“ಸ್ವಾಭಿಮಾನಿಗಳ ಸಮ್ಮಿಲನ ” ಒಂದೇ ವೇದಿಕೆಯಲ್ಲಿ ಸ್ಟಾರ್ ಪ್ರಚಾರ

The star campaign on the same platform as "Swabhimanigala Sammilana"

“ಸ್ವಾಭಿಮಾನಿಗಳ ಸಮ್ಮಿಲನ ” ಒಂದೇ ವೇದಿಕೆಯಲ್ಲಿ ಸ್ಟಾರ್ ಪ್ರಚಾರ

ಮಂಡ್ಯ : ಮೊದಲ ಹಂತದ ಚುನಾವಣಾ ಬಹಿರಂಗ ಪ್ರಚಾರಕ್ಕೆ ಕೇವಲ ಈ ಒಂದು ದಿನ ಬಾಕಿಯಿದ್ದು, ಏನೇ ಕಸರತ್ತು ನಡೆಸಿದರೂ ಇಂದು ಮಾತ್ರ ಮಾಡ ಬೇಕಿದೆ. ಅಕ್ಷರಶ ರಣಕಣವಾಗಿ ಮಾರ್ಪಟ್ಟಿರುವ ಮಂಡ್ಯ ಚುನಾವಣಾ ಕಣದಲ್ಲಿ ಇಂದು ಮಹಾ ಪ್ರಚಾರಗಳು, ಬೃಹತ್ ವೇದಿಕೆಗಳು ಸಿದ್ದಗೊಳ್ಳುತ್ತಿವೆ. ಕೊನೆಯ ಗಳಿಗೆಯಲ್ಲಿ ಮತದಾರರನ್ನು ಸೆಳೆಯಲು ಪಕ್ಷಗಳು ತಯಾರಿ ನಡೆಸಿವೆ.

ಒಂದೆಡೆ ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ, ಸುಮಲತಾ, ದರ್ಶನ್, ಯಶ್ ಮತ್ತು ಅಭಿಷೇಕ್ ” ಸ್ವಾಭಿಮಾನಿಗಳ ಸಮ್ಮಿಲನ ” ಎಂಬ ಬೃಹತ್ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಬಹಿರಂಗ ಪ್ರಚಾರದ ಕೊನೆಯ ದಿನ ಮತಬೇಟೆಗೆ ಕೊನೆಯ ಕಸರತ್ತು ನಡೆಯಲಿದೆ.

ಇನ್ನೊಂದೆಡೆ, ಕುದ್ದು ಸಿ.ಎಂ.ಕುಮಾರಸ್ವಾಮಿಯೇ ಮಗನ ಗೆಲುವಿಗಾಗಿ ಫೀಲ್ಡಿಗೆ ಇಳಿದಿದ್ದು, ಇಂದು ಹಲವಾರು ಗ್ರಾಮಗಳ ಭೇಟಿ ಹಾಗೂ ಸ್ಥಳೀಯ ಮುಖಂಡರ ಜೊತೆ ಚರ್ಚೆಗೆ ಸಿದ್ಧತೆ ನಡೆಸಿದ್ದಾರೆ.

ಚುನಾವಣೆಯಲ್ಲಿ ಈ ಬಾರಿ ಹಣದ ಆಮಿಷ ತೋರಬಹುದು ಎಂಬ, ಸಂದೇಹದಿಂದ ಖುದ್ದು, ದರ್ಶನ್ ಹೋದ ಬಂದ ಕಡೆಯೆಲ್ಲಾ, ಹಣದ ಆಮಿಷಕ್ಕೆ ಬಲಿಯಾಗ ಬೇಡಿ, ನಿಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಡಬೇಡಿ, ಎಂದು ಮನವಿ ಮಾಡುತ್ತಿದ್ದರು. ಇದೀಗ ಅದೇ ಹೆಸರಿನ ” ಸ್ವಾಭಿಮಾನಿಗಳ ಸಮ್ಮಿಲನ ” ಎಂಬ ಬೃಹತ್ ವೇದಿಕೆಯಲ್ಲಿ ಎಲ್ಲಾ ಸ್ಟಾರ್ ಗಳು ಕಾಣಿಸಿಕೊಳ್ಳಲಿದ್ದು, ಸಾವಿರಾರು ಜನರು ಜಮಾಯಿಸುವ ಸಾಧ್ಯತೆ ಇದೆ.

ನಿಖಿಲ್ ಗೆ ಕುಮಾರಸ್ವಾಮಿ ಖುದ್ದು,ಸಾಥ್ ನೀಡಿರುವುದು ಆನೆ ಬಲ ಬಂದಂತಾಗಿದೆ, ಯಾರು ಏನೇ ಆರ್ಭಟಿಸಿದರೂ ಜನ ನಮ್ಮ ಕೈ ಹಿಡಿಯುತ್ತಾರೆಂದು ಅಚಲ ನಂಭಿಕೆ ಇಟ್ಟಿದ್ದಾರೆ. ಇನ್ನು ಕೊನೆ ಗಳಿಗೆಯ ಕ್ಲೈಮಾಕ್ಸ್ ಅಂತದ ಪ್ರಚಾರದಲ್ಲಿ ಯಾರು ಮತದಾರರನ್ನು ತಮ್ಮೆಡೆ ಸೆಳೆದು ಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ..

Follow us On

FaceBook Google News

Read More News Today