ಕರ್ನಾಟಕ ಉಪ-ಮುಖ್ಯಮಂತ್ರಿ ಇವರೇನಾ ?

Who is the Deputy Chief Minister of Karnataka ? । Karnataka Politics News

ಕರ್ನಾಟಕ ಉಪ-ಮುಖ್ಯಮಂತ್ರಿ ಇವರೇನಾ ? – Who is the Deputy Chief Minister of Karnataka

ಕರ್ನಾಟಕ ಉಪ-ಮುಖ್ಯಮಂತ್ರಿ ಇವರೇನಾ ?

ಕನ್ನಡ ನ್ಯೂಸ್ ಟುಡೇ : ತಾನು ಯಾವುದೇ ಜಿಲ್ಲೆಗೆ, ಯಾವದೇ ವರ್ಗಕ್ಕೆ ಸೀಮಿತವಾಗಿಲ್ಲ, ತನ್ನ ರಾಜಕೀಯ ಜೀವನ ಪ್ರಜಾ ಸೇವೆಗೆ ಅಂಕಿತ ಮಾಡಿದ್ದೇನೆ, ಹೈ ಕಮಾಂಡ್ ನಿರ್ಣಯಗಳನ್ನು ತಪ್ಪದೇ ಪಾಲಿಸುತ್ತೇನೆ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಬಳ್ಳಾರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಸರ್ಕಾರದಲ್ಲಿ, ಕ್ಯಾಬಿನೆಟ್ ವಿಸ್ತರಣೆ ವಿಳಂಬವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಮಂತ್ರಿಮಂಡಲ ವಿಸ್ತರಣೆ ಕುರಿತು ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ, ಆದರೆ ಯಾರು ಉಪಮುಖ್ಯಮಂತ್ರಿ ಆಗುತ್ತಾರೆ ಎಂಬ ಬಗ್ಗೆ ಪ್ರಸ್ತುತ ತಾನು ಏನು ಮಾತನಾಡಲು ಹೋಗುವುದಿಲ್ಲ, ಎಂದರು.

ಹೈಕಮಾಂಡ್ ಡಿಸಿಎಂ ಸ್ಥಾನದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ತಾನು ಬದ್ಧನಾಗಿರುತ್ತೇನೆ ಎಂದರು. ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ತಮಗೆ ಮಂತ್ರಿ ಸ್ಥಾನ ಲಭಿಸುತ್ತದೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು , ತನ್ನಂತೆಯೇ ರಾಜಕೀಯ ಸಮರ್ಥರು ಪಕ್ಷದಲ್ಲಿ ಇದ್ದಾರೆ, ಹಾಗೂ ತನಗೂ ಮತ್ತು ಬಿಜಿಪಿ ಕಾರ್ಯಕರ್ತರಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕು ಎಂಬ ಆಶಯ ಮಾತ್ರ ಇತ್ತು ಎಂದರು.
ಕಾಂಗ್ರೆಸ್ ಅಸಂತೃಪ್ತ ಶಾಕರಿಗೆ ಟಿಕೆಟ್ ನೀಡುವುದರ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಆಲೋಚಿಸಿ ನಿರ್ಧಾರ ತೆಗೆದು ಕೊಳ್ಳುವ ಅವಶ್ಯಕತೆ ಇದೆ, ಅಸಂತೃಪ್ತರಿಗೆ ಮಂತ್ರಿ ಸ್ಥಾನ ನಿಡಲೇಬೇಕಿದೆ, ಅವರು ಸಹ ಸರ್ಕಾರ ರಚನೆಗೆ, ಬಿಜೆಪಿಗೆ ಸಹಕರಿಸಿದ್ದಾರೆ. ಅವರನ್ನು ಸಮಾಧಾನ ಪಡಿಸುವ ಜವಾಬ್ದಾರಿ ಪಕ್ಷಕ್ಕಿದೆ ಎಂದರು.
ಸದ್ಯ, ರಾಜೀನಾಮೆ ನೀಡಿರುವ ಕ್ಷೇತ್ರಗಳ 17 ಸ್ಥಾನಗಳಿಗೆ ಉಪಚುನಾವಣೆ ನಡೆದರೆ, ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ, ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಎಂದರು.////
Web Title : Who is the Deputy Chief Minister of Karnataka