ಏಪ್ರಿಲ್ 20ರ ಲಾಕ್ ಡೌನ್ ಸಡಿಲಿಕೆ ವಾಪಸ್

State Government has withdrawn its decision to allow two-wheelers

🌐 Kannada News :

ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶ ನೀಡುವ ನಿರ್ಧಾರ ವಾಪಸ್ : ರಾಜ್ಯ ಸರ್ಕಾರ

ಲಾಕ್ ಡೌನ್  ಸಡಿಲಿಕೆ ಘೋಷಣೆಯಾದ ಮೇಲೆ ರಾಜ್ಯಾದ್ಯಂತ ಹಲವು ಟೀಕೆಗಳು ವ್ಯಕ್ತವಾದವು.. ಬೈಕ್ಗಳ ಓಡಾಟಕ್ಕೆ ಅನುಮತಿ ನೀಡಿದರೆ ಇನ್ನಷ್ಟು ಕ್ಲಿಷ್ಟ ಪರಿಸ್ಥಿತಿ ಉದ್ಭವವಾಗಬಹುದು.. ಎಂಬ ಮಾತುಗಳು ಕೇಳಿ ಬಂದವು.. ಮತ್ತೆ ಲಾಕ್ ಡೌನ್ ಸಡಿಲಿಕೆ ಆದೇಶವನ್ನು ಮರುಪರಿಶೀಲಿಸಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಲಾಗಿದೆ …

ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ ನೀತಿಯನ್ನು ಮುಂದುವರೆಸಲಾಗುವುದು ಎಂದು ತಿಳಿಸಲಾಗಿದೆ.

ಏಪ್ರಿಲ್ 20ರ ಲಾಕ್ ಡೌನ್ ಸಡಿಲಿಕೆ ವಾಪಸ್
ಏಪ್ರಿಲ್ 20ರ ಲಾಕ್ ಡೌನ್ ಸಡಿಲಿಕೆ ವಾಪಸ್

ಹೌದು, ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ ಸಂಚಾರದ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ. ಲಾಕ್​​ಡೌನ್​​ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸಲಾಗುತ್ತದೆ ಎಂದು ಆದೇಶ ಪಾತ್ರದಲ್ಲಿ ತಿಳಿಸಿದೆ.

Web Title : State Government has withdrawn its decision to allow two-wheelers

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile