Breaking, ಲಾಕ್‌ಡೌನ್ ಸಡಿಲಿಕೆ, ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ಸಡಿಲಿಕೆ

lockdown relaxation in Karnataka from Midnight

🌐 Kannada News :

ಲಾಕ್‌ಡೌನ್ ಸಡಿಲಿಕೆ, ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ಸಡಿಲಿಕೆ

ಬೆಂಗಳೂರು : ಮಹಾಮಾರಿ ಕೊರೊನಾವೈರಸ್ ಹಿನ್ನೆಲೆ ಜಾರಿಯಾಗಿದ್ದ ಲಾಕ್ ಡೌನ್ ಇಂದು ಮಧ್ಯರಾತ್ರಿಯಿಂದ ಸ್ವಲ್ಪ ಸಡಿಲಿಕೆಯಾಗಲಿದೆ, ಕೊರೋನಾ ವಿರುದ್ಧದ ಹೋರಾಟದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ನಿಯಮಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಕರ್ನಾಟಕದಲ್ಲಿ ಸಾಕಷ್ಟು ಸಡಿಲಿಕೆಯಾಗಿದೆ. ಆದರೆ ಈ ವಿನಾಯ್ತಿ ಯಾವುದೇ ಹಾಟ್ ಸ್ಪಾಟ್ ಗಳಿಗೆ ಅನ್ವಹಿಸುವುದಿಲ್ಲ.

ರಾಜ್ಯ ಸರ್ಕಾರ ವಿವೇಚನೆಯಿಂದ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯದಂತೆ, ಕರ್ನಾಟಕದ ಆರ್ಥಿಕ ಪರಿಸ್ಥಿತಿಯ ಚಿಂತನೆ ಮಾಡಿ ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.. ಸಧ್ಯ ಅಗತ್ಯ ವಲಯಗಳಿಗೆ ಲಾಕ್ ಡೌನ್ ಸಡಿಲಿಕೆ ನೀಡಿದೆ.

ಇಂದು ಮಧ್ಯರಾತ್ರಿ ಲಾಕ್ ಡೌನ್ ಸಡಿಲಿಕೆ ರೆಡ್‌ ಜೋನ್, ಕಂಟೇನ್‌ಮೆಂಟ್ ಜೋನ್‌, ಹಾಟ್‌ಸ್ಪಾಟ್ ಪ್ರದೇಶಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ.

ಲಾಕ್‌ಡೌನ್ ಸಡಿಲಿಕೆ, ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ಸಡಿಲಿಕೆ
ಲಾಕ್‌ಡೌನ್ ಸಡಿಲಿಕೆ, ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ಸಡಿಲಿಕೆ

ಆರೋಗ್ಯ ಕ್ಷೇತ್ರಗಳಿಗೆ ಅನ್ವಹಿಸುವ ಎಲ್ಲಾ ವ್ಯವಹಾರಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ, ಲಾರಿ ರಿಪೇರಿ ಅಂಗಡಿ, ಡಾಬಾ, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ಸ್, ಪ್ಲಂಬರ್​ಗಳು, ಬಡಗಿ, ಮೋಟರ್ ರಿಪೇರಿ, ಆಹಾರ ಸಂಸ್ಕರಣ ಘಟಕ, ಪ್ಯಾಕೇಜಿಂಗ್​ ಘಟಕಗಳು, ಗ್ರಾಮೀಣ ಭಾಗದಲ್ಲಿ ರಸ್ತೆ, ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಆನ್​ಲೈನ್​ ಡೆಲಿವರಿಗೆ, ಕೃಷಿ ಚಟುವಟಿಕೆಗಳಿಗೆ ವಿನಾಯ್ತಿ ಲಭ್ಯವಾಗಿದೆ. ಕೋಳಿ ಕುರಿ ಸಾಕಾಣಿಕೆ ಪಾರ್ಮ್ ಗಳಿಗೂ ವಿನಾಯಿತಿ…

ಹಾಲು ಸಂಗ್ರಹ, ಸಂಸ್ಕರಣೆ, ವಿತರಣೆಗೆ ಮತ್ತು ಮಾರಾಟಕ್ಕೆ ಅವಕಾಶ, ಎಪಿಎಂಸಿ ಮೂಲಕ ಕಾರ್ಯ ನಿರ್ವಹಿಸುವ ಮಂಡಿಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ, ಆಸ್ಪತ್ರೆ, ಕ್ಲಿನಿಕ್, ಟೆಲಿ ಮೆಡಿಸನ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಕೃಷಿ ಉಪಕರಣಗಳು ಮತ್ತು ಕೃಷಿ ಬಿಡಿ ಭಾಗಗಳ ಅಂಗಡಿಗಳು ತೆರೆಯಲು ಅನುಮತಿ. ಇಂದು ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಸಡಿಲಿಕೆ ಆಗಲಿದೆ…

ಲಾಕ್‌ಡೌನ್ ಸಡಿಲಿಕೆ ಯಾವ ಸೇವೆ ಇರುವುದಿಲ್ಲ ?

ಆಟೋ, ಕ್ಯಾಬ್, ಚಿತ್ರಮಂದಿರ, ಮಾಲ್​ಗಳು ಇರುವುದಿಲ್ಲ, ಬಿಎಂಟಿಸಿ ಬಸ್, ಆಟೋ, ಕ್ಯಾಬ್ ಸಂಚಾರ ಕೂಡ ಸ್ಥಗಿತ, ಮೆಟ್ರೋ ಟ್ರೈನ್ ಸಂಚಾರ ಸಹ ಸ್ಥಗಿತ. ಚಿತ್ರಮಂದಿರ, ಮಾಲ್​, ಸಲೂನ್ ,ಜಿಮ್ ಸೇವೆ ಇರುವುದಿಲ್ಲ. ಬಸ್​, ರೈಲು, ಮೆಟ್ರೋ, ವಿಮಾನ ಸಂಚಾರ ಇರುವುದಿಲ್ಲ. ಧಾರ್ಮಿಕ ಸಭೆ-ಸಮಾರಂಭಗಳು, ಅಥವಾ ಜನರು ಗುಂಪು ಗುಂಪಾಗಿ ಸೇರಲು ಅನುಮತಿ ಇರುವುದಿಲ್ಲ.

 

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile