ಮಾನ್ಯ ಶಾಸಕರೆ ಕುಡಿಯಲು ನೀರು ಕೊಡಿ, ಇಲ್ಲವೇ ವಿಷ ಕೊಡಿ … !

Give a Water to drink or poison

[story-lines]

ಭಾರತದ ಮ್ಯಾಪ್ ನಲ್ಲಿ, ಅಷ್ಟೇಕೆ ಕರ್ನಾಟಕದ ಮ್ಯಾಪ್ ನಲ್ಲಿ ನಮ್ಮ ಊರು ಇದಿಯೋ ಇಲ್ಲವೋ ಎಂದು ಎರಡೆರಡು ಸಾರಿ ಹುಡುಕಿ ನೋಡಿದ್ದಾಯಿತು. ಪರವಾಗಿಲ್ಲ ಇದೆ. ಸ್ನೇಹಿತರೆ ಇಷ್ಟು ದಿವಸ ನಿಮ್ಮಲ್ಲಿ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೆ, ಇಂದು ನಮ್ಮ ಗ್ರಾಮವೇ ಸುದ್ದಿಯಾಗುತ್ತದೆಯೆಂದು ಅಂದು ಕೊಂಡಿರಲಿಲ್ಲ.

ಅಷ್ಟಕ್ಕೂ ಮೊದಲು ನಮ್ಮ ಗ್ರಾಮವನ್ನು ಪರಿಚಯ ಮಾಡಿ ಕೊಡುತ್ತೇನೆ, ಭಾರತದ, ಶಾಂತಿ ಪ್ರಿಯ ನಾಡು ಕರ್ನಾಟಕದ ಬೆಂಗಳೂರಿಗೆ ಅಂಟಿ ಕೊಂಡಂತಿರುವ ಗ್ರಾಮ ಗೊರವಿಗೆರೆ. ಮಹದೇವಪುರ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಗ್ರಾಮವಿದು.ದೊಡ್ಡಬನಹಳ್ಳಿ ಗ್ರಾಮ ಪಂಚಾಯತಿಗೆ ಸೇರುತ್ತದೆ. ಇನ್ನು ವಿಷಯಕ್ಕೆ ಬರೋಣ.

ಮಾನ್ಯ ಶಾಸಕರೆ ಕುಡಿಯಲು ನೀರು ಕೊಡಿ, ಇಲ್ಲವೇ ವಿಷ ಕೊಡಿ ... ! - Kannada News

ವರ್ಷದಲ್ಲಿ ಶೇಕಡಾ 90% ದಿನಗಳು ಕುಡಿಯಲು ನೀರಿನ ವ್ಯವಸ್ಥೆಯೇ ಇಲ್ಲ.ಮಾನ್ಯ ಶಾಸಕರೆ ಕುಡಿಯಲು ನೀರು ಕೊಡಿ, ಇಲ್ಲವೇ ವಿಷ ಕೊಡಿ - Kannada News

ಪ್ರತಿ ದಿನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ನೀರಿನ ವ್ಯವಸ್ಥೆ ಮಾಡ ಬೇಕಾದವರು ನಮ್ಮ ಮೇಲೆಯೇ ದೌರ್ಜನ್ಯ ಮಾಡಿದ ಘಟನೆಗಳೂ ಸಹ ನಡೆದಿವೆ, ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನೀರನ್ನು ಕೇಳಿದರೂ ಸಹ ನಮ್ಮ ಇಷ್ಟ, ಬೇಕಾದ್ರೆ ಬಿಡ್ತಿವಿ, ಇಲ್ಲಾ ಅಂದ್ರೆ ಇಲ್ಲ, ಎಂಬ ಹಾರಿಕೆಯ ಮಾತುಗಳನ್ನಾಡುತ್ತಾರೆ. ಒಂದಿಲ್ಲಾ ಒಂದು ಸಮಸ್ಯೆಯ ನೆಪದಿಂದ ವರ್ಷದಲ್ಲಿ ನೀರು ಸಿಕ್ಕರೆ ನಮ್ಮ ಪುಣ್ಯ ಕೇವಲ ಕೆಲವು ದಿನಗಳು ಮಾತ್ರ.

ದೊಡ್ಡಬನಹಳ್ಳಿ ಪಂಚಾಯತ್ ಗೆ ಇಲ್ಲ, ಇದರ ಹೊಣೆ.

ಉಟಕ್ಕುಂಟು ಆಟಕ್ಕಿಲ್ಲದ ಪಂಚಾಯತ್ : ದೊಡ್ಡಬನಹಳ್ಳಿ ಗ್ರಾಮಚಂಚಾಯತಿ ಅಧಿಕಾರಿಗಳು ಎಲ್ಲೋ ಈ ಗ್ರಾಮವನ್ನು ಲೆಕ್ಕಕ್ಕೆ ತೆಗೆದು ಕೊಂಡಂತೆ ಕಾಣುತ್ತಿಲ್ಲ, ತಿಂಗಳಾನು ಗಟ್ಟಲೆ ನೀರಿಲ್ಲದ ನಮ್ಮ ಪರಿಸ್ಥಿತಿ ಕಂಡರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.ವಿಶೇಷ ಎಂದರೆ ಗ್ರಾಮ ಪಂಚಾಯತ್ ಸದಸ್ಯರ ಮಾತಿಗೂ ಜಗ್ಗದ ಮನಸ್ಥಿತಿ ಅವರದು.ಗ್ರಾಮದ ಕಡೆ ಸುಳಿದು ವರ್ಷಗಳೆ ಕಳೆದು ಹೋಗಿವೆ. ಹೋಗಲಿ ನಾವೇ ಭೇಟಿ ಮಾಡೋಣ ಅಂದರೆ ಅವರದು ಒಂದು ನಿರ್ದಿಷ್ಟ ಸಮಯವಿಲ್ಲ, ಪಂಚಾಯತ್ ನಲ್ಲಿ ಇದ್ದರಾಯಿತು, ಇಲ್ಲದಿದ್ದರಾಯಿತು..

ಬಿಸ್ಲರಿ ಕುಡಿದು ಜೀವನ ಮಾಡುವ ಆರ್ಥಿಕ ಪರಿಸ್ಥಿತಿ ಈ ಗ್ರಾಮಸ್ಥರಿಗಿಲ್ಲ.ಹುಟ್ಟಿದ ಪಾಪಿ ಜೀವ ಸಾಯೋತನಕನಾದ್ರು ಒಂದು ತೊಟ್ಟು ನೀರು ಕೊಟ್ಟು ಕಾಪಾಡೋ ಜನನಾಯಕನಿಗಾಗಿ ಜನ ಆಕಾಶ ನೋಡುತ್ತಿದ್ದಾರೆ.

ನೀರಿನ ರಾಜಕೀಯಕ್ಕೆ ಜನ ಬೇಸತ್ತಿದ್ದಾರೆ, ಬೀದಿ ಬೀದಿಗೆ ಒಂದೊಂದು ನ್ಯಾಯ ಒಂದೊಂದು ಕಾನೂನು. ಪಕ್ಕದ ಮನೇಲಿ ನೀರು ಬಂದ್ರೆ ಎದುರು ಮನೇಲಿ ನೀರಿಲ್ಲ, ಪಕ್ಕದ ಬೀದಿಲಿ ನೀರು ಬಂದ್ರೆ ಮುಂದಿನ ಬೀದಿಲಿ ನೀರಿಲ್ಲ. ಚುನಾವಣಾ ವಿಶೇಷ ಪೂರ್ತಿ ಬಂದಾಗಿದ್ದ ನೀರು ಇವತ್ತು ದರ್ಶನ ಕೊಟ್ಟಿದೆ.

ನೀರಿಲ್ಲದ ಸಮಯದಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಿ, ಜನರ ಕಷ್ಟಕ್ಕೆ ಆಗಬೇಕಿದ್ದ ಅಧಿಕಾರಿಗಳು ನಿದ್ದೆಯಿಂದ ಇನ್ನೂ ತೇರ್ಗಡೆಯಾಗಿಲ್ಲ. ಕೊನೆಗೆ ನಾವು ನೀರು ಬಿಡುವ ವಾಟರ್ ಮ್ಯಾನ್ ಅನ್ನು ವಿಚಾರಿಸಿದರೆ, ಕೊಡೋ ಉತ್ತರ ನಾನ್ ಏನ್ ಮಾಡ್ಲಿ ?ಇನ್ನು ಜಾಸ್ತಿ ಕೇಳಿದ್ರೆ ನನ್ನ ಇಷ್ಟ, ನನ್ನ ಕಾನೂನು ಅಂತ ಶುರುವಾಗಿ ಜಗಳಗಳೆ ಶುರುವಾಗುತ್ತದೆ.

ಮಾನ್ಯ ಶಾಸಕರೆ ಕುಡಿಯಲು ನೀರು ಕೊಡಿ, ಇಲ್ಲವೇ ವಿಷ ಕೊಡಿ.

ಶಾಸಕರೇ ನಿಮ್ಮಲ್ಲಿ ನಾವು ಕೇಳಿ ಕೊಳ್ಳುತ್ತಿರುವುದು ಇಷ್ಟೇ, ನಮಗೆ ಕುಡಿಯಲು ನೀರು ಕೊಡಿ, ನಮ್ಮ ಜೊತೆ ಜಾನುವಾರುಗಳೂ ಸಹ

Aravind-Limbavali

ನೀರಿಲ್ಲದೆ ಮೂಕವೇದನೆ ಅನುಭವಿಸುತ್ತಿವೆ, ಬಿಸಿಲಿನ ಬೇಗೆಗೆ ಅವುಗಳ ಮೈಮೇಲೆ ಒಂದು ಹನಿ ನೀರು ಸೋಕಿಸಲು ಸಾಧ್ಯವಾಗುತ್ತಿಲ್ಲ.

ಅಕಸ್ಮಾತ್ ನೀರಿನ ವ್ಯವಸ್ಥೆ ಮಾಡಲು ಸಾಧ್ಯವಾಗುವುದಿಲ್ಲ ಎಂದರೆ ದಯವಿಟ್ಟು ವಿಷಕೊಡಿ……ಇಂತಿ ನೀರಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು.

ಇಲ್ಲಿ ಯಾರನ್ನೂ ದೂಷಿಸುವ ಉದ್ದೇಶ ನಮ್ಮದಲ್ಲ, ಕುಡಿಯುವ ನೀರಿಗಾಗಿ……ಅಸಾಯಕ ಮನವಿ.

Follow us On

FaceBook Google News

Read More News Today