14 ತಿಂಗಳು ಕಾಂಗ್ರೆಸ್ ಗೆ “ಗುಲಾಮ” ನಂತೆ ಕೆಲಸ ಮಾಡಿದ್ದೇನೆ, ಆದರೆ . . .

I worked as a "slave" to Congress for 14 months, Says Ex Chief Minister Kumaraswamy

14 ತಿಂಗಳು ಕಾಂಗ್ರೆಸ್ ಗೆ “ಗುಲಾಮ” ನಂತೆ ಕೆಲಸ ಮಾಡಿದ್ದೇನೆ, ಆದರೆ . . .

ಕನ್ನಡ ನ್ಯೂಸ್ ಟುಡೇ – ಬೆಂಗಳೂರು : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಹದಿನಾಲ್ಕು ತಿಂಗಳ ಆಡಳಿತದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಗೆ ‘ಗುಲಾಮರಾಗಿ’ ಸೇವೆ ಸಲ್ಲಿಸಿದ್ದಾಗಿ ಹೇಳಿದ್ದಾರೆ. ನಿಗಮದ ಅಧ್ಯಕ್ಷರು ಸೇರಿದಂತೆ ಎಲ್ಲ ಶಾಸಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾಗಿ ತಿಳಿಸಿದ್ದಾರೆ. 

ಪ್ರತ್ಯೇಕವಾಗಿ ಸುದ್ದಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮಾತನಾಡಿದ ಕುಮಾರಸ್ವಾಮಿ ಅವರು ಶಾಸಕರು ಮತ್ತು ಅವರ ಮೈತ್ರಿ (ಕಾಂಗ್ರೆಸ್) ಗಾಗಿ 14 ತಿಂಗಳುಗಳಿಂದ “ಗುಲಾಮ” ನಂತೆ ಕೆಲಸ ಮಾಡಿದ್ದು, ಆದರೂ ತನ್ನನ್ನು ಏಕೆ ದೂಷಿಸಲಾಗುತ್ತಿದೆ ಎಂದು ತಿಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರಚನೆಯಾದಂತಹ ದಿನದಿಂದ ಕೆಲ ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಹೇಗೆ ವರ್ತಿಸಿದ್ದಾರೆಂದು ಎಲ್ಲರಿಗೂ ತಿಳಿದಿದೆ” ಎಂದು ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಶಾಸಕರ ಕ್ಷೇತ್ರಗಳಿಗಿಂತ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಹಣವನ್ನು ಮೀಸಲಿಟ್ಟಿದೆ ಎಂದು ಹೇಳಿದರು. ಯಾರೇ ಶಾಸಕರು ಸಹ ನನ್ನನ್ನು ಯಾವುದೇ ಅಪಾಯಿಂಟ್ಮೆಂಟ್ ಇಲ್ಲದೆ ಯಾವಾಗ ಬೇಕಾದರೂ ಭೇಟಿಯಾಗುತ್ತಿದ್ದರು ಮತ್ತು ತಮ್ಮ ಕ್ಷೇತ್ರಗಳಿಗೆ ಯಾವುದೇ ಕೆಲಸ ಮಾಡಲು ಕೇಳಿದ ಕೂಡಲೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಕಾಂಗ್ರೆಸ್ ಸರ್ಕಾರ ಮಾಡಿದ್ದಕ್ಕಿಂತ ಹೆಚ್ಚಾಗಿ ತಾನು ಮಾಡಿದ್ದೇನೆ, ಕಾಂಗ್ರೆಸ್ ಶಾಸಕರಿಗೆ 14 ತಿಂಗಳಲ್ಲಿ 19,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

14 ತಿಂಗಳು ಕಾಂಗ್ರೆಸ್ ಗೆ
ಕಾಂಗ್ರೆಸ್ ಪಕ್ಷದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸುವ ಬಗ್ಗೆ ತಮ್ಮ ಪಕ್ಷದ ಕೆಲವರಿಗೆ ಇಷ್ಟವಿಲ್ಲದಿದ್ದರೂ ಸರ್ಕಾರ ರಚಿಸಿದ್ದೇನೆ.
ಅವರು ನಂಭಿಕೆ ದ್ರೋಹ ಬಗೆಯುತ್ತಾರೆ ಎಂಬುದು ನಮ್ಮ ಪಕ್ಷಕ್ಕೆ ಮೊದಲೇ ತಿಳಿದಿತ್ತು, ಎಂದಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ತಾನು ಬಹಳ ಸಂತೋಷ ಮತ್ತು ನೆಮ್ಮದಿಯಾಗಿದ್ದೇನೆ ಎಂದಿದ್ದಾರೆ. ಮತ್ತೊಮ್ಮೆ ಭವಿಷ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಲು ನಮ್ಮ ಪಕ್ಷಕ್ಕೆ ಆಸಕ್ತಿ ಇಲ್ಲವೆಂದೂ, ಅಂತಹ ಸಂದರ್ಭ ಬಂದಾಗ ಏನು ಆಗುತ್ತದೋ ನೋಡೋಣ ಎಂದು ತಿಳಿಸಿದರು….////
Web Title : I worked as a “slave” to Congress for 14 months, Says Ex Chief Minister Kumaraswamy

Follow us On

FaceBook Google News