Big News, ಸಚಿವ ಪುಟ್ಟರಾಜು ಬಳಿ ಇದಿಯಂತೆ ಸುಮಲತಾ ವೀಡಿಯೋ !
Sumalatha secret talk with BJP, video with Puttaraju
ಮಂಡ್ಯ : ಸಚಿವ ಪುಟ್ಟರಾಜು ಸುಮಲತಾ ವಿರುದ್ಧ ಹೊಸ ವೀಡಿಯೋ ಬಾಂಬ್ ಸಿಡಿಸಿದ್ದಾರೆ, ಹೋಟೆಲ್ ಹೊಂದರಲ್ಲಿ ಸುಮಲತಾ ಬಿ.ಜೆ.ಪಿ ಯೊಂದಿಗೆ ಮಾತನಾಡಿರುವ ವೀಡಿಯೊ ತನ್ನ ಬಳಿ ಇದೆ , ಅದನ್ನು ಚುನಾವಣೆ ನಂತರ ಹೊರ ತರುತ್ತೇನೆ ಎಂದಿದ್ದಾರೆ..
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಇದ್ದಕ್ಕಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಈ ಬಗ್ಗೆ ಮಾತನಾಡಿದ ಪುಟ್ಟರಾಜು, ಸುಮಲತಾ ಮೇಲ್ನೋಟಕ್ಕೆ ಮಾತ್ರ ಪಕ್ಷೇತರ ಅಭ್ಯರ್ಥಿಯಂತೆ ನಟಿಸುತ್ತಿದ್ದಾರೆ, ಅವರು ಪಾಕ್ಕಾ ಬಿ.ಜೆ.ಪಿ ಅಭ್ಯರ್ಥಿ, ಇದನ್ನು ನಾನು ವೀಡಿಯೋ ಕ್ಲಿಪ್ ಸಮೇತ ನಿಮ್ಮ ಮುಂದೆ ಇಡಲಿದ್ದೇನೆ ಎಂದಿದ್ದಾರೆ.
ಸಮಲತಾ ಅದಾಗಲೇ ಕೆಲವು ಬಿ.ಜೆ.ಪಿ ನಾಯಕರನ್ನು ರಹಸ್ಯವಾಗಿ ಹೋಟೆಲ್ ನಲ್ಲಿ ಭೇಟಿಯಾಗಿ, ನಾನು ಗೆದ್ದೇ ಗೆಲ್ಲುತ್ತೇನೆ, ಗೆದ್ದ ನಂತರ ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಕೇಳಿದ್ದಾರೆಂದು ಪುಟ್ಟರಾಜು ಆರೋಪಿಸಿದ್ದಾರೆ. ಅಲ್ಲದೆ ಇದರ ವೀಡಿಯೋ ನನ್ನ ಬಳಿಯಿದ್ದು ಏಪ್ರಿಲ್ ೧೮ ರ ಬಳಿಕ ನಿಮ್ಮ ಮುಂದೆ ಇಡುತ್ತೇನೆ ಎಂದಿದ್ದಾರೆ.
ಇಷ್ಟಕ್ಕೂ ಇಂತಹದ್ದೊಂದು ವಿಡೀಯೋ ನಿಜಕ್ಕೂ ಸಚಿವರ ಬಳಿ ಇದಿಯಾ ? ಅಥವಾ ಮತದಾರರನ್ನು ಓಲೈಸಲು ಈ ತಂತ್ರ ಹೂಡಿದ್ದಾರಾ ? ತಿಳಿದು ಬರುತ್ತಿಲ್ಲ..