ಸುಮಲತಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

Sumalatha is a BJP candidate, Siddharamaiah against Sumalatha

ಸುಮಲತಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ – Sumalatha is a BJP candidate, Siddharamaiah against Sumalatha – Kannada News Today

ಸುಮಲತಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಮೊನ್ನೆ ಮೊನ್ನೆಯಷ್ಟೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಬಂದಿದ್ದರು, ಅಷ್ಟೇ ರಾಜ್ಯದೆಲ್ಲೆಡೆ ಹಲವಾರು ಟೀಕೆಗಳು ಅನುಮಾನಗಳು ಜೊತೆಗೆ ಸಿದ್ದರಾಮಯ್ಯನವರು ಪರೋಕ್ಷವಾಗಿ ಸುಮಲಾತರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ ಇದೀಗ ಅವೆಲ್ಲಾ ಟೀಕೆಗಳಿಗೆ ಸಿದ್ದರಾಮಯ್ಯ ಬಿಗ್ ಟ್ವಿಸ್ಟ್ ನೀಡಿದ್ದಾರೆ, ಸುಮಲತಾ ಹಾಗೂ ನರೇಂದ್ರ ಮೋದಿರವರ ವಿರುದ್ಧ ಕೆಂಡಾಮಂಡಲವಾದ ಸಿದ್ದರಾಮಯ್ಯ “ಸುಮಲತಾ” ಬಿಜೆಪಿ ಬೆಂಬಲಿತ ಅಭ್ಯರ್ಥಿಯಲ್ಲ, ಬಿಜೆಪಿ ಅಭ್ಯರ್ಥಿಯೇ, ಎಂದು ಸಾರಿ ಸಾರಿ ಹೇಳಿದ್ದಾರೆ.

ನರೇಂದ್ರ ಮೋದಿರವರು ತಮ್ಮ ಕಾರ್ಯಕರ್ತರಿಗೆ ಸುಮಲತಾ ಬೆಂಬಲಿಸಲು ಕರೆ ನೀಡಿದ್ದರು, ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯನವರು ಸುಮಲತಾ ಹಾಗೂ ಮೋದಿ ವಿರುದ್ಧ ಅಕ್ಷರಶ ಕೆರಳಿ ಹೋಗಿದ್ದರು.

ಮಂಡ್ಯ ಲೋಕ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆ.ಆರ್.ನಗರದಲ್ಲಿ ದೋಸ್ತಿ ಸರ್ಕಾರ ನಿಖಿಲ್ ಪರ ಭರ್ಜರಿ ಪ್ರಚಾರ ನಡೆಸಿದ್ರು, ಈ ವೇಳೆ ತಮ್ಮ ಭಾಷಣದ ಉದ್ದಕ್ಕೂ ಸಿದ್ದರಾಮಯ್ಯ ಸುಮಲತಾರ ವಿರುದ್ಧ ಗುಡುಗಿದರು.

ಸುಮಲತಾರನ್ನು ಗೆಲ್ಲಿಸಿ, ಸುಮಲತಾರನ್ನು ಬೆಂಬಲಿಸಿ ಎಂಬ ನರೇಂದ್ರ ಮೋದಿರವರ ಮಾತಿಗೆ, ಕೆರಳಿದ್ದ ಸಿದ್ದರಾಮಯ್ಯ ಸುಮಲತಾ ಪಕ್ಕಾ ಬಿ.ಜೆ.ಪಿ.ನನ್ನ ಹೆಸರನ್ನು ಬಳಸಿಕೊಂಡು ಮತ ಕೇಳಿದರೆ ತಕ್ಕ ಶಾಸ್ತಿ ಮಾಡಿ ಎಂದು ಕರೆ ನೀಡಿದರು.

ಈ ಮೂಲಕ ಮಂಡ್ಯ ಲೋಕ ಸಭಾ ರಣ ಕಣವಾಗಿದ್ದು ಕ್ಷಣ ಕ್ಷಣಕ್ಕೂಕುತೂಹಲ ಮೂಡಿಸಿದೆ.