ಹೊಸಕೋಟೆ ಸೇರಿದಂತೆ ಹಲವೆಡೆ ಐಟಿ ದಾಳಿ
IT attacks in many places, including Hoskote Bangalore
[story-lines]
ಹೊಸಕೋಟೆ ಸೇರಿದಂತೆ ಹಲವೆಡೆ ಐಟಿ ದಾಳಿ
ಈ ಹಿಂದೆ ದಾಳಿ ನಡೆದಾಗ ಖುದ್ದು ಮುಖ್ಯಮಂತ್ರಿಗಳೇ, ದೋಸ್ತಿ ನಾಯಕರ ಜೊತೆ ಸೇರಿ ಪ್ರತಿಭಟಿಸಿದ್ದು ನೆನೆಯಬಹುದು. ಅಲ್ಲದೇ ನಮ್ಮನ್ನೇ ಟಾರ್ಗೆಟ್ ಮಾಡಲಾಗುತ್ತಿದೆ, ಇದೆಲ್ಲಾ ಬಿ.ಜೆ.ಪಿ ಬೆಂಬಲಿತ ದಾಳಿಯಾಗಿದೆ ಎಂದು ದೂಷಿಸಿದ್ದರು. ಐಟಿ ಇಲಾಖೆಯ ಮುಂದೆಯೇ ಪ್ರತಿಭಟಿಸಲಾಗಿತ್ತು. ಕೇಂದ್ರದ ತಾಳಕ್ಕೆ ಐಟಿ ಅಧಿಕಾರಿಗಳು ಕುಣಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇಷ್ಟಕ್ಕೆ ಐಟಿ ಅಧಿಕಾರಿಗಳು ತಣ್ಣಗಾಗಬಹುದು ಎಂದುಕೊಂಡಿದ್ದವರಿಗೆ ಐಟಿ ಅಧಿಕಾರಿಗಳು ಮತ್ತೆ ಶಾಕ್ ನೀಡಿದ್ದಾರೆ. ಇದೀಗ ಐಟಿ ಅಧಿಕಾರಿಗಳ ಸೆಕೆಂಡ್ ಇನ್ನಿಂಗ್ಸ್ ಶುರವಾಗಿದೆ. ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕ ಸಭಾಚುನಾವಣೆಯ ಹಿನ್ನೆಲೆ ಭ್ರಷ್ಟರ ಹಿಂದೆ ಬಿದ್ದಿದ್ದಾರೆ ಆಧಾಯ ತೆರಿಗೆ ಇಲಾಖೆ ಅಧಿಕಾರಿಗಳು. ಮಂಡ್ಯ, ಉಡುಪಿ ಸೇರಿದಂತೆ ಬೆಂಗಳೂರಿನ ಹೊಸಕೋಟೆಯಲ್ಲಿ ಐಟಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ಮೊನ್ನೆ ಮಂಡ್ಯದಲ್ಲಿ ಜೆಡಿಎಸ್ ಬೆಂಬಲಿತ ಮುಖಂಡರಿಗೆ ಶಾಕ್ ನೀಡಿದ್ದ ಐಟಿ ಇಲಾಖೆ, ಇದೀಗ ಸುಮಲತಾ ಬೆಂಬಲಿಗನಿಗೆ ಶಾಕ್ ನೀಡಿದೆ.
ಸುಮಲತಾ ಬೆಂಬಲಿಗ ಹಾಗೂ ಕೆ.ಆರ್.ಪೇಟೆ ಪುರಸಭೆಯ ಮಾಜಿ ಅಧ್ಯಕ್ಷ್ಯ ಕೆ.ಟಿ.ಚಕ್ರಪಾಣಿಗೆ ಐಟಿ ಬಿಸಿ ಮುಟ್ಟಿಸಿದೆ. ಜೊತೆಗೆ ಉಡುಪಿಯ ಫೈನಾನ್ಸ್ ಮ್ಯಾನೇಜರ್ ಮತ್ತು ಸಿ.ಎಂ.ಆಪ್ತ ಹಾಗೂ ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ಹೊಸಕೋಟೆ ಶ್ರೀಧರ್ ಗೆ ಐಟಿ ಇಲಾಖೆ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹೊಸಕೋಟೆಯಲ್ಲಿರುವ ಶ್ರೀಧರ್ ಮನೆ ಮೇಲೆ ಒಟ್ಟು ೧೮ ಅಧಿಕಾರಿಗಳಿಂದ ದಾಳಿ ನಡೆದಿದೆ. ಆದರೆ ದಾಳಿವೇಳೆ ಶ್ರೀಧರ್ ರವರ ಮನೆಯಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ.
ಇಂದು ಕೂಡ ಹಲವೆಡೆ ದಿಡೀರ್ ದಾಳಿ ನಡೆಯುವ ಸಾಧ್ಯತೆ ಇದ್ದು, ಐಟಿ ಅಧಿಕಾರಿಗಳು ಇಂಚಿಂಚು ಬಿಡದೆ ಶೋಧಕಾರ್ಯಕ್ಕೆ ಇಳಿದಿದ್ದಾರೆ.
Follow us On
Google News |