ಕುಂದಗೋಳ ಉಪಚುನಾವಣೆ ಅಖಾಡದಲ್ಲಿ ಉಳಿದ 8 ಅಭ್ಯರ್ಥಿಗಳ ಹಣಾಹನಿ

The fight between remaining 8 candidates in the Kundogol by-election

ಕುಂದಗೋಳ ಉಪಚುನಾವಣೆ ಅಖಾಡದಲ್ಲಿ ಉಳಿದ 8 ಅಭ್ಯರ್ಥಿಗಳ ಹಣಾಹನಿ – The fight between remaining 8 candidates in the Kundogol by-election

ಕುಂದಗೋಳ ಉಪಚುನಾವಣೆ ಅಖಾಡದಲ್ಲಿ ಉಳಿದ 8 ಅಭ್ಯರ್ಥಿಗಳ ಹಣಾಹನಿ

ಧಾರವಾಡ : “ಮುಗಿಯಿತು ಲೋಕ ಕದನ ಶುರುವಾಯಿತು ಉಪ ಕದನ” ಎಂಬಂತೆ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಖಾಡದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮೇ 19ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರಗಳನ್ನು ಹಿಂಪಡೆಯಲು ಗುರುವಾರ ಅಂತಿಮದಿನವಾಗಿತ್ತು. 14 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದರು ಎಂದು ಚುನಾವಣಾಧಿಕಾರಿ ವಿ.ಪ್ರಸನ್ನ ಹೇಳಿದರು.

ಕುಂದಗೋಳ ಚುನಾವಣೆ : ಜಮೀರ್ ಸಂಧಾನ ಸಕ್ಸಸ್, 9 ನಾಮಪತ್ರ ವಾಪಸ್

ಮೇ 19ರಂದು ಕುಂದಗೋಳ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ. ಒಟ್ಟು 1,89,281 ಮತದಾರರಿದ್ದಾರೆ.

214 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮೇ 23ರಂದು ಫಲಿತಾಂಶವನ್ನು ಘೋಷಣೆ ಮಾಡಲಾಗುತ್ತದೆ.

ಧಾರವಾಡ : ಕುಂದಗೋಳ ವಿಧಾನಸಭಾ ಕ್ಷೇತ್ರದ ಪರಿಚಯ

ಕಣದಲ್ಲಿರುವ ಅಭ್ಯರ್ಥಿಗಳು

* ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ – ಕಾಂಗ್ರೆಸ್

* ಎಸ್.ಐ.ಚಿಕ್ಕನಗೌಡ್ರ – ಬಿಜೆಪಿ

* ಈಶ್ವರಪ್ಪ ಭಂಡಿವಾಡ – ಪಕ್ಷೇತರ

* ತುಳಸಪ್ಪ ದಾಸರ – ಪಕ್ಷೇತರ

* ರಾಜು ಅನಂತಸಾ ನಾಯಕವಾಡಿ – ಪಕ್ಷೇತರ

* ಶೈಲಾ ಗೋಣಿ – ಪಕ್ಷೇತರ

* ಸಿದ್ದಪ್ಪ ಗೋಡಿ – ಪಕ್ಷೇತರ

* ಸೋಮಣ್ಣ ಮೇಟಿ – ಪಕ್ಷೇತರ

ನಾಮಪತ್ರ ವಾಪಸ್ ಪಡೆದವರು : ಈರಯ್ಯ ಹಿರೇಮಠ, ಕುತ್ಬುದ್ದೀನ ಬೆಳಗಲಿ, ಕುರಿಯವರ ಶರಣಪ್ಪ, ಗುರುಪುತ್ರ ಕುಳ್ಳೂರ, ಘೋರ್ಪಡೆ ಗುರುನಾಥ, ಚಂದ್ರಶೇಖರ ಜುಟ್ಟಲ, ಮಲ್ಲಿಕಾರ್ಜುನ ಕಿತ್ತೂರ, ಯಲ್ಲಪ್ಪ ದಬಗೊಂದಿ, ವಿಶ್ವನಾಥ ಕೂಬಿಹಾಳ, ವೆಂಕನಗೌಡ ಪಾಟೀಲ, ಶಿವಾನಂದ ಬೆಂತೂರ, ಸುರೇಶ ಸವಣೂರ, ಹಜರತ ಅಲಿ ಶೇಖ್ ಅಲಿಸಾಬ್ ಶೇಖ್ ಹಾಗೂ ಹಜರತ್ ಸಾಹೇಬ ನದಾಫ್.

Web Title : The fight between remaining 8 candidates in the Kundogol by-election

Read Today’s Latest and Breaking News in Kannada News Today.