ಬಲು ಅಪರೂಪ ನಮ್ ಜೋಡಿ : ಸಚಿವ ಎಚ್.ಡಿ.ರೇವಣ್ಣ

Me and my brother are rare brothers, says HD Revanna

ಬಲು ಅಪರೂಪ ನಮ್ ಜೋಡಿ : ಸಚಿವ ಎಚ್.ಡಿ.ರೇವಣ್ಣ – Me and my brother are rare brothers, says HD Revanna

ಬಲು ಅಪರೂಪ ನಮ್ ಜೋಡಿ : ಸಚಿವ ಎಚ್.ಡಿ.ರೇವಣ್ಣ

ಹೊಳೆನರಸೀಪುರ : ಲೋಕೋಪಯೋಗಿ ಸಚಿವ ರೇವಣ್ಣನವರು ನಾನು ಮತ್ತು ನನ್ನ ತಮ್ಮ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಪರೂಪದ ಸಹೋದರರು ನಾವು ಯಾವುದೇ ಕಾರಣಕ್ಕೂ ಯಾವುದೇ ಭಿನ್ನಾಭಿಪ್ರಾಯಗಳಿಗೆ ಮನಸ್ಸು ಕೆಡಿಸಿಕೊಳ್ಳದೆ ಅಪರೂಪದ ಸಹೋದರರು ಎಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ನಾವು ಯಾವುದೇ ಮಾತುಗಳಿಗೆ ಬಲಿಯಾಗುವುದಿಲ್ಲ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೇವಣ್ಣ ಅವರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಎಂದು ಟ್ವಿಟ್ ಮಾಡಿರುವ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಸ್ಥಾನದಲ್ಲಿ ಶ್ರೀ ಎಚ್ ಡಿ ಕುಮಾರಸ್ವಾಮಿ ಕುಳಿತುಕೊಂಡಿದ್ದು ಆಸ್ಥಾನ ಖಾಲಿ ಇಲ್ಲ. ಹೀಗಾಗಿ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಮುಖ್ಯಮಂತ್ರಿ ಆಗಲು ಸಮರ್ಥ ಎಂದು ಹೇಳಿದ್ದಾರೆ ವಿನಃ ನಮ್ಮ ಸಹೋದರತ್ವ ದಲ್ಲಿ ಯಾವುದೇ ತೊಂದರೆಗಳನ್ನು ಮಾಡುವುದಿಲ್ಲ ಅವರಿಗೆ ನನ್ನ ಮೇಲೆ ಅಭಿಮಾನವಿದೆ ಮತ್ತು ಒಲವಿದೆ. ಹೀಗಾಗಿ ಆ ರೀತಿ ಅವರು ಟ್ವಿಟ್ ಮಾಡಿರಬಹುದು ಎಂದು ಹೇಳಿದರು.

ನಮಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ನಮಗೆ ಮಾರ್ಗದರ್ಶಕರು ಗುರುಗಳು ಎಂದು ಹೇಳಿದರೆ ತಪ್ಪಾಗಲಾರದು. ಅವರು ಸೂಚಿಸಿದಂತೆ ಕಾರ್ಯನಿರ್ವಹಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.////

Web Title : Me and my brother are rare brothers, says HD Revanna
(ಕನ್ನಡ ನ್ಯೂಸ್Kannada News Live @ kannadanews.today)