ಮುಂದಿನ ಚುನಾವಣೆಗೆ ಪ್ರಜಾಕೀಯ ಸಜ್ಜು

Upendra's Prajakiya Party preparing for next election

ಮುಂದಿನ ಚುನಾವಣೆಗೆ ಪ್ರಜಾಕೀಯ ಸಜ್ಜು – Upendra’s Prajakiya Party preparing for next election

ಮುಂದಿನ ಚುನಾವಣೆಗೆ ಪ್ರಜಾಕೀಯ ಸಜ್ಜು

ಐ ಲವ್ ಯು ಸಿನಿಮಾ ಸಕ್ಸಸ್ ಮೀಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ ಮುಂದಿನ ಚುನಾವಣೆಗೆ ಸಜ್ಜಾಗುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಚಿತ್ರ ಐ ಲವ್ ಯು, ಅಭಿಮಾನಿಗಳ ಮನ ಗೆದ್ದಿದ್ದು ಅದರ ಸಕ್ಸಸ್ ಮೀಟ್ ನಲ್ಲಿ ಉಪೇಂದ್ರ ಈ ಬಗ್ಗೆ ತಿಳಿಸಿದ್ದಾರೆ.

ರಾಜಕೀಯ ಬೆಳವಣಿಗೆ ಬಗೆಗೆ ಮಾತನಾಡಿದ ಉಪೇಂದ್ರ, ” ನೀವೇ ನೋಡಿದಂತೆ, ಈಗಿನ ರಾಜಕೀಯ ಬೆಳವಣಿಗೆಯಲ್ಲಿ ಕೇವಲ ಹದಿನೈದು ಸೀಟ್, ಎಷ್ಟು ಮುಖ್ಯವೆಂದು ತಿಳಿಯಬಹುದು, ಹತ್ತು, ಹದಿನೈದು ಸೀಟ್ ಗೆ ಒಂದು ಸರ್ಕಾರವೇ ಉರುಳಿ ಹೋಗುತ್ತದೆ ಅಥವಾ ದೊಡ್ಡ ಸಂದಿಗ್ನ ಪರಿಸ್ಥಿತಿಯಲ್ಲಿ ಸಿಲುಕುತ್ತದೆ ಎಂದರೆ, ಒಂದೊಂದು ಸೀಟ್ ಗೂ ಬಹಳ ಪ್ರಾಮುಖ್ಯತೆ ಇದೆ. ಹಾಗೂ ಇದೊಂತರ ಇದು ನಮ್ಮ ಪಕ್ಷಕ್ಕೆ ದೇವರ ಆಶೀರ್ವಾದವೇ ಸರಿ” ಎಂದರು.

ರಿಯಲ್ ಸ್ಟಾರ್ ಉಪೇಂದ್ರ, ಅವರ ರಿಯಲ್ ವರ್ಡ್ ನಲ್ಲೆ ಮಾತನಾಡಿ ” ನಾನು ಎಂದಿನಂತೆ ಮತ್ತೆ ಜನಗಳಿಗೆ ಆಯ್ಕೆ ಬಿಡುತ್ತೇನೆ, ಅಧಿಕಾರವನ್ನು ನೀವೇ ಇಟ್ಕೊಂಡು, ಹದಿನೈದು ಜನನಾಯಕರನ್ನು ಪಕ್ಷಕ್ಕೆ ಕೊಡಿ, ಅದು ನೀವು ಹೇಳುವಂತೆ ಕೇಳುವ ನಾಯಕರು . .

ಇದು ನಿಮ್ಮ ಪಕ್ಷ , ನೀವು ಹೇಳುವದನ್ನು ಕೇಳುವ ಪಕ್ಷವಿದು, ಆಗ ಬೇಕಾಗಿರುವ ಕೆಲಸಗಳಿಗೆ ಪ್ರಜಾಕೀಯ ಪಕ್ಷ ನಿಮ್ಮ ದ್ವನಿಯಾಗಿರುತ್ತದೆ, ನಿಮಗೆ ಬೇಕಾದ ರೀತಿಯಲ್ಲಿ ಪಕ್ಷವನ್ನು ಬೆಳಸಿ, ಬೆಂಬಲಸಿ. ” ಎಂದರು. ಹಾಗೆ ಜನಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತರೆ ಮುಂದಿನ ಚುನಾವಣೆಗೆ ಪ್ರಜಾಕೀಯ ಸಜ್ಜಾಗಲಿದೆ ಎಂಬುದನ್ನು ರಿಯಲ್ ಸ್ಟಾರ್ ಉಪೇಂದ್ರ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಗಿನ ರಾಜಕೀಯ ಬೆಳವಣಿಗೆ ನೋಡ್ತಾ ಇದ್ರೆ, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬುದು  ನೆನಪಾಗದೆ ಇರದು.

ಮುಂದಿನ ಚುನಾವಣೆಯಲ್ಲಿ ಪ್ರಜಾಕೀಯ ಯಾವ ರೀತಿ ಹವಾ ಕ್ರಿಯೇಟ್ ಮಾಡುತ್ತೋ ಕಾದು ನೋಡಬೇಕಾಗಿದೆ.////

Web Title : Upendra’s Prajakiya Party preparing for next election