ರೆಬಲ್ ಕೋಟೆಯಲ್ಲಿ ಸುಮಲತಾ ಮುನ್ನಡೆ

Sumalatha lead in the rebel fort of Mandya

ರೆಬಲ್ ಕೋಟೆಯಲ್ಲಿ ಸುಮಲತಾ ಮುನ್ನಡೆ

ರಾಜ್ಯದ ಪ್ರತಿಷ್ಠಿತ ಕಣವಾಗಿರುವ ಮಂಡ್ಯ ಲೋಕಸಮರದ ಕ್ಷೇತ್ರ ರಾಜ್ಯದ ಎಲ್ಲ ಜನತೆಯ ಗಮನ ಸೆಳೆದ ಅಚ್ಚುಮೆಚ್ಚಿನ ಕ್ಷೇತ್ರವಾಗಿದ್ದು ಈಗ ಸದ್ಯ ಸುಮಲತಾ ಮುಂದಿದ್ದಾರೆ

ಆರಂಭಿಕ ಹಂತದಲ್ಲಿ ಅಂಚೆ ಮತಗಳ ಎಣಿಕೆ ನಡೆದಿದ್ದು, 542 ಲೋಕಸಭಾ ಕ್ಷೇತ್ರಗಳಲ್ಲಿ ಆರಂಭಿಕ ಫಲಿತಾಂಶ ಎನ್.ಡಿ.ಎ. 42, ಯುಪಿಎ 30 ಹಾಗೂ ಇತರರು 11 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದರು.

ಅಂಚೆ ಮತಗಳ ಎಣಿಕೆಯಲ್ಲಿ ಮುನ್ನಡೆ ಪಡೆದುಕೊಂಡಿದ್ದ ಸುಮಲತಾ, ಬಳಿಕ ಇವಿಎಂ ಮತಗಳ ಎಣಿಕೆಯಲ್ಲೂ ಮುನ್ನಡೆ ಸಾಧಿಸಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರಂಭಿಕ ಮುನ್ನಡೆ ಪಡೆದಿದ್ದಾರೆ..

ರೆಬಲ್ ಕೋಟೆಯಲ್ಲಿ ಸುಮಲತಾ ಮುನ್ನಡೆ - Kannada News

ರಾಜ್ಯದ ಜಿದ್ದಾಜಿದ್ದಿನ ಕಣವಾದ ಮಂಡ್ಯ ರಾಜ್ಯದ ಗಮನ ಸೆಳೆದ ಏಕೈಕ ಲೋಕಸಭಾ ಕ್ಷೇತ್ರವಾಗಿದ್ದು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವೆ ಹಾವಿನ ಏಣಿ ಆಟ ನಡೆದಿದ್ದು ಅದರಲ್ಲಿ ಸುಮಲತಾ ಅಂಬರೀಶ್ 3012 ಮತಗಳಿಂದ ಮುನ್ನಡೆದಿದ್ದಾರೆ.

ಸಕ್ಕರೆ ನಾಡು ಮಂಡ್ಯದಲ್ಲಿ ಈ ಏರಿಕೆ ಫಲಿತಾಂಶವನ್ನು ಕಂಡಾಗ ಮಂಡ್ಯ ಮನೆಮಗಳು ಸುಮಲತಾ ಅಂಬರೀಶ್ ಅವರಿಗೆ ಸ್ಥಾನ ಒಲಿದು ಬರುವುದರಲ್ಲಿ ಸಂಶಯವಿಲ್ಲ ಎಂದು ತಿಳಿಯಬಹುದು.

ಮೈತ್ರಿ ಸರ್ಕಾರ, ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ಹೂಡಿದ ತಂತ್ರಗಳು ಯಾವುದೇ ರೀತಿಯ ಫಲ ನೀಡದೆ ವಿಫಲವಾದವು.////

Follow us On

FaceBook Google News

Read More News Today