ಯುದ್ಧಕ್ಕೆ ನಿಂತಮೇಲೆ ಸೈನಿಕರ ಲೆಕ್ಕ ಹಾಕಬಾರದು – ಸಿದ್ದರಾಮಯ್ಯ

should not count soldiers While War Says Siddaramaiah

ಯುದ್ಧಕ್ಕೆ ನಿಂತಮೇಲೆ ಸೈನಿಕರ ಲೆಕ್ಕ ಹಾಕಬಾರದು – ಸಿದ್ದರಾಮಯ್ಯ – should not count soldiers While War Says Siddaramaiah – Kannada News Today

ಬಾಗಲಕೋಟೆ : ಕೋಟೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ದಿನೇದಿನೇ ಲೋಕಸಭಾ ಚುನಾವಣೆ ಕ್ಷೇತ್ರ ರಂಗೇರುತ್ತಿದೆ. ಬಿಜೆಪಿ ಭದ್ರಕೋಟೆ ಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಕಾಂಗ್ರೆಸ್ ಪಕ್ಷದ ಪ್ರಚಾರ ದಿನದಿಂದ ದಿನಕ್ಕೆ ಜೋರಾಗಿ ನಡೆಯುತ್ತಿದೆ. ಕಾರಣ ಮಾಜಿ ಮುಖ್ಯಮಂತ್ರಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಪ್ರತಿಷ್ಠೆ.
ತಮ್ಮ ಮೂಲ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಸೋಲನ್ನು ಕಂಡರೂ ಸಹ ರಾಜ್ಯ ರಾಜಕಾರಣದ ಶಕ್ತಿಯಾಗಿ ಸಿದ್ದರಾಮಯ್ಯ ಅವರು ಉಳಿಯುವಂತೆ ಮಾಡಿದ ಬಾದಾಮಿ ವಿಧಾನಸಭಾ ಕ್ಷೇತ್ರ ಇದೇ ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಈ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಮತಿ ವೀಣಾ ಕಾಶಪ್ಪನವರ ಗೆಲುವು ಸಿದ್ದರಾಮಯ್ಯ ಅವರ ಪ್ರತಿಷ್ಠೆ ಹೆಚ್ಚಿಸಲಿದೆ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ವೀಣಾ ಕಾಶಪ್ಪನವರ್ ಮಾಡಿದ ಅಭಿವೃದ್ಧಿ ಪರಕಾರ ಯೋಜನೆಗಳು ಜನರ ಮನಸ್ಸನ್ನು ಆಕರ್ಷಿಸುವ ಮೂಲಕ ಕಾಂಗ್ರೆಸ್ ಕಡೆ ಗಮನ ಸೆಳೆಯುವಂತೆ ಮಾಡಿದೆ.
ಬಾಗಲಕೋಟ್ ಲೋಕಸಭಾ ಕ್ಷೇತ್ರದಲ್ಲಿ ಶ್ರೀಮತಿ ವೀಣಾ ಕಾಶಪ್ಪನವರ ಗೆಲುವು ಒಂದು ಇತಿಹಾಸ ವಾದರೂ ಆಗಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸಲು ಆರಂಭಿಸಿದ ಕ್ಷಣದಿಂದಲೂ ಸಿದ್ದರಾಮಯ್ಯ ಅವರು ಕ್ಷೇತ್ರದ ಹಾಗೂ ಇಡೀ ಲೋಕಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಕ್ಷೇತ್ರ ಗೆದ್ದರೆ ಅವರ ಬಲಾಡ್ಯ ಹೆಚ್ಚುತ್ತದೆ ಒಂದು ವೇಳೆ ಸೋತಲ್ಲಿ ಎದುರಾಳಿಗಳ ಕೈಯಲ್ಲಿ ಅಸ್ತ್ರವನ್ನು ಕೊಟ್ಟಂತೆ ಸರಿ. ಬಾಗಲಕೋಟೆ ಲೋಕ ಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗದಗ ಜಿಲ್ಲೆ ನರಗುಂದ ವಿಧಾನಸಭಾ ಕ್ಷೇತ್ರ ಸೇರುವುದರಿಂದ ಲೋಕಸಭಾ ಕ್ಷೇತ್ರ ಸಹಜವಾಗಿ 2 ಜಿಲ್ಲೆಗಳಲ್ಲಿನ ಮುಂಚೂಣಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವಿನ ಮಾರ್ಗಸೂಚಿ ಹಾಕಿಕೊಟ್ಟಿದ್ದಾರೆ.
            ಬಾಗಲಕೋಟೆ ಜಿಲ್ಲೆ 7 ಕ್ಷೇತ್ರಗಳ ಪೈಕಿ ಬದಾಮಿ ಮತ್ತು ಜಮಖಂಡಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ ಇನ್ನುಳಿದಂತೆ ಐದು ವಿಧಾನಸಭಾ ಕ್ಷೇತ್ರ ಹಾಗೂ ಗದಗ ಜಿಲ್ಲೆ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ, ಅದಕ್ಕಾಗಿ ಸಿದ್ದರಾಮಯ್ಯನವರು ತಮ್ಮ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಯುದ್ಧಕ್ಕೆ ನಿಂತಮೇಲೆ ಸೈನಿಕರ ಲೆಕ್ಕ ಹಾಕಬಾರದು ಎಂಬ ಮಾತನ್ನು ತಿಳಿಸಿ ಎಲ್ಲರನ್ನೂ ಕಾಂಗ್ರೆಸ್ ಗೆಲುವಿಗಾಗಿ ಹುರಿದುಂಬಿಸಿದ್ದಾರೆ. //// ವರದಿಗಾರರು ರವಿಕುಮಾರ ಮುರಾಳ