ನಾನು ಒಬ್ಬ ರೈತ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಾನು ಒಬ್ಬ ರೈತ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ – I am also a farmer, Says challenging star Darshan

ನಾನು ಒಬ್ಬ ರೈತ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಂಡ್ಯ : ಮೂರನೇ ದಿನವೂ ಸಹ ಮಂಡ್ಯ ರಾಜಕೀಯ ಸ್ಟಾರ್ ಪ್ರಚಾರದಿಂದ ರಂಗೇರಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ದರ್ಶನ್ ಮತ್ತು ಯಶ್ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದು ನಾಗಮಂಗಲ ತಾಲೂಕಿನಲ್ಲಿ ದರ್ಶನ್ ಪ್ರಚಾರ ಕೈಗೊಂಡರೆ, ಪಾಂಡವಪುರ ಸುತ್ತ ಮುತ್ತ ಯಶ್ ಮತಬೇಟೆ ನಡೆಸಲಿದ್ದಾರೆ.

ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್ ” ನಾನು ಒಬ್ಬ ರೈತ, ಇವತ್ತಿಗೂ ನನ್ನ ಗ್ರಾಮೀಣ ಬ್ಯಾಂಕ್ ಅಕೌಂಟ್ ಬೇಕಾದ್ರೆ ಪರಿಶೀಲಿಸಿ, ಆಗ ಗೊತ್ತಾಗುತ್ತೆ ಯಾರು ಏನು ಎಂಬುದು, ಹಾಗೆ ಎಲ್ಲಾ ಪಕ್ಷದಲ್ಲೂ ಎಲ್ಲರ ಪರ ಅಭಿಮಾನಿಗಳು ಇದ್ದೆ ಇರ್ತಾರೆ, ಆದರೆ ಅವರಿಗೆ ಒಬ್ಬರ ಮೇಲೆ ಅಭಿಮಾನ ಅಂತ ಬಂದಾಗ ಅವರು ಯಾವುದನ್ನೂ ಯಾರನ್ನೂ ಕೇರ್ ಮಾಡೋಲ್ಲ, ಎಂದರು.

ಇನ್ನು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಎಂ ಕುಮಾರಸ್ವಾಮಿ, ಯಾರು ಏನೇ ವಾಗ್ದಾಳಿ ಮಾಡಿದ್ರು , ಜನತೆ ನಮ್ಮ ಪರವಾಗಿದ್ದಾರೆ, ಜನತೆ ನಮಗೆ ವೋಟ್ ಹಾಕ್ತಾರೆ, ಮಂಡ್ಯದಲ್ಲಿ ನಮಗೇನು ಸಮಸ್ಯೆಗಳಿಲ್ಲ. ಕೆಲವು ಮಾಧ್ಯಮಗಳಲ್ಲಿ ಏನೇನೋ ಬಿಂಬಿಸಲಾಗುತ್ತಿದೆ, ಸುಂಟರಗಾಳಿ ಎದ್ದಿದೆ, ಆ ಗಾಳಿ ಎದ್ದಿದೆ ಎನ್ನುವುದು ಬಿಂಬಿತ, ಅಲ್ಲಿ ನಿಜಕ್ಕೂ ಯಾರು ದುಡಿಮೆ ಮಾಡುತ್ತಾರೆ ಎಂಬುದು ಜನಕ್ಕೆ ತಿಳಿದಿದೆ ಎಂದರು.

ಒಟ್ಟಿನಲ್ಲಿ ಕ್ಷಣ ಕ್ಷಣಕ್ಕು ಕುತೂಹಲ ಮೂಡಿಸುತ್ತಿರುವ ಮಂಡ್ಯ ರಾಜಕೀಯ ಕಣ ಎಲ್ಲಿಗೆ ಬಂದು ನಿಲ್ಲುತ್ತದೋ ಕಾದು ನೋಡಬೇಕಾಗಿದೆ.////