ಲಾಕ್ ಡೌನ್ 2.O, ಕೇಂದ್ರದಿಂದ ಇಂದು ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

The Guidelines is likely to be released from Center today

ಬೆಂಗಳೂರು : ಎಲ್ಲಾ ಅಂದು ಕೊಂಡಂತೆ ಆಗಿದ್ದರೆ, ನೆನ್ನೆಗೆ ಲಾಕ್ ಡೌನ್ ಅಂತ್ಯಗೊಳ್ಳುತ್ತಿತ್ತು, ದಿನೇ ದಿನೇ ಕೊರೋನಾ ಸೋಂಕಿತರು ಹೆಚ್ಚುತ್ತಲೇ ಇದ್ದ ಕಾರಣ ವಿಧಿಸಿದ್ದ ೨೧ ದಿನಗಳ ಲಾಕ್ ಡೌನ್ ಮತ್ತೊಮ್ಮೆ ವಿಸ್ತರಣೆಗೊಂಡಿದೆ. ಇನ್ನೇನು ಲಾಕ್ ಡೌನ್ ಮುಗಿದೇ ಹೋಯ್ತು ಎಂದು ಕೊಂಡು, ದೂರದ ಊರುಗಳಿಗೆ ಹೋಗಬೇಕಾದವರು ಅದಾಗಲೇ ಟ್ರೈನ್ ಟಿಕೆಟ್ ಬುಕ್ ಮಾಡಿದ್ದರು.

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಆರ್ಥಿಕ ವ್ಯವಸ್ಥೆಗಿಂತ ಜನರ  ಜೀವನ ಮುಖ್ಯ, ಈ ಸಂದರ್ಭದಲ್ಲಿ ಲಾಕ್ ಡೌನ್ ಅನಿವಾರ್ಯ ಎಂದು ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಮತ್ತೆ ಮೇ 3ರವರೆಗೆ ಒಟ್ಟು 19 ದಿನಗಳ ಕಾಲ ಲಾಕ್​ಡೌನ್​ ವಿಸ್ತರಿಸಿದರು.

ಒಂದು ವೇಳೆ ಈಗಿನ ಹಾಟ್ ಸ್ಪಾಟ್ ಗಳು ಹೊರತು ಪಡಿಸಿ ಹೊಸ ಹಾಟ್ ಸ್ಪಾಟ್ ಹುಟ್ಟಿಕೊಳ್ಳದಿದ್ದರೆ ಏಪ್ರಿಲ್ 20ರ ಬಳಿಕ ಲಾಕ್​ಡೌನ್ ಸಡಿಲಿಸುವ ಅಥವಾ ಅಂತಹ ಸ್ಥಳಗಳಿಗೆ ವಿನಾಯಿತಿ ಸಿಗುವ ಬಗ್ಗೆ ಸುಳಿವು ಸಹ ಸಿಕ್ಕಿದೆ. ಜೊತೆಗೆ ಆ ಸಮಯದಲ್ಲಿ ಜನ ಯಾವ ರೀತಿ ಇರಬೇಕಾಗುತ್ತದೆ ? ರಾಜ್ಯ ಸರ್ಕಾರಗಳ ಕಾರ್ಯಯೋಜನೆಗಳು ಏನು ? ಯಾವ ರೀತಿ ಕ್ರಮಕ್ಕೆ ಮುಂದಾಗಬೇಕು ?

ಲಾಕ್ ಡೌನ್ 2.O, ಕೇಂದ್ರದಿಂದ ಇಂದು ಮಾರ್ಗಸೂಚಿ ಬಿಡುಗಡೆ ಸಾಧ್ಯತೆ - Kannada News

ಅಷ್ಟೇ ಅಲ್ಲದೆ ಲಾಕ್ ಡೌನ್ ನ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಬಡವರ ಬಗ್ಗೆ ಸರ್ಕಾರ ಯಾವ ರೀತಿ ನೆರವನ್ನು ಚಾಚಲಿದೆ ? ಕಷ್ಟ ಪಟ್ಟು ಬೆಳೆ ಬೆಳೆದ ರೈತ, ರಸ್ತೆಗೆ ಸುರಿದು ದಿಕ್ಕು ತೋಚದಂತಾಗಿದ್ದಾನೆ, ಅವರ ವಿಚಾರದಲ್ಲಿ ಸರ್ಕಾರದ ನಿಲುವು ಏನು ?

ಎಂಬ ನಾನಾ ಪ್ರಶ್ನೆಗಳು ಕಾಡತೊಡಗಿವೆ, ವಿಪಕ್ಷ ನಾಯಕರು ಸಹ ಇವುಗಳ ಬಗ್ಗೆ ಮಾತನಾಡದ ಪ್ರಧಾನಿಯನ್ನು ಟೀಕಿಸಿದ್ದಾರೆ, ಇಂದು ಇವುಗಳ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಅಥವಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ.

Follow us On

FaceBook Google News