ಬೈ ಎಲೆಕ್ಷನ್ ಕನಸಿಗೆ ಬೀಳುತ್ತಾ ತಣ್ಣೀರು

ಬೈ ಎಲೆಕ್ಷನ್ ಕನಸಿಗೆ ಬೀಳುತ್ತಾ ತಣ್ಣೀರು

ರಮೇಶ್, ಕುಮಠಳ್ಳಿ, ಪಕ್ಷೇತರ ಅಭ್ಯರ್ಥಿ ಶಂಕರ್ ಗೆ ಶಾಕ್ ಕೊಟ್ಟ ಸ್ಪೀಕರ್ ರಮೇಶ್ ಕುಮಾರ್ ತೀರ್ಪು ಮುಂಬೈನಲ್ಲಿರುವ ರೆಬೆಲ್ಸ್ ಟೀಮ್ಗೆ ಟೆನ್ಷನ್ ಹೆಚ್ಚಾಗಿಸಿದೆ. ಡಿಕೆಶಿ ಹೇಳಿದಂತೆ ನಾವು ಬಿಜೆಪಿ ಹಿಂದೆ ಬಿದ್ದಿದ್ದೆ ತಪ್ಪಾಯ್ತಾ ? ಅದುವೇ ನಮ್ಮ ರಾಜಕೀಯ ಭವಿಷ್ಯಕ್ಕೆ ಮುಳುವಾಯಿತಾ ಎಂಬ ಚಿಂತೆ ಅವರನ್ನು ಕಾಡಲಾರಂಭಿಸಿದೆ.

ಬೈ ಎಲೆಕ್ಷನ್ ಗೆ ನಿಂತು ಗೆಲ್ಲುವ ಆಸೆಗೆ ಬಿತ್ತು ತಣ್ಣೀರು

ಸರ್ಕಾರವನ್ನು ಉರುಳಿಸಿದ್ದೇನೋ ಆಯಿತು, ಇನ್ನು ಬೈ ಎಲೆಕ್ಷನ್ ಗೆ ನಿಂತು ಗೆಲ್ಲ ಬೇಕೆಂದಿದ್ದ ರೆಬಲ್ ಟೀಂ ಕನಸಿಗೆ ತಣ್ಣೀರು ಬಿದ್ದಂತಾಗಿದೆ. ಮುಂದೆ ನಡೆಯೋ ಎಲೆಕ್ಷನ್ ಕಥೆ ಏನಾದರಾಗಲಿ ಸದ್ಯ ನಮ್ಮನ್ನ ಅನರ್ಹ ಗೊಳಿಸದಿದ್ದರೆ ಸಾಕು ಎಂದು ಕೊಂಡಿದ್ದಾರೆ.

ತಮ್ಮ ತಂಡದ ಮೂವರು ಶಾಸಕರನ್ನು ಸ್ಪೀಕರ್ ಅನರ್ಹ ಗೊಳಿಸಿರುವುದರಿಂದ ಒಂದೆಡೆ ರೆಬೆಲ್ ನಾಯಕರು ಹಾಕಿಕೊಂಡಿದ್ದ ಪ್ಲಾನ್ ಎಲ್ಲಾ ತಲೆಕೆಳಗಾಗಿದೆ. ಇಷ್ಟು ದಿನ ಭೋಜನ, ಭಜನೆ, ತೋಟದ ಮನೆ, ರೆಸಾರ್ಟ್ ಅಂತ ಕೂಲ್ ಮೂಡ್ನಲ್ಲಿದ್ದ ರೆಬೆಲ್ಸ್ ಗೆ ಬಿಸಿ ತಟ್ಟಿದೆ.

ಮೂವರಂತೆ ನಮ್ಮನ್ನು ಅನರ್ಹಗೊಳಿಸಿದರೆ ಮುಂದೇನು ಮಾಡುವುದು ಎಂಬ ಟೆನ್ಷನ್ ಹೆಚ್ಚಾಗಿದೆ, ಒಂದೆಡೆ ಎಲ್ಲರನ್ನೂ ಅನರ್ಹ ಮಾಡಿದ್ದಾದರೆ ಕೋರ್ಟ್ ಮೆಟ್ಟಿಲೇರ ಬಹುದಾದರೂ ಕೋರ್ಟ್ ಕೂಡ ಸ್ಪೀಕರ್ ತೀರ್ಪನ್ನೇ ಎತ್ತಿ ಹಿಡಿದರೆ, ಅಲ್ಲಿಗೆ ಕ್ಲೈಮ್ಯಾಕ್ಸ್ ಅಂತಲೇ ಅರ್ಥ. ಆಮೇಲೆ ಉಪ ಚುನಾವಣೆಗೆ ನಿಲ್ಲುವ ನಮ್ಮ ಕನಸಿಗೆ ತಣ್ಣೀರು ಎರಚಿದಂತೆ ಎಂದು ಅತೃಪ್ತರಿಗೆ ಭಯ ಕಾಡುತ್ತಿದೆ.

ಒಟ್ಟಿನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿ, ಬಿಸಿಮುಟ್ಟಿಸಿದ್ದಾರೆ. ಸಧ್ಯ ಸ್ಪೀಕರ್ ರವರ ನಿರ್ಧಾರದಿಂದ ಅತೃಪ್ತರಿಗೆ ಬರಸಿಡಿಲು ಬಡಿದಂತಾಗಿದೆ. ಅನರ್ಹ ಶಾಸಕರ ಮುಂದಿನ ನಡೆಯೇನು ? ಉಳಿದ ಅತೃಪ್ತರು ಏನ್ ಮಾಡ್ತಾರೆ. ಎಂಬುದನ್ನು ಕಾದುನೋಡಬೇಕಾಗಿದೆ.////