ಮೊಮ್ಮಗನ ಪರ ಅಖಾಡಕ್ಕಿಳಿದ ದೊಡ್ಡ ಗೌಡ್ರು

HD Deve Gowda Campaigning For His Grandson Nikhil Kumaraswamy Today

ಮೊಮ್ಮಗನ ಪರ ಅಖಾಡಕ್ಕಿಳಿದ ದೊಡ್ಡ ಗೌಡ್ರು – HD Deve Gowda Campaigning For His Grandson Nikhil Kumaraswamy Today

ಮಂಡ್ಯ : ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯ ಪರ ಪ್ರಚಾರಕ್ಕೆ ಇಂದು ಮಾಜಿ ಪ್ರಧಾನಿ ಹಾಗೂ ನಿಖಿಲ್ ಕುಮಾರಸ್ವಾಮಿಯ ತಾತ ಹೆಚ್.ಡಿ. ದೇವೇಗೌಡ ಕಣಕ್ಕಿಳಿಯಲಿದ್ದಾರೆ.

ಮೊಮ್ಮಗ ನಿಖಿಲ್ ಪರ ಪ್ರಚಾರ ನಡೆಸಲಿರುವ ಜೆ.ಡಿ.ಎಸ್ ವರಿಷ್ಠ ದೇವೇಗೌಡರು, ನೆನ್ನೆ ತನ್ನ ಇನ್ನೊಬ್ಬ ಮೊಮ್ಮಗನ ಪರ ಹಾಸನದಲ್ಲಿ ಪ್ರಚಾರ ನಡೆಸಿದ್ರು, ಈ ನಡುವೆ ಅವರೂ ಸಹ ತುಮಕೂರಿನಿಂದ ಸ್ಪರ್ಧಿಸುತ್ತಿದ್ದು, ತಮ್ಮ ಜೊತೆಯಲ್ಲಿ ತಮ್ಮ ಮೊಮ್ಮಕ್ಕಳನ್ನೂ ಗೆಲ್ಲಿಸಿಕೊಳ್ಳಲು, ಅವರ ಪರ ಪ್ರಚಾರದಲ್ಲೂ ಸಾಥ್ ನೀಡಿದ್ದಾರೆ.

ಸಧ್ಯ ಇಂದು ಮಂಡ್ಯದಲ್ಲಿ ಪ್ರಚಾರ ಕೈಗೊಳ್ಳುವ ದೇವೇಗೌಡರು ಕೆ.ಆರ್.ಪೇಟೆ, ಕೆ.ಆರ್.ನಗರ ಮತ್ತು ಶ್ರೀರಂಗ ಪಟ್ಟಣದಲ್ಲಿ ಮತಬೇಟೆ ನಡೆಸಲಿದ್ದಾರೆ. ದೇವೇಗೌಡರಿಗೆ ಮೂರೂ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಸಾಥ್ ನೀಡಲಿದ್ದಾರೆ. ಈ  ಮೂಲಕ ಮೊಮ್ಮಗನ ಗೆಲುವಿಗಾಗಿ ಮತ ಬೇಟೆ ನಡೆಸಲಿದ್ದಾರೆ.

ಜೆ.ಡಿ.ಎಸ್ ನ ಭದ್ರಕೋಟೆ ಎಂದೇ ಅನಿಸಿಕೊಂಡಿರುವ ಮಂಡ್ಯ ಕ್ಷೇತ್ರ ಈಗ ವರಿಷ್ಟರ ಮತ ಪ್ರಚಾರದಿಂದ ಮತ್ತೆ ಭದ್ರ ಪಡಿಸಿಕೊಳ್ಳುತ್ತದೆಯೇ, ದೇವೇಗೌಡರ ಪ್ರಚಾರ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ನೋಡಬೇಕಾಗಿದೆ.

ಇನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಸಹ ಭಾರಿ ಪ್ರಚಾರ ನಡೆಸುತ್ತಿರುವ ದರ್ಶನ್ ಮತ್ತು ಯಶ್ ಇಂದೂ ಸಹ ೨೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ.////

,