ವಾಟ್ಸ್ ಅಪ್ ನಲ್ಲಿ ಹರಿದಾಡ್ತಿರುವ, ಈ ಫೋಟೋಗಳ ಅಸಲಿಯತ್ತೇನು ?

What's the truth about these Viral photos

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ ಸಧ್ಯ ಮಿನಿ ಕರ್ನಾಟಕವಾಗಿದೆ, ಘಟಾನು ಘಟಿ ರಾಜಕಾರಣಿಗಳ ಚಿತ್ತ ಕೇವಲ ಮಂಡ್ಯ ಕ್ಷೇತ್ರದ ಮೇಲಿದೆ, ಕಾರಣ ಒಂದೆಡೆ ಸಿ.ಎಂ.ಕುಮಾರಸ್ವಾಮಿಯ ಪ್ರತಿಷ್ಠೆಯ ಕಣ. ಇನ್ನೊಂದೆಡೆ ಇಲ್ಲಿ ಮೋದಲ ಗೆಲುವು ಸಿಕ್ಕಿದರೆ ರಾಜಕಾರಣದಲ್ಲಿ ತಿರುಗಿ ನೋಡದಂತೆ ಬೆಳೆಯಬಹುದು.

ಮಂಡ್ಯ ಜನ ಒಲಿದರೆ ಗೆಲುವು ಖಚಿತ, ಎಂಬ ದೃಢ ನಂಭಿಕೆ ರಾಜಕಾರಣಿಗಳಲ್ಲಿ ಮನೆ ಮಾಡಿದೆ. ನೆನ್ನೆಯಷ್ಟೇ ಕುಮಾರಸ್ವಾಮಿ ಮಗನ ಗೆಲುವಿಗಾಗಿ ಸ್ಥಳೀಯ ಮುಖಂಡರ ಜೊತೆ ಚರ್ಚೆ, ಮತದಾರರ ಬಳಿ ಮಾತು ಕತೆ ನಡೆಸಿದರು. ಇತ್ತ ಸುಮಲತಾ ಅಂಡ್ ಟೀಮ್ ಸ್ವಾಭಿಮಾನಿಗಳ ಸಮ್ಮಿಲನ ಎಂಬ ಬೃಹತ್ ಸಮಾವೇಶ ಹಮ್ಮಿಕೊಂಡು ತಮ್ಮ ಗೆಲುವಿಗಾಗಿ ಮತದಾನದ ಜೋತೆಗೆ ನಾವು ನಿಮ್ಮಲ್ಲಿ ಕೇಳುತ್ತಿರುವ ಸ್ವಾಭಿಮಾನದ ಭಿಕ್ಷೆ ನೀಡಿ ಎಂದು ಕೇಳಿ ಕೊಂಡಿದ್ದರು.

ಈ ನಡುವೆ ಸಧ್ಯ ವಾಟ್ಸ್ ಅಪ್ ಮತ್ತು ಫೇಸ್ ಬುಕ್ ನಲ್ಲಿ ಕೆಲವೊಂದು ಫೋಟೋಗಳು ಹರಿದಾಡುತ್ತಿದ್ದು, ತೀವ್ರ ಸಂಚಲನ ಮೂಡಿಸಿವೆ. ಅಂಬರೀಶ್ ಹಾಗೂ ಚಾಮುಂಡೇಶ್ವರಿ ದೇವಿಯ ಫೋಟೋ ಮೇಲೆ ಐನೂರು ನೋಟನ್ನು ಇಟ್ಟು, ಪ್ರಮಾಣ ಮಾಡಿಸಿಕೊಂಡು ಸುಮಲತಾರಿಗೆ ಮತ ನೀಡಬೇಕೆಂದು, ಸುಮಲತಾ ಪರ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ, ಎಂದು ಆರೋಪಿಸಲಾಗಿದೆ.ವಾಟ್ಸ್ ಅಪ್ ನಲ್ಲಿ ಹರಿದಾಡ್ತಿರುವ, ಈ ಫೋಟೋಗಳ ಅಸಲಿಯತ್ತೇನು

ವಾಟ್ಸ್ ಅಪ್ ನಲ್ಲಿ ಹರಿದಾಡ್ತಿರುವ, ಈ ಫೋಟೋಗಳ ಅಸಲಿಯತ್ತೇನು ? - Kannada News

ಸಧ್ಯ ಇದೆ ರೀತಿಯ ಹಲವು ಫೋಟೋಗಳು , ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಏನು ಎಂಬುದು ನಿಗೂಢ. ಇಲ್ಲವೇ ಸುಮಲತಾರ ಪರ ಈ ವೊಂದು ಅಪಪ್ರಚಾರ ನಡೆಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ ತಿಳಿಯುತ್ತಿಲ್ಲ……

Web Title  : ವಾಟ್ಸ್ ಅಪ್ ನಲ್ಲಿ ಹರಿದಾಡ್ತಿರುವ, ಈ ಫೋಟೋಗಳ ಅಸಲಿಯತ್ತೇನು ? – What’s the truth about these Viral photos

Follow us On

FaceBook Google News

Read More News Today