Siddaramaiah V/S Yeddyurappa, ಡೂಪ್ಲಿಕೇಟ್ ಸರ್ಕಾರ, ಬುರುಡೆ ಯಡಿಯೂರಪ್ಪ : ಸಿದ್ದರಾಮಯ್ಯ

The Yeddyurappa government treasury is empty, says siddaramaiah

ಕನ್ನಡ ನ್ಯೂಸ್ ಟುಡೇ

ಬಿ.ಎಸ್.ವೈ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಷ್ಟು ದಿವಸ ಸೈಲೆಂಟಾಗಿದ್ದ ಟಗರು ಸಿದ್ದರಾಮಯ್ಯ ರಾಜಾಹುಲಿ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. ಯಾವುದೇ ಅಭಿವೃದ್ಧಿ ಮಾಡಲು ಸರ್ಕಾರದಲ್ಲಿ ಹಣವಿಲ್ಲ ಎಂದು ಕೆಂಡಕಾರಿದ್ದಾರೆ.

ಖಾತೆ ಹಂಚಿಕೆಯ ತಲೆ ಬಿಸಿ ಕಡಿಮೆ ಆದ ಬಳಿಕ, ರಾಜ್ಯ ಬಜೆಟ್ ನಡೆಸಲು ಬಿ.ಎಸ್.ವೈ ತಯಾರಿನಡೆಸುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದ್ದು, ದುಡ್ಡಿಲ್ಲದ ದಾರಿದ್ರ್ಯದ ಸರ್ಕಾರವಿದು ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಶಿಕ್ಷಕರಿಗೆ ಸಂಬಳ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಎರಡು ಕಂತುಗಳ ಜಿ.ಎಸ್.ಟಿ ಪಾಲು ಬಂದಿಲ್ಲ, ಜೊತೆಗೆ ನೆರೆ ಪರಿಹಾರವೂ ಸಿಕ್ಕಿಲ್ಲ ಎಂದರು.

ಖುರ್ಚಿ ಉಳಿಸಿಕೊಳ್ಳಲು ಯಡಿಯೂರಪ್ಪ ಏನೆಲ್ಲಾ ಸರ್ಕಸ್ ಮಾಡಿದರು, ಆದರೆ ಕೇಂದ್ರದಿಂದ ಹಣ ತರಲು ಯಾವ ಪ್ರಯತ್ನ ಮಾಡಿದ್ದಾರೆ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಖಜಾನೆ ಖಾಲಿ ಮಾಡಿಕೊಂಡಿರುವ ಯಡಿಯೂರಪ್ಪ ಸರ್ಕಾರ ಡೂಪ್ಲಿಕೇಟ್ ಸರ್ಕಾರ, ಯಡಿಯೂರಪ್ಪ ಬರಿ ಬುರುಡೆ ಬಿಟ್ಟುಕೊಂಡು ಓಡಾಡುತ್ತಾರೆ, ಬಜೆಟ್ ಅಧಿವೇಶನದಲ್ಲಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಧಿವೇಶನದಲ್ಲೇ ಇದಕ್ಕೆ ನಾನೂ ಉತ್ತರಿಸುತ್ತೇನೆ ಎಂದಿದ್ದಾರೆ.

Web Title : The Yeddyurappa government treasury is empty, says siddaramaiah
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.