3 ತಿಂಗಳು ಉಚಿತ ಸಿಲಿಂಡರ್‌, ಫಲಾನುಭವಿಗಳು ಯಾರು ? ಪಡೆಯೋದು ಹೇಗೆ ?

Free LPG cylinders distributed by state government for three months

🌐 Kannada News :

ಬೆಂಗಳೂರು : ರಾಷ್ಟ್ರವ್ಯಾಪಿ ಲಾಕ್ ಡೌನ್ ಮಧ್ಯೆ ಬಡವರ ಮೇಲಿನ ಹೊರೆ ಸರಾಗಗೊಳಿಸುವ ಪ್ರಯತ್ನದಲ್ಲಿ ರಾಜ್ಯದ ಬಡ ಜನತೆ ಕಷ್ಟ ಪಡಬಾರದು ಎಂಬ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ 3 ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಮಹತ್ವದ ಯೋಜನೆ ನಿರ್ಧರಿಸಿದೆ.

ಅದಾಗಲೇ ಕೇಂದ್ರ ಸರ್ಕಾರವು ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಉಚಿತ ಸಿಲಿಂಡರ್ ವಿತರಣೆಗೆ ಕ್ರಮ ಕೈಗೊಂಡಿದ್ದು. ಅದೇ ಮಾದರಿಯಲ್ಲಿಯೇ ರಾಜ್ಯ ಸರ್ಕಾರವೂ ಸಹ ಉಚಿತ ಸಿಲಿಂಡರ್ ವಿತರಣೆಗೆ ಮುಂದಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ’ಯಡಿ  ಮೂರು ತಿಂಗಳು ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು,  ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಕೋವಿಡ್–19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಉಚಿತ ವಿತರಣೆಗೆ ಕ್ರಮ ತೆಗೆದುಕೊಂಡಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲ ಸಿಲಿಂಡರ್‌ ಉಚಿತವಾಗಿ ವಿತರಿಸಲಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಇದಕ್ಕಾಗಿ ಸರ್ಕಾರ ₹27.52 ಕೋಟಿ ಭರಿಸಲಿದ್ದು, ಸುಮಾರು 1 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಸಹ ಮಾಧುಸ್ವಾಮಿ ತಿಳಿಸಿದರು.

ಯಾರೆಲ್ಲಾ, ಈ ಯೋಜನೆಯ ಫಲಾನುಭವಿಗಳು
ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಇರುವವರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ವಿತರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅರ್ಹ ಫಲಾನುಭವಿಗಳಿಗೆ ಈ ಸಂಬಂಧ ಎಸ್ ಎಂ ಎಸ್ ಬರಲಿದ್ದು, ಏಪ್ರಿಲ್, ಮೇ ಜೂನ್ ನ ಉಚಿತ ಸಿಲಿಂಡರ್ ಅನ್ನು ಅರ್ಹರಿಗೆ ವಿತರಿಸಲಾಗುತ್ತದೆ.

ಪಡೆಯೋದು ಹೇಗೆ ?

ಸಿಲಿಂಡರ್ ಪಡೆಯೋ ನಿಟ್ಟಿನಲ್ಲಿ ಅರ್ಹ ಫಲಾನುಭಾವಿಗಳು ಓಡಾಡುವಂತಿಲ್ಲ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಇರುವವರಿಗೆ ಸಂದೇಶ ಕಳಿಸಲಾಗುತ್ತದೆ. ಮಾಮೂಲಿ ಸಿಲಿಂಡರ್ ಮನೆ ಭಾಗಿಲಿಗೆ ಬರುವ ಹಾಗೆ, ಅರ್ಹರಿಗೆ ಉಚಿತ ಸಿಲಿಂಡರ್ ಗಳು ತಲುಪುತ್ತವೆ..

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.