“ಗಂಡೆದೆಯ ನಾಡು ಬಾಗಲಕೋಟೆಯಲ್ಲಿ ಕೈ-ಕಮಲದ ನಡುವೆ ಮಹಾ ಯುದ್ಧ ಪ್ರಾರಂಭ”

Lok Sabha War Between the Congress and BJP in Bagalkot

“ಗಂಡೆದೆಯ ನಾಡು ಬಾಗಲಕೋಟೆಯಲ್ಲಿ ಕೈ-ಕಮಲದ ನಡುವೆ ಮಹಾ ಯುದ್ಧ ಪ್ರಾರಂಭ” – Lok Sabha War Between the Congress and BJP in Bagalkot

ಬಾಗಲಕೋಟೆ : ಬಿಜೆಪಿಯಿಂದ ಪಿಸಿ ಗದ್ದಿಗೌಡರ್ ರಣರಂಗದಲ್ಲಿ ಇದ್ದು ಅವರ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ್ ರಣರಂಗದಲ್ಲಿ ಉಳಿದಿದ್ದಾರೆ. ನಾಮಪತ್ರ ಸಲ್ಲಿಸಿದ ದಿನದಿಂದಲೂ ಕೈ-ಕಮಲದ ನಡುವೆ ಪ್ರಚಾರ ಕಾರ್ಯ ಜೋರಾಗಿ ಸಾಗುತ್ತಿದ್ದು ಎರಡು ಪಕ್ಷಗಳ ನಡುವೆ ಮಹಾಸಮರ ಪ್ರಾರಂಭವಾದ ಹಾಗೆ ಕಾಣುತ್ತಿದೆ.

ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯ ನರಗುಂದ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಜಮಖಂಡಿ ಬದಾಮಿ ಹೊರತುಪಡಿಸಿದರೆ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಪಿಸಿ ಗದ್ದಿಗೌಡರ್ ಅವರಿಗೆ ಗೆಲುವು ಖಚಿತ ಎಂದುಕೊಂಡು ನಾಯಕರಿಗೆ ಸವಾಲಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ವೀಣಾ ಕಾಶಪ್ಪನವರ್ ರಣರಂಗದಲ್ಲಿ ಪೈಪೋಟಿಯಾಗಿ ಉಳಿದಿದ್ದಾರೆ.

ಬಿಜೆಪಿ ಪಕ್ಷದ ಪ್ರಚಾರಕ್ಕೆ ಬೆನ್ನೆಲುಬಾಗಿ ಭೀಷ್ಮನಂತೆ ಶ್ರೀ ಬಿ ಎಸ್ ಯಡಿಯೂರಪ್ಪ ನಿಂತಿದ್ದಾರೆ, ಆದರೂ ಸಹ ಈ ಸಾರಿ ಗೆಲುವು ತುಂಬಾ ಕಷ್ಟ, ಕಾರಣ ಅವರ ಬಿಜೆಪಿ ಪಕ್ಷದ ಅಭಿವೃದ್ಧಿ ಆಗದ ಕಾರ್ಯ ಗಳು. ಹಾಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಪಿ ಸಿ ಗದ್ದಿಗೌಡರ್ ಇವರಿಗೆ ರಾಜಕೀಯ ಕುಟುಂಬದ ಹಿನ್ನೆಲೆ ಇರುವ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಕಣದಲ್ಲಿದ್ದಾರೆ.

ಜೊತೆಗೆ ಮಾಜಿ ಮುಖ್ಯಮಂತ್ರಿಗಳು ಸೋಲಿಲ್ಲದ ಸರದಾರ ಮಣ್ಣಿನ ಮಗ ಅರ್ಜುನನ ಅಂತೆ ಪಾರಂಗತರಾದ ಶ್ರೀ ಸಿದ್ದರಾಮಯ್ಯ ಅವರು ಬೆನ್ನೆಲುಬಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶೇಷ.

2004 2009 2014ರ ಮೂರು ವರ್ಷಗಳಲ್ಲಿ ಸತತವಾಗಿ ಮೂರು ಬಾರಿ ಆಯ್ಕೆಯಾದರೂ ಸಹ ಯಾವುದೇ ಅಭಿವೃದ್ಧಿ ಕಾರ್ಯ ಆಗದ ಕಾರಣ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಗೆಲ್ಲುವುದು ತುಂಬಾ ಕಷ್ಟವಾಗಿದೆ. ಕಾಂಗ್ರೆಸ್ಸಿನ ಎಲ್ಲಾ ನಾಯಕರು ಗಳು ಒಟ್ಟಾಗಿ ಸೇರಿ ಹಗಲಿರುಳೆನ್ನದೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅನ್ನು ಗೆಲ್ಲಿಸಲು ಪ್ರಯತ್ನ ನಡೆಸಿರುವುದು ಒಂದು ರೀತಿಯಲ್ಲಿ ಎರಡು ಪಕ್ಷಗಳ ನಡುವೆ ನಡೆಯುವ ಸಮರ ದಂತೆ ಕಾಣುತ್ತಿದೆ.///ವರದಿ : ರವಿಕುಮಾರ ಮುರಾಳ