ಬಾಗಲಕೋಟೆ, ಕೈ ಮತ್ತು ಕಮಲದ ನಡುವೆ ಭಾರಿ ಪೈಪೋಟಿ

there was a huge contest between the Congress and the BJP In Bagalkot

ಬಾಗಲಕೋಟೆ, ಕೈ ಮತ್ತು ಕಮಲದ ನಡುವೆ ಭಾರಿ ಪೈಪೋಟಿ – there was a huge contest between the Congress and the BJP In Bagalkot – Kannada News Today

ಬಾಗಲಕೋಟೆ, ಕೈ ಮತ್ತು ಕಮಲದ ನಡುವೆ ಭಾರಿ ಪೈಪೋಟಿ

ಬಾಗಲಕೋಟೆ : ಲೋಕಸಭಾ ಚುನಾವಣೆಯಲ್ಲಿ ಲೋಕ ಸಮರದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಬಾಗಲಕೋಟೆ ಜಿಲ್ಲೆಯ ಲೋಕ ಸಭಾ ಚುನಾವಣ ಕಣ ರಂಗೇರುತ್ತಿದ್ದು ಕಮಲ ಮತ್ತು ಕೈ ಹುರಿಯಾಳುಗಳ ಮಧ್ಯೆ ಭಾರಿ ಪೈಪೋಟಿ ನಡೆದಿದೆ.

ಬಿಜೆಪಿಯಿಂದ ಹಾಲಿ ಸಂಸದ ಶ್ರೀ ಪೀ ಸಿ ಗಡ್ಡಿಗೌಡರ್ ಕಣದಲ್ಲಿದ್ದರೆ ಕಾಂಗ್ರೆಸ್ ನಿಂದ ವೀಣಾ ಕಶಪನವರ ಅಖಾಡದಲ್ಲಿದ್ದಾರೆ. ಇಬ್ಬರ ನಾಯಕರ ಪ್ರತೀಷ್ಠೆಯ ಕಣವಾದ ಈ ಲೋಕಸಭಾ ಚುನಾವಣೆ ಗೆಲುವು ಯಾರ ಮಡಿಲಿಗೆ ಸೇರುತ್ತದೆ ಎಂದು ಕಾದುನೋಡಬೇಕಾಗಿದೆ.

ಈ ಹಿಂದಿನ ಚುನಾವಣೆ ಅವಲೋಕಿಸಿದರೆ ಬಿಜೆಪಿ ಪಕ್ಷ ಹಿಂದುತ್ವ ನೆಲ ಯೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಕೆಲಸ ಮಾಡಿದ್ದು ಜೊತೆಗೆ ಜಿಲ್ಲೆಯಲ್ಲಿ ಲಿಂಗಾಯತ ಮತ ಹೆಚ್ಚಿದ್ದು ಕಣದಲ್ಲಿ ಪ್ರಬಲ ಲಿಂಗಾಯತ ಗಾಣಿಗ ಸಮುದಾಯದ ಶ್ರೀ ಪಿಸಿ ಗದ್ದಿಗೌಡರ್ ಕಣದಲ್ಲಿ ಇದ್ದಿದ್ದರಿಂದ ಸುಲಭವಾಗಿ ಬಿಜೆಪಿ ಭದ್ರ ಕೋಟೆಯಾಗಿದೆ. ಲಿಂಗಾಯಿತರು ಬಿಜೆಪಿಯ ಸಂಪ್ರದಾಯಕ ಮತ ಗಳಾಗಿದ್ದು ಕಾಂಗ್ರೆಸ 1.25 ಲಕ್ಷದ ಅಂತರದಲ್ಲಿ ಸೋಲಲು ಈ ಪ್ರಬಲ ಸಮುದಾಯ ಕಾರಣವಾದ ಸತ್ಯ ಬಯಲಾಗಿದೆ.

ಕಾಂಗ್ರೆಸ್ ರಾಜಕೀಯ ತಂತ್ರ : ಜಿಲ್ಲೆಯಲ್ಲಿ ಬಿಜೆಪಿಯ ವಿಜಯದ ನಾಗಾಲೋಟಕ್ಕೆ ಕಾಂಗ್ರೆಸ್ ಪಕ್ಷ ದಾಳ ಹೊಡೆದು ಜಿಲ್ಲೆಯ ಚಿರಪರಿಚಿತರಾಗಿರುವ ಜನರ ಮನೆ ಮಗಳು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೀಣಾ ಕಾಶಪ್ಪನವರ್ ಲಿಂಗಾಯತ ಪ್ರಬಲ ಪಂಚಮಸಾಲಿ ಸಮುದಾ ಯದ ವೀಣಾ ಕಾಶಪ್ಪನವರ್ ಅವರನ್ನು ಕಣಕ್ಕಿಳಿಸಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಜೆಪಿ ಸಂಪ್ರದಾಯಕ ಮತಗಳ ಆದ ಲಿಂಗಾಯತ ಮತಗಳು ಈ ಬಾರಿ ಅರ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪಾಲಾಗಿದ್ದು ಬಿಜೆಪಿಗೆ ಸೋಲಿನ ಭೀತಿ ಕಾಡಲಾರಂಭಿಸಿದೆ.

ಇತಿಹಾಸದಿಂದಲೂ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಆದ ಕುರುಬ ಮುಸ್ಲಿಂ ಎಸ್ಸಿ ಎಸ್ಟಿ ಹಾಗೂ ಹಿಂದುಳಿದವರ ಮತಗಳು ನಿರಾಯಾಸವಾಗಿ ಬರುತ್ತವೆ.ಆದರೆ ಲಿಂಗಾಯತ ಮತಗಳು ಬೆಳೆದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಬೇಕಾಗಿತ್ತು. ಆದರೆ ಈ ಬಾರಿ ಇತಿಹಾಸ ಬದಲಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅಧ್ಯಕ್ಷೆಯಾದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಪ್ರಚಾರ ಮಾಡುತ್ತಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಶ್ರೀ ಪಿಸಿ ಗದ್ದಿಗೌಡರ್ ಅವರ ಸೋಲಿನ ವೀಣೆ ನುಡಿಸುತ್ತಾರಾ ವಿಜಯಾನಂದ ಕಾಶಪ್ಪನವರ್ ಎಂಬುದನ್ನ ಕಾದು ನೋಡಬೇಕಾಗಿದೆ.

Web Title  : there was a huge contest between the Congress and the BJP In Bagalkot