ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಹಾರಕ್ಕಾಗಿ ದೇವರ ಮೊರೆ – ಎಚ್.ಡಿ. ಕುಮಾರಸ್ವಾಮಿ
Worship for the drought situation relief in the state
ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಹಾರಕ್ಕಾಗಿ ದೇವರ ಮೊರೆ – ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಪರಿಹಾರಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪೂಜೆ ಮತ್ತು ಯಜ್ಞಗಳ ಮೂಲಕ ವರುಣನ ಮೊರೆ ಹೋಗಲು ನಿರ್ಧರಿಸಿದ್ದಾರೆ. ದೇವರ ವಿಶೇಷ ಪೂಜೆ ಪುನಸ್ಕಾರದಿಂದ ಮಳೆ ಬರುತ್ತದೆ ಎಂದು ಜ್ಯೋತಿಷಿಗಳು ಹೇಳಿರುವ ಹಿನ್ನೆಲೆ ದೇವರ ಸಿದ್ಧತೆ ನಡೆದಿದೆಯಂತೆ.
ಈ ವರ್ಷ ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳಲ್ಲಿದೆ ಎಂದು ಖ್ಯಾತ ಜ್ಯೋತಿಷಿ ದ್ವಾರಕನಾಥ್ ಮುಖ್ಯಮಂತ್ರಿಗೆ ತಿಳಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಕೈಗಾ, ಶೃಂಗೇರಿ ಹಾಗೂ ಮತ್ತಿತರ ಕಡೆಗಳಲ್ಲಿ ಪೂಜೆ ನಡೆಸಲು ನಿರ್ಧರಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಕೈಗಾದಲ್ಲಿ ವಿಶೇಷ ಪೂಜೆ ಮಾಡಿದ್ದರೆ ಭಾರೀ ಮಳೆಯಾಗಲಿದೆ ಎಂಬ ಸಲಹೆ ಮೇರೆಗೆ ಅಲ್ಲಿ ಪೂಜೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಪ್ರತಿಪಕ್ಷ ಹಾಗೂ ರೈತರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಮಂತ್ರಕ್ಕೆ ಮಾವಿನ ಹಣ್ಣು ಉದುರುವ ಹಾಗಿದ್ದರೆ, ಯಾರು ಮರ ಏರಲೇ ಬೇಕಾಗಿಲ್ಲ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿನ 26 ಜಿಲ್ಲೆಗಳ 2 , 150 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಜನರು ನಗರ, ಪಟ್ಟಣ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದರೆ ನಮ್ಮ ಮುಖ್ಯಮಂತ್ರಿ ಯಜ್ಞ ಮಾಡಲು ಹೊರಟಿದ್ದಾರೆ////
Web Title : Worship for the drought situation relief in the state – Kannada News
Follow us On
Google News |