ಸುಮಲತಾ ಜೊತೆ “ಕೈ” ಪಾರ್ಟಿ, ನಾಯಕರಿಗೆ ಸಿದ್ದರಾಮಯ್ಯ ಬುಲಾವ್
Siddaramaiah sent a call to the leaders who attend Dinner party with Sumalatha
ಸುಮಲತಾ ಜೊತೆ “ಕೈ” ಪಾರ್ಟಿ, ನಾಯಕರಿಗೆ ಸಿದ್ದರಾಮಯ್ಯ ಬುಲಾವ್
ಬೆಂಗಳೂರು : ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಕಾಂಗ್ರೆಸ್ ಅಸಮಾಧಾನಿತರ ಜೊತೆ ಔತನ ಕೂಟ ಮಾಡಿದ ವಿಚಾರ ಈಗ ಮೈತ್ರಿ ಸರ್ಕಾರದಲ್ಲಿ ಹೊಸ ಸಂಚಲನವನ್ನ ಸೃಷ್ಠಿ ಮಾಡಿದೆ. ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ತಟಸ್ತರಾಗಿದ್ದ ಕಾಂಗ್ರೆಸ್ ರೆಬೆಲ್ಸ್ ಚಲುವರಾಯಸ್ವಾಮಿ, ಗಣಿಗ ರವಿ, ಮಳವಳ್ಳಿ ನರೇಂದ್ರ ಸ್ವಾಮಿ, ನರೇಂದ್ರ ಸ್ವಾಮಿ, ಮಾಗಡಿ ಬಾಲಕೃಷ್ಣ, ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಈ ಭೋಜನಕೂಟದಲ್ಲಿ ಭಾಗಿಯಾಗಿದ್ದರು. ಇದು ಏಟ್ರಿಯಾ ಹೋಟೆಲ್ನ ಸಿಸಿಟಿವಿ ದೃಶ್ಯಾವಳಿಯಿಂದ ಖಚಿತವಾಗಿದೆ.
ಈ ಔತನಕೂಟ ಮಾಡಿರುವ ಕಾಂಗ್ರೆಸ್ ರೆಬೆಲ್ ನಾಯಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಪಡೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ತಮ್ಮನ್ನು ಭೇಟಿಯಾಗುವಂತೆ ರೆಬೆಲ್ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯದಲ್ಲಿ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿದಾಗಿನಿಂದಲೂ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಇದೇ ಕಾರಣಕ್ಕೆ ಅವರು ಕಾಂಗ್ರೆಸ್ ನಾಯಕರಾಗಿದ್ದ ಅಂಬರೀಶ್ ಅವರ ಪತ್ನಿ ಸುಮಲತಾಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಈ ವಿಷಯದಲ್ಲಿ ಹಲವು ಬಾರಿ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ವಾಗ್ವಾದವೂ ನಡೆದಿತ್ತು.
ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿಯವರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ಸುಮಲತಾ ಜೊತೆಗೆ ಔತನಕೂಟ ನಡೆಸಿರುವುದರಿಂದ ಕಾಂಗ್ರೆಸ್ ಗೆ ಮುಜುಗರವಾಗಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಪೋರ್ಟ್ ಮಾಡಬೇಕು ಎಂದು ಈ ಮೊದಲು ಸೂಚನೆ ನೀಡಿದ್ದೆವು. ಆದರೂ ಮೈತ್ರಿ ನಿಯಮವನ್ನು ಮೀರಿ ನೀವು ಸುಮಲತಾ ಜೊತೆ ಹೋಗಿ ಚರ್ಚೆ ಮಾಡಿದ್ದೀರಿ. ಇದರಿಂದ ಮೈತ್ರಿ ಧರ್ಮಕ್ಕೆ ಧಕ್ಕೆಯಾಗಿದೆ. ನೀವು ಯಾಕೆ ಅಲ್ಲಿಗೆ ಹೋಗಿದ್ದಿರಿ?ಕೈ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಖಡಕ್ ವಾರ್ನಿಂಗ್ ಮಾಡಿದ್ದಾರೆ .
ನಿನ್ನೆಯ ಪಾರ್ಟಿಯ ಬಗ್ಗೆ ಇಂದು ರೆಬೆಲ್ಗಳೊಂದಿಗೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ. ಸಿದ್ದರಾಮಯ್ಯನವರ ಸೂಚನೆಯಂತೆ ಇಂದು ರೆಬೆಲ್ ಗಳು ಬಂದರೆ ಅವರ ಜೊತೆ ಕೈ ನಾಯಕರು ಸಭೆ ನಡೆಸೋ ಸಾಧ್ಯತೆಯಿದೆ. ಈ ಸಭೆಗೆ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗಿಯಾಗೋ ಸಾಧ್ಯತೆಯೂ ಇದೆ.////
Web Title : Siddaramaiah sent a call to the leaders who attend Dinner party with Sumalatha
Read Latest Kannada News Today in kannadanews.today
Follow us On
Google News |