ಶಿರಾ ಚುನಾವಣೆ: ಜೆಡಿಎಸ್ ಗೆಲುವು ನಿಶ್ಚಿತ

ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಒಂದು ಸ್ಥಾನದ ಗೆಲುವಿನಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

( Kannada News Today ) : ಹಾಸನ : ಶಿರಾ ಚುನಾವಣೆ: ಜೆಡಿಎಸ್ ಗೆಲುವು ನಿಶ್ಚಿತ : ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಒಂದು ಸ್ಥಾನದ ಗೆಲುವಿನಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಚುನಾವಣೆ ವೇಳೆ ನೀರು ಕೊಡುತ್ತೇವೆ ಎನ್ನುತ್ತಾರೆ, ಈ ಹಿಂದೆ ಬಿಜೆಪಿಯ ಮೂವರು ಶಾಸಕರೇ ಕೃಷ್ಣ ಬೇಸಿಗ್‌ಗೆ ಸೇರುತ್ತದೆ ನೀರು ಕೊಡಲು ಬರಲ್ಲ ಎಂದು ವಿರೋಧ ಮಾಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೀಸಲು ಕೊಡಿ

ಸರಕಾರಿ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳಿಗೆ ಮೀಸಲು ನೀಡಬೇಕು, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಶೇ.7.5 ಮೀಸಲು ನೀಡಿದೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಕಾರದಲ್ಲಿ ಇರುವ ಬಿಜೆಪಿಗೆ ಏಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಮೂಲ ಸೌಲಭ್ಯವಿಲ್ಲದೆ , ಖಾಸಗಿ ಶಾಲೆಯ ಒತ್ತಡಕ್ಕೆ ಮಣಿದು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ, ಲಾಕ್‌ಡೌನ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬದವರು ಮಕ್ಕಳನ್ನು ಓದಿಸಲು ಏನು ಮಾಡಬೇಕು ಎಂಬುದನ್ನು ಚಿಂತಿಸಿ ಸರಕಾರಿ ಶಾಲೆಗೆ ಸರಕಾರ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು, ಶಿಕ್ಷಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಆಕ್ರೋಶ

ಶಿಕ್ಷಣ ಸಂಸ್ಥೆ ಕಟ್ಟಿ ಹಣ ಲೂಟಿ ಮಾಡುವ ಪ್ರೊ.ದೊರೆಸ್ವಾಮಿ ಅವರೊಬ್ಬರು ಶಿಕ್ಷಣ ತಜ್ಞರಂತೆ, ಸರಕಾರದ ಸಲಹೆಗಾರರಂತೆ ಅವರ ಕೊಡುಗೆ ಏನು ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲೂ ಮೂಲ ಸೌಲಭ್ಯವಿಲ್ಲ, ಪ್ರಾಂಶುಪಾಲರು, ಉಪನ್ಯಾಸಕರು ಇಲ್ಲ, ಕಡೆಪಕ್ಷ ಅಂತಹ ಶಾಲೆ, ಕಾಲೇಜುಗಳನ್ನು ದತ್ತು ನೀಡಿ ಆ ಮೂಲಕವಾದರೂ, ಅಭಿವೃದ್ಧಿಗೆ ಶ್ರಮಿಸಿ ಬಡ ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಮನವಿ ಮಾಡಿದರು.