.////