ವೈರಲ್ ಆಯ್ತು “ಉತ್ತರ ಕೊಡಿ ಶಾ” ಟ್ವಿಟರ್ ಅಭಿಯಾನ
Twitter campaign Goes Viral about Amith Shah - Hubballi News
ಕನ್ನಡ ನ್ಯೂಸ್ ಟುಡೇ – Politics News
ಹುಬ್ಬಳ್ಳಿ : ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಪ್ರತಿಭಟಿಸುವುದು ಎಂದರೆ ದೇಶದ್ರೋಹಿ ಕೃತ್ಯ ಎನ್ನುವಂತೆ ಬಿಜೆಪಿ ಬಿಂಬಿಸುತ್ತಿದೆ. ಈಗ ಅಮಿತ್ ಶಾ ರಾಜ್ಯಕ್ಕೆ ಬಂದು ಪೌರತ್ವದ ಪರ ಸುಳ್ಳುಗಳನ್ನು ಹೇಳುವ ಮೂಲಕ ತಮ್ಮ ಸರ್ಕಾರದ ಆರ್ಥಿಕ ದೌರ್ಬಲ್ಯಗಳನ್ನು ಮರೆ ಮಾಚುವ ವ್ಯವಸ್ಥಿತ ಹುನ್ನಾರ ಮಾಡುತ್ತಿದ್ದಾರೆ ಎಂದು ಹಲವಾರು ಪ್ರಶ್ನೆಗಳನ್ನು ಎತ್ತಿರುವ ರಾಜ್ಯ ಕಾಂಗ್ರೆಸ್ ‘ಉತ್ತರ ಕೊಡಿ ಶಾ’ ಎಂಬ ಟ್ವೀಟರ್ ಅಭಿಯಾನವನ್ನು ಶನಿವಾರ ನಡೆಸಿದ್ದು, ಇದಕ್ಕೆ ವ್ಯಾಪಕ ಬೆಂಬಲ ಸಿಕ್ಕಿತು.
ಉತ್ತರಕೊಡಿ ಶಾ ಎಂಬ ಹ್ಯಾ಼ಷ್ಟ್ಯಾಗ್ ಮೂಲಕ ಈ ಅಭಿಯಾನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬಂದಾಗ ಪ್ರಗತಿಪರ ಸಂಘಟನೆಗಳು ಗೋಬ್ಯಾಕ್ಮೋದಿ ಎಂಬ ಟ್ವಿಟರ್ ಅಭಿಯಾನ ನಡೆಸಿದ್ದವು ಮತ್ತು ಇದು ಆ ದಿನ ಟ್ರೆಂಡಿಂಗ್ ನಲ್ಲಿ ಟಾಪ್ ಇತ್ತು. ಕಪ್ಪು ಹಣ ಬಂತಾ? ಅಚ್ಛೇದಿನ್ ಎಲ್ಲಿ? ಉದ್ಯೋಗ ಸೃಷ್ಟಿ ಮರೆತಿರಾ? ಜಿಡಿಪಿ ಕುಸಿತ ತಡೆಯಲು ಆಗುತ್ತಿಲ್ಲವೇ? ರಾಜ್ಯಕ್ಕೆ ಯಾಕೆ ಅನುದಾನ ನೀಡುತ್ತಿಲ್ಲ ಮುಂತಾದ ಪ್ರಶ್ನೆಗಳನ್ನು ಅಮಿತ್ ಶಾರವರಿಗೆ ಕಾಂಗ್ರೆಸ್ ಕೇಳಿದೆ.////
Quick Links : Kannada Politics News | Karnataka Politics News