ಗ್ರಾಮ ಪಂಚಾಯಿತಿಗಳ ಚುನಾವಣಾ ಮಿನಿ ಸಮರ ಪ್ರಾರಂಭ

Started the Grama Panchayat Election Mini War

ಗ್ರಾಮ ಪಂಚಾಯಿತಿಗಳ ಚುನಾವಣಾ ಮಿನಿ ಸಮರ ಪ್ರಾರಂಭ…..

ಬಾಗಲಕೋಟೆ : ಮಹಾಭಾರತದ ಯುದ್ಧದಂತೆ ಬಾಗಲಕೋಟ್ ಜಿಲ್ಲೆಯ ಕೈ ಕಮಲ ಗಳ ನಡುವೆ ಲೋಕ ಸಮರ ನಡೆದು ಫಲಿತಾಂಶ ನಿರೀಕ್ಷೆಯಲ್ಲಿ ಇದ್ದಾಗ ಮತ್ತೊಂದು ಮಿನಿ ಸಮರ ಪ್ರಾರಂಭವಾಗುತ್ತಿದೆ ಅದೇ ಗ್ರಾಮ ಪಂಚಾಯಿತಿಗಳ ಮಿನಿ ಸಮರ.
ಗ್ರಾಮ ಪಂಚಾಯ್ತಿಯಲ್ಲಿ ವೈಯಕ್ತಿಕ ಬೇರೆ ಬೇರೆ ಕಾರಣಗಳಿಂದ ಖಾಲಿಯಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಮೂಲಕ ಭರ್ತಿ ಮಾಡಲು ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ತಾಲೂಕಿನ ಬೇವೂರ ಗ್ರಾ. ಪಂಚಾಯ್ತಿ ವ್ಯಾಪ್ತಿಯ ಚೌಡಾಪುರ (ಸಾಮಾನ್ಯ) ಮತ್ತು ತಿಮ್ಮಾಪೂರ ಗ್ರಾ. ಪಂಚಾಯ್ತಿ ವ್ಯಾಪ್ತಿಯ ಬೋಡನಾಯಕನದಿನ್ನಿ (ಸಾಮಾನ್ಯ), ಹುನಗುಂದ ತಾಲೂಕಿನ ವಡಗೇರಿ (ಸಾಮಾನ್ಯ ಮಹಿಳೆ) ಹಾಗೂ ಬೀಳಗಿ ತಾಲೂಕಿನ ಬಾಡಗಿ(ಸಾಮಾನ್ಯ) ಸೇರಿ ಒಟ್ಟು 4 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಮೇ 29ರಂದು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಆರ್.ರಾಮಚಂದ್ರನ್ ಹೇಳಿದ್ದಾರೆ.

ಉಪಚುನಾವಣೆಗೆ ಮೇ 13 ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಮೇ16 ಕೊನೆ ದಿನ.

ಗ್ರಾಮ ಪಂಚಾಯಿತಿಗಳ ಚುನಾವಣಾ ಮಿನಿ ಸಮರ ಪ್ರಾರಂಭ - Kannada News

ನಾಮಪತ್ರ ಪರಿಶೀಲನೆ 17ರಂದು ನಡೆಯಲಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನ. ಮೇ 29ರಂದು ಮತದಾನ ನಡೆಯಲಿದ್ದು, ಮರು ಮತದಾನವಿದ್ದಲ್ಲಿ 30ರಂದು ನಡೆಸಲಾಗುತ್ತಿದೆ. ಮತ ಏಣಿಕೆ ಮೇ 31ರಂದು ನಡೆಯಲಿದೆ. ಉಪ ಚುನಾವಣೆ ನಡೆಯುವ ಗ್ರಾ.ಪಂಚಾಯ್ತಿ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಮೇ 13ರಿಂದ 31ರವರೆಗೆ ಜಾರಿಯಲ್ಲಿರುತ್ತದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳ, ಸಹಾಯಕ ಚುನಾವಣಾ ಅಧಿಕಾರಿಗಳ ನೇಮಕಾತಿ ಕುರಿತಂತೆ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಆರ್. ರಾಮಚಂದ್ರನ್ ತಿಳಿಸಿದ್ದಾರೆ.///// – Get Up-To-Date Kannada News

Follow us On

FaceBook Google News