ಸಿಂಹ ಘರ್ಜನೆಗೆ ನಲುಗುತ್ತಿರುವ ದೋಸ್ತಿಗಳು, ಬಿಜೆಪಿಗೆ ಭಾರಿ ಮುನ್ನಡೆ

Lok Sabha elections 2019, BJP lead

ಸಿಂಹ ಘರ್ಜನೆಗೆ ನಲುಗುತ್ತಿರುವ ದೋಸ್ತಿಗಳು, ಬಿಜೆಪಿಗೆ ಭಾರಿ ಮುನ್ನಡೆ – Lok Sabha elections 2019, BJP lead

ಸಿಂಹ ಘರ್ಜನೆಗೆ ನಲುಗುತ್ತಿರುವ ದೋಸ್ತಿಗಳು, ಬಿಜೆಪಿಗೆ ಭಾರಿ ಮುನ್ನಡೆ..!

ಬೆಂಗಳೂರು : ರಾಜ್ಯದ ಲೋಕ ಸಮರ ಜಿದ್ದಾಜಿದ್ದಿನಿಂದ ಕೂಡಿದ್ದು ಬಿಜೆಪಿಯ ಸಿಂಹ ಪ್ರಧಾನಿ ನರೇಂದ್ರ ಮೋದಿ ಘರ್ಜನೆಗೆ ದೋಸ್ತಿ ಪಕ್ಷಗಳಿಗೆ ಭಾರೀ ಮುಖಭಂಗವಾಗಿದ್ದು, ಬಿಜೆಪಿ ನಿರೀಕ್ಷೆಗೂ ಮೀರಿದ ಮುನ್ನಡೆ ಸಾಧಿಸಿದೆ.

ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಕೇವಲ ಆರು ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ಚುನಾವಣೆಗೂ ಮುನ್ನವೇ ದೇಶದ ಗಮನ ಸೆಳೆದಿದ್ದ ಸಕ್ಕರೆ ನಾಡು ರೆಬಲ್ ಕೋಟೆ ಎಂದೇ ಹೆಸರಾದ ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮೊದಲ ಎರಡು ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.

ತೀವ್ರ ಸ್ಪರ್ಧೆಯೊಡ್ಡುತ್ತಿರುವ ಸುಮಲತ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಹಾವು-ಏಣಿ ಆಟ ನಡೆದಿದ್ದು ನಂತರದಲ್ಲಿ ಸುಮಲತಾ ಅಂಬರೀಶ್ ಸಾಕಷ್ಟು ಮತಗಳಿಂದ ಮುಂದಿರುವುದು ಎಲ್ಲರ ಗಮನ ಸೆಳೆದಿದೆ.

ಬಿಜೆಪಿಯ ಸಿಂಹ ಪ್ರಧಾನಿ ನರೇಂದ್ರ ಮೋದಿಯ ಘರ್ಜನೆಗೆ ಲೋಕಸಭಾ ಚುನಾವಣಾ ಪ್ರತಿ ಕ್ಷೇತ್ರಗಳಲ್ಲೂ ಸಹ ಬಿಜೆಪಿ ಗೆಲುವು ಸಾಧಿಸುತ್ತಿರುವುದು ಊಹೆಗೂ ನಿಲುಕದ ಒಂದು ಸಾಧನೆಯಾಗಿದೆ////