ಹೈವೋಲ್ಟೆಜ್ ಕ್ಷೇತ್ರ ಮಂಡ್ಯ, ರೆಬಲ್ ನಾಯಕಿ ಜಯಭೇರಿ

rebel leader Samantha won in Mandya

ಹೈವೋಲ್ಟೆಜ್ ಕ್ಷೇತ್ರ ಮಂಡ್ಯ, ರೆಬಲ್ ನಾಯಕಿ ಜಯಭೇರಿ

ಸಕ್ಕರೆಯನಾಡು ಮಂಡ್ಯ ಲೋಕಸಮರದ ಇಡೀ ರಾಜ್ಯದ ಗಮನ ಸೆಳೆದ ಹೈವೋಲ್ಟೇಜ್ ಕ್ಷೇತ್ರವೆಂದೇ ಹೆಸರಾಗಿತ್ತು. ಈ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರದ ಅಭ್ಯರ್ಥಿ ಶ್ರೀ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಅಕಾಡಕ್ಕೆ ಇಳಿದಿದ್ದರು.

ಹೈವೋಲ್ಟೆಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವೆ ನೇರ ಹಣಾಹಣಿ ನಡೆದಿದ್ದು ಕೊನೆಗೆ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಭಾರಿ ಅಂತರದಿಂದ ಮುನ್ನಡೆ ಗಳಿಸಿದ್ದಾರೆ. ಸಧ್ಯ ಸುಮಲತಾ ಅಂಬರೀಶ್ ಗೆಲುವಿಗೆ, ಬೆಂಬಲಿಗರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಮಂಡ್ಯದಲ್ಲಿ ದಿ. ಅಂಬರೀಶ್ ಅವರ ಭಾವಚಿತ್ರ ಹಿಡಿದು ರಸ್ತೆಗಿಳಿದ ಅಭಿಮಾನಿಗಳು ಸುಮಲತಾ ಅಂಬರೀಶ್ ಪರವಾಗಿ ಘೋಷಣೆ ಕೂಗಿದ್ದಾರೆ. ಸುಮಲತಾ ಅವರ ಚಿಹ್ನೆ ಕಹಳೆ ಮತ್ತು ಬಿಜೆಪಿ ಬಾವುಟಗಳನ್ನು ಹಿಡಿದು ಜೈಕಾರ ಕೂಗುತ್ತಿದ್ದು, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಸುಮಲತಾ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಬೇಕಾಯಿತು.

ಹೈವೋಲ್ಟೆಜ್ ಕ್ಷೇತ್ರ ಮಂಡ್ಯ, ರೆಬಲ್ ನಾಯಕಿ ಜಯಭೇರಿ - Kannada News

ಆರಂಭಿಕ ಸುತ್ತುಗಳಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದ್ದ ಫಲಿತಾಂಶದಲ್ಲಿ ಶ್ರೀ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವೆ ಹಾವು ಏಣಿ ಆಟದಂತೆ ಎಣಿಕೆ ಕಾರ್ಯ ನಡೆದಿತ್ತು. ಒಮ್ಮೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಮತ್ತೊಮ್ಮೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಮುನ್ನಡೆ ಗಳಿಸುತ್ತ ಬಂದಿದ್ದರು.

ಮತಗಳ ಅಂತರವೂ ಕಡಿಮೆ ಇತ್ತು. ಕ್ಷಣಕ್ಷಣದ ಫಲಿತಾಂಶ ಇಡೀ ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿತ್ತು. ಆದರೆ ನಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಸುಮಾರು 85 ಸಾವಿರ ಮತಗಳ ಅಂತರ ಕಾಯ್ದುಕೊಂಡ ಸುಮಲತಾ ಮುನ್ನಡೆ ಗಳಿಸುವುದರ ಜೊತೆಗೆ ಸಕ್ಕರೆ ನಾಡಿನ ರೆಬಲ್ ಕೋಟೆಯಲ್ಲಿ ರೆಬಲ್ ನಾಯಕಿಯಾಗಿದ್ದಾರೆ.////

Follow us On

FaceBook Google News

Read More News Today