ಕೊಪ್ಪಳ ಏತ ನೀರಾವರಿ ಯೋಜನೆ 2715 ರೂ.ವೆಚ್ಚ 77 ಕೆರೆಗಳನ್ನು ತುಂಬಿಸಿ ಹನಿ ನೀರಾವರಿ ಅಳವಡಿಕೆ : ಸಚಿವ ಗೋವಿಂದ ಕಾರಜೋಳ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಅಂದಾಜು 8860 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈವರೆಗೆ 2715 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

ಬೆಳಗಾವಿ, ಸುವರ್ಣಸೌಧ, ಡಿ.21 ; ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಅಂದಾಜು 8860 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈವರೆಗೆ 2715 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಪ್ರೆಷರ್ ಪೈಪ್‌ಲೈನ್ ಡಿಸ್ಟಿçಬ್ಯೂಷನ್ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ 77 ಕೆರೆಗಳನ್ನು ತುಂಬಿಸಿ, ಹನಿ ನೀರಾವರಿ ಅಳವಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿ,ಮಾತನಾಡಿದರು.

ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಪ್ರಮುಖ ಏತ ನೀರಾವರಿ ಯೋಜನೆಯಾಗಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನ ಆರ್.ಎಲ್.487 ಮೀಟರಿನಿಂದ ಆರ್.ಎಲ್.660 ಮೀಟರ್‌ವರೆಗೆ ಎರಡು ಹಂತಗಳಲ್ಲಿ ನೀರನ್ನು ಲಿಫ್ಟ್ ಮಾಡಿ ಹನಿ ನೀರಾವರಿ ಪದ್ಧತಿ ಮೂಲಕ ಕೊಪ್ಪಳ, ಬಾಗಲಕೋಟ ಹಾಗೂ ಗದಗ ಜಿಲ್ಲೆಗಳ ಒಟ್ಟು 2.77 ಲಕ್ಷ ಎಕರೆ (1.12 ಲಕ್ಷ ಹೆಕ್ಟೇರ್) ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ.

ಕೊಪ್ಪಳ ಏತ ನೀರಾವರಿ ಯೋಜನೆ 2715 ರೂ.ವೆಚ್ಚ 77 ಕೆರೆಗಳನ್ನು ತುಂಬಿಸಿ ಹನಿ ನೀರಾವರಿ ಅಳವಡಿಕೆ : ಸಚಿವ ಗೋವಿಂದ ಕಾರಜೋಳ - Kannada News

ಈಗಾಗಲೇ ಯೋಜನೆಯ ಮೊದಲನೇ ಮುಖ್ಯ ಸ್ಥಾವರ, ಎರಡನೇ ಮುಖ್ಯ ಸ್ಥಾವರ ಹಾಗೂ 220 ಕೆ.ವಿ.ಪವರ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಅಚ್ಚುಕಟ್ಟು ವ್ಯಾಪ್ತಿಯ 77 ಕೆರೆಗಳನ್ನು ತುಂಬಿಸುವ 3 ಪ್ಯಾಕೇಜ್ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ . ವಿದ್ಯುತ್ ಪೂರೈಕೆಗೆ ಕೋರಲಾಗಿದೆ ಅವರು ಡಿಮಾಂಡ್ ನೋಟ್ ಕಳಿಸಿದ ಕೂಡಲೇ 6 ಕೋಟಿ ರೂ.ಪಾವತಿಸಿ,ಟ್ರಯಲ್ ರನ್ ಮಾಡಲಾಗುವುದು ಎಂದರು.

ಕೊಪ್ಪಳ ಏತ ನೀರಾವರಿ ಯೋಜನೆಗೆ 8860 ಕೋಟಿ ರೂ.ಅಂದಾಜಿಸಲಾಗಿದೆ.ಯೋಜನೆಯ ಪ್ರಾರಂಭದಿಂದ ಇಲ್ಲಿಯವರೆಗೆ 2715 ಕೋಟಿ ರೂ.ವೆಚ್ಚ ಮಾಡಲಾಗಿದೆ.ಯೋಜನೆಯ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಿಸಲಾಗಿದೆ.ಆಲಮಟ್ಟಿ ಜಲಾಶಯದ ಮಟ್ಟವನ್ನು 519 ಮೀಟರುಗಳಿಂದ 524 ಮೀಟರಿಗೆ ಎತ್ತರಿಸಿದಾಗ ಶೇಖರಣೆಯಾಗುವ ನೀರಿನ ಪ್ರಮಾಣದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಬಳಕೆ ಮಾಡಲು ಯೋಜಿಸಲಾಗಿದೆ.

ಜಲಾಶಯದ ಎತ್ತರಿಸುವಿಕೆಯು ಕೃಷ್ಣಾ ನ್ಯಾಯಾಧೀಕರಣ 2 ರ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆಗೆ ಒಳಪಟ್ಟಿದೆ.ತೀರ್ಪು ಕೇಂದ್ರ ಸರ್ಕಾರದ ಅಧಿಸೂಚನೆಯಾಗಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಸರ್ಕಾರವು ನೀಡಿರುವ ಆಡಳಿತಾತ್ಮಕ ಅನುಮೋದನೆ ಮೇರೆಗೆ ಪೂರ್ವಸಿದ್ಧತೆಯಾಗಿ 9 ಉಪ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕಾರಜೋಳ ಹೇಳಿದರು.

ಬಾಲವೇ ನಾಯಿಯನ್ನು ಅಲ್ಲಾಡಿಸುತ್ತಿದೆ; ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಮರೇಗೌಡ ಬಯ್ಯಾಪುರ ಅವರು,ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನವೇ ಅಧಿಕಾರಿಗಳು ಗುತ್ತಿಗೆದಾರರಿಗೆ ಕಂಪ್ಲೀಷನ್ ಪ್ರಮಾಣ ಪತ್ರ ನೀಡಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಮುನ್ನವೇ ಯಂತ್ರೋಪಕರಣಗಳು ದುರಸ್ತಿಗೆ ಬಂದಿವೆ. ವಾಸ್ತವವಾಗಿ ನಾಯಿ ಬಾಲವನ್ನು ಅಲ್ಲಾಡಿಸುತ್ತದೆ ಆದರೆ ಇಲ್ಲಿ ಗುತ್ತಿಗೆದಾರರು ಹೇಳಿದಂತೆ ಅಧಿಕಾರಿಗಳು ಕೇಳಿರುವುರಿಂದ ಬಾಲವೇ ನಾಯಿಯನ್ನು ಅಲ್ಲಾಡಿಸಿದಂತಾಗಿದೆ ಎಂದರು.

Follow us On

FaceBook Google News