ಮುಂದೆಯೂ ನೀವೇ ಸಿಎಂ ಆಗ್ಬಿಡಿ – ಶಾಸಕ ಯತ್ನಾಳ್

ವೇದಿಕೆಯಲ್ಲಿ ಭಾಷಣದ ವೇಳೆ ಯತ್ನಾಳ್ ಅವರ ಕಡೆ ನೋಡಿ ಸಿಎಂ ಕೈ ಮುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಯತ್ನಾಳ್ `ನಾವೇನು ತಕರಾರು ಮಾಡಲ್ಲ. ಮುಂದೆಯೂ ಸಿಎಂ ಆಗಿಬಿಡಿ’ ಎಂದು ಹೇಳಿದರು.

Online News Today Team

ಮುಖ್ಯಮಂತ್ರಿ ಯಾರಾದರೂ ತಮ್ಮ ತಕರಾರು ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ತಾಳಿಕೋಟೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಬೂದಹಾಳ ತೀರಾಪೂರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, `ಬೊಮ್ಮಾಯಿಯವರೇ ಸಿಎಂ ಆಗಲು ನಮ್ಮ ತಕರಾರು ಇಲ್ಲ. ಈ ರೀತಿ ಮಾಡುವ ಜನರು ನಾವಲ್ಲ. ಮುಂದಿನ ಮುಖ್ಯಮಂತ್ರಿಯೂ ನೀವೇ ಆಗಿ’ ಎಂದು ಹೇಳಿದರು.

`ನಾವು ಏನೂ ಆಗುವುದಿಲ್ಲ ಎಂದಾದ ಮೇಲೆ ತಕರಾರು ಮಾಡಿ ಏನು ಪ್ರಯೋಜನ’ ಎಂದರು. ಯತ್ನಾಳ್ ಅವರ ಮಾತಿಗೆ ಸಿಎಂ ನಸುನಕ್ಕು ಸುಮ್ಮನಾದರು. ಇನ್ನು ವೇದಿಕೆಯಲ್ಲಿ ಭಾಷಣದ ವೇಳೆ ಯತ್ನಾಳ್ ಅವರ ಕಡೆ ನೋಡಿ ಸಿಎಂ ಕೈ ಮುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಯತ್ನಾಳ್ `ನಾವೇನು ತಕರಾರು ಮಾಡಲ್ಲ. ಮುಂದೆಯೂ ಸಿಎಂ ಆಗಿಬಿಡಿ’ ಎಂದು ಹೇಳಿದರು.

Follow Us on : Google News | Facebook | Twitter | YouTube