ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದ “ಕೋಟೆ” ಯುದ್ಧದ ಮೇಲೆ ವ್ಯಕ್ತಿ ಪಕ್ಷದ ಪ್ರಭಾವ. ಗೆಲುವು ಯಾರಿಗೆ ?

people are curious about Bagalkot

ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದ “ಕೋಟೆ” ಯುದ್ಧದ ಮೇಲೆ ವ್ಯಕ್ತಿ ಪಕ್ಷದ ಪ್ರಭಾವ. ಗೆಲುವು ಯಾರಿಗೆ ? – people are curious about Bagalkot

ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದ “ಕೋಟೆ” ಯುದ್ಧದ ಮೇಲೆ ವ್ಯಕ್ತಿ ಪಕ್ಷದ ಪ್ರಭಾವ. ಗೆಲುವು ಯಾರಿಗೆ ?

ಬಾಗಲಕೋಟೆ : “ಅಕ್ಕಮಹಾದೇವಿ ಶರಣೆಂದ ನಾಡಿದು ಶರಣರು ನಡೆದಾಡಿದ ಬೀಡಿದು” ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳ ಒಳಗೊಂಡ ಶಿಲ್ಪಕಲೆಗಳ ಬೀಡು ಬಾಗಲಕೋಟೆ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ ಮತದಾರರ‌ ನಿರ್ಣಯ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ನರಗುಂದ ಮತಕ್ಷೇತ್ರದಲ್ಲಿ ಮತದಾನೋತ್ತರ ಸಾಧಕ ಬಾಧಕಗಳ ಚರ್ಚೆಗಳು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ.

ಏ.23ರಂದು “ಮತದಾನ ಮಾಡಿದವನೆ ಮಹಾ ಶೂರ” ಎಂಬಂತೆ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಶುರತನ ಮೆರೆದಿದ್ದಾರೆ, ಪಟ್ಟಣ ಸೇರಿ 92 ಹಳ್ಳಿಗಳ ಒಳಗೊಂಡ ನರಗುಂದ ಮತಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿತ್ತು. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಚುನಾವಣಾ ಅಖಾಡದಲ್ಲಿ ಇದ್ದು ಅವರಿಬ್ಬರ ನಡುವೆ ನೇರ ಸ್ಪರ್ಧೆ ನಡೆದಿದ್ದು, ಇಬ್ಬರು ಅಭ್ಯರ್ಥಿಗಳಲ್ಲಿ ಯಾರು ವಿಜಯದ ಮಾಲೆ ಧರಿಸಲಿದ್ದಾರೆ? ನರಗುಂದ ಕ್ಷೇತ್ರದಲ್ಲಿ ಯಾರು ಮುನ್ನಡೆ ಸಾಧಿಸಲಿದ್ದಾರೆ? ಎಂಬುದು ಜನರಲ್ಲಿ ಕುತೂಹಲ ಮೂಡಿಸಿದೆ.

ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಸಿ.ಸಿ. ಪಾಟೀಲ ಗೆಲುವಿನ ಗಟ್ಟಿ ನಿಲುವಿನೊಂದಿಗೆ ಚುನಾವಣೆ ಅಖಾಡದಲ್ಲಿ ಭರದ ಪ್ರಚಾರ ಕೈಗೊಂಡಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮಾಜಿ ಶಾಸಕ ಬಿ.ಆರ್‌. ಯಾವಗಲ್ಲ ಹಾಗೂ ಮತ್ತವರ ಪಡೆ ಅಭ್ಯರ್ಥಿ ಗೆಲುವಿಗೆ ಹರಸಾಹಸ ಪಟ್ಟಿದೆ. ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕೆ ಮತದಾರ ಎಂದಿಗೂ ಓಗೊಟ್ಟಿಲ್ಲ. ಹೀಗಾಗಿ ವ್ಯಕ್ತಿ ಮತ್ತು ಪಕ್ಷದ ವರ್ಚಸ್ಸು ಇಲ್ಲಿ ಪ್ರಾಮುಖ್ಯತೆ ಪಡೆಯುತ್ತ ಬಂದಿದೆ.

ಕೇಂದ್ರ ಸರ್ಕಾರದ ಆಡಳಿತ ಕಾರ್ಯವೈಖರಿ, ಯಾವುದೇ ಕಪ್ಪು ಚುಕ್ಕೆಯಿಲ್ಲದೇ 5 ವರ್ಷ ಅಧಿಕಾರ ಪೂರೈಸಿ ವಿಶ್ವದಲ್ಲಿ ಭಾರತದ ಪ್ರಭಾವ ಮೆರೆದ ಪ್ರಧಾನಿ ನರೇಂದ್ರ ಮೋದಿ ಅಲೆ, ಉಗ್ರರ ಸಂಹಾರ ಮಾಡಿದ ಏರ್‌ಸೈóಕ್‌ ಕೂಡ ಮತದಾರರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ವ್ಯಕ್ತಿತ್ವದಲ್ಲಿ ಗುರುತಿಸಿಕೊಂಡ ಪಿ.ಸಿ. ಗದ್ದಿಗೌಡರ, ಮತ್ತೂಂದೆಡೆ ದೇಶದ ಭದ್ರತೆ ದೃಷ್ಟಿಯಿಂದ ಮೋದಿ ಮೇಲಿನ ಭರವಸೆ ನಮ್ಮ ಅಭ್ಯರ್ಥಿ ಗೆಲುವಿಗೆ ಪೂರಕವಾಗಿದೆ ಎಂಬುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಮತ್ತೊಂದೆಡೆ ಮೈತ್ರಿ ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳ ಭರವಸೆಯಿಂದ ಮತದಾರರು ನಮ್ಮ ಅಭ್ಯರ್ಥಿಗೆ ಹೆಚ್ಚು ಬೆಂಬಲಿಸಲಿದ್ದಾರೆ. ಮಹಿಳಾ ಅಭ್ಯರ್ಥಿ ಎಂಬ ಹೆಮ್ಮೆ ಗೆಲುವಿಗೆ ಪೂರಕವಾಗಿದೆ ಎಂಬ ಭರವಸೆ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಎರಡೂ ಪಕ್ಷಗಳಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಜೋರಾಗಿಯೇ ಇದೆ. ಅದಕ್ಕಾಗಿ ಮೇ 23ರಂದೇ ಹೊರಬೀಳುವ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.

ಅಧಿಕಾರ ಹಂಚಿಕೊಡುವ ಕ್ಷೇತ್ರ: ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಅಧಿಕಾರ ಹಂಚಿಕೊಳ್ಳುತ್ತಾ ಬಂದಿದೆ. 2004ರ ವರೆಗೆ ಈ ಕ್ಷೇತ್ರದ ನಿರಂತರ ಚುಕ್ಕಾಣಿ ಹಿಡಿದಿದ್ದ ಬಿ.ಆರ್‌. ಯಾವಗಲ್ಲ ಅವರಿಗೆ ಪ್ರತಿಸ್ಪರ್ಧೆ ಒಡ್ಡಿದ ಬಿಜೆಪಿಯ ಸಿ.ಸಿ. ಪಾಟೀಲ 2004ರಿಂದ ಎರಡು ಅವಧಿಗಳ ಕಾಲ ಕ್ಷೇತ್ರದ ಅಧಿಕಾರ ಬಾಚಿಕೊಂಡಿದ್ದು, 2013ರಲ್ಲಿ ಮತ್ತೆ ಕಾಂಗ್ರೆಸ್‌ ಹಿಡಿತಕ್ಕೆ ಬಂದಿದ್ದರೆ, 2018ರ ಚುನಾವಣೆಯಲ್ಲಿ ಮತ್ತೆ ಕಮಲ ಅರಳಿ ನಿಂತಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಮೂರು ಅವಧಿಗಳ ಕಾಲ ಬಿಜೆಪಿ ಪಿಸಿ ಗದ್ದಿಗೌಡರ್ ಗೆಲುವನ್ನು ಸಾಧಿಸಿ ಗೆಲುವಿನ ಸರದಾರ ಎನಿಸಿಕೊಂಡಿದ್ದಾರೆ.

ಈ ಕೋಟೆಯ ಯುದ್ಧದಲ್ಲಿ ಕೈ-ಕಮಲದ ವ್ಯಕ್ತಿಗಳ ವರ್ಚಸ್ಸು ಅವರ ಗೆಲುವಿಗೆ ಕಾರಣವಾಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.//// – Kannada News