ಕೇವಲ ಡೈಲಾಗ್ ಗೆ ಮನಸೋಲ್ತಾರ ಜನ ? ಇಲ್ಲ ಅನ್ನುತ್ತೆ ಈ ವರದಿ

Mandya people will attract only for dialogue

ಕೇವಲ ಡೈಲಾಗ್ ಗೆ ಮನಸೋಲ್ತಾರ ಜನ ? ಇಲ್ಲ ಅನ್ನುತ್ತೆ ಈ ವರದಿ – Mandya people will attract only for dialogue – Kannada News

ಕೇವಲ ಡೈಲಾಗ್ ಗೆ ಮನಸೋಲ್ತಾರ ಜನ ? ಇಲ್ಲ ಅನ್ನುತ್ತೆ ಈ ವರದಿ

ಬಹಿರಂಗ ಚುನಾವಣಾ ಪ್ರಚಾರಕ್ಕೆ ಏನಿದ್ರೂ ಇವತ್ತು ಮತ್ತು ನಾಳೆ ಮಾತ್ರ ಅವಕಾಶ ಇದ್ದು, ಏನೇ ಸರ್ಕಸ್ ಮಾಡೋದಾದ್ರೂ ಇವತ್ತೇ ಮಾಡ ಬೇಕಾಗುತ್ತದೆ. ಶತಾಯಗತಾಯ ಮಗನ ಗೆಲ್ಲಿಸಿಕೊಳ್ಳಲೇ ಬೇಕೆಂದು, ಕುಮಾರಸ್ವಾಮಿ 24×7 ಓಡಾಡ್ತಾನೆ ಇದ್ದಾರೆ.

ಇನ್ನೊಂದೆಡೆ, ರಾಜಕೀಯಕ್ಕೆ ಸಿನಿ ಬಣ್ಣ ಕೊಟ್ಟ, ಸುಮಲತಾ ಪರ ಪ್ರಚಾರದಲ್ಲಿ ತೊಡಗಿರುವ ದರ್ಶನ್ ಮತ್ತು ಯಶ್, ಅಭಿಮಾನಿಗಳನ್ನು ಸೆಳೆಯಲು ಡೈಲಾಗ್ ಮೇಲೆ ಡೈಲಾಗ್ ಹೊಡಿತಾ ಇದ್ದಾರೆ, ಇಲ್ಲಿ ಜನ ನಿಜಕ್ಕೂ ಸುಮಲತಾ ಪರ ಒಲವು ತೋರುತ್ತಿದ್ದಾರಾ ಅಥವಾ ಸಿನಿಮಾ ಡೈಲಾಗ್ ಗಳಿಂದ ಮನೋರಂಜನೆ ಪಡೆಯುತ್ತಿದ್ದಾರಾ ? ಇದುವೇ ಯಕ್ಷ ಪ್ರಶ್ನೆ ?

ಈ ಪ್ರಶ್ನೆಗೆ ಸದ್ಯ ಯಾರಲ್ಲೂ ಉತ್ತರ ಇಲ್ಲ ಬಿಡಿ. ಕಾರಣ ಮತದಾರ ನಿಜಕ್ಕೂ ಯಾರ ಕೈ ಹಿಡಿಯುತ್ತಾನೋ, ಚುನಾವಣಾ ಫಲಿತಾಂಶ ಹೊರ ಬೀಳೋವರೆಗೂ ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೊನೆಗಳಿಗೆಯಲ್ಲಿ ಯಾರ ರಾಜಕೀಯ ತಂತ್ರ ಫಲ ಕೊಡುತ್ತದೋ ಆ ದೇವರಿಗೇ ಗೊತ್ತು.

ಇತ್ತ ಮಾಜಿ ಪ್ರಧಾನಿ, ಹಾಗೂ ಜೆಡಿಎಸ್ ಮುಖ್ಯ ವರಿಷ್ಠ ದೇವೇಗೌಡ, ಕುಮಾರಸ್ವಾಮಿ ಸೇರಿದಂದೆ ನಿಖಿಲ್ ಸಹ ಜನರಿಗೆ ಭರ್ಜರಿ ಆಶ್ವಾಸನೆಗಳ ಮಹಾಪೂರವನ್ನೇ ಬಿಚ್ಚಿಡುತ್ತಿದ್ದಾರೆ. ಒಮ್ಮೆ ಅವಕಾಶ ಕೊಟ್ಟು ನೋಡಿ, ನಿಖಿಲ್ ನಿಮ್ಮ ಮನೆ ಮಗನಾಗಿ ಇರುತ್ತಾನೆ ಎಂಬ ಹೇಳಿಕೆಗಳು ಮತದಾರರ ಮನಸ್ಸಿಗೆ ಹತ್ತಿರ ಆಗಿದೆಯೇ ಎನ್ನುವುದನ್ನು ನೋಡಿದರೆ ಅತ್ತ ಸುಮಲಾತ ಹಿಂದಿರುವ ದೊಡ್ಡ ಶಕ್ತಿ ಕಲಿಯುಗ ಕರ್ಣ ಅಂಬರೀಶ್.

ಏನೇ ಆಗಲಿ, ಚುನಾವಣಾ ಕಾರಣಕ್ಕಾದರೂ ತಮ್ಮ ನೆಚ್ಚಿನ ಸಿನಿ ನಟರ ನೋಡೋ ಅವಕಾಶ ಸಿಕ್ತಲ್ಲಾ , ನಮ್ಮ ಊರಲ್ಲೇ ನಮ್ಮ ಮಧ್ಯೆಯೇ ನಿಂತು ನಮಗಾಗಿ ಡೈಲಾಗ್ ಹೊಡೆದರಲ್ಲಾ , ಅಂತ ಅಭಿಮಾನಿಗಳು ಸಕತ್ ಖುಷಿಯಾಗಿದ್ದಾರೆ. ಅಲ್ಲದೆ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಫಿಗಳನ್ನ ತಮ್ಮ ಪೇಸ್ ಬುಕ್ ಅಲ್ಲಿ ಆಕ್ಕೊಂಡು ಸಕತ್ ಬೀಗುತ್ತಿದ್ದಾರೆ.

ಏನೇ ಆಗಲಿ ರಾಜ್ಯದ ಗಮನ ಸೆಳೆದ ಮಂಡ್ಯ ರಣಕಣ, ಯಾವ ಅಭ್ಯರ್ಥಿಯ ಕೈ ಹಿಡಿಯುತ್ತದೋ ಕಾದು ನೋಡಬೇಕಾಗಿದೆ..