ಬೀಟ್‍ ರೂಟ್ ಹಲ್ವಾ ಮಾಡುವ ಸುಲಭ ವಿಧಾನ

Beetroot Halwa Recipe in Kannada

Kannada Recipes (itskannada) ಅಡುಗೆ-ಮನೆ : ಬೀಟ್‍ ರೂಟ್ ಹಲ್ವಾ ಮಾಡುವ ಸುಲಭ ವಿಧಾನ-Beetroot Halwa Recipe in Kannada-ಸಿಂಪಲ್ ಸ್ವೀಟ್ ರೆಸಿಪಿ ಈ ಬೀಟ್‍ ರೂಟ್ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಈ ಬೀಟ್‍ರೂಟ್ ಹಲ್ವಾ ಮಾಡುವ ಸುಲಭ ವಿಧಾನ ನೀವೇ ನಿಮ್ಮ ಕೈಯಾರೆ ಮಾಡಿ ಅದರ ಸವಿ ನೀವು ಸವಿದು,ನಿಮ್ಮ ಕುಟುಂಬವೂ ಸವಿಯಬಹುದಾದ ಸೂಪರ್ ರೆಸಿಪಿ. ಒಮ್ಮೆ ಮಾಡಿ ಸವಿದು ನೋಡಿ.ಕ್ಯಾರೆಟ್ ಹಲ್ವಾದಂತೇ ಬೀಟ್ ರೂಟ್ ಹಲ್ವಾ ಕೂಡಾ ಸರಳ,ಸುಲಭವಾಗಿ ಮಾಡಬಲ್ಲ ಸಿಹಿ ತಿನಿಸು. ಬಾಯಲ್ಲಿ ನೀರೂರಿಸುವಂತಹ ಬೀಟ್ ರೂಟ್ ಹಲ್ವಾ

Beetroot Halwa Recipe in Kannada

ಬೀಟ್‍ರೂಟ್ ಹಲ್ವಾ ಮಾಡುವ ಸುಲಭ ವಿಧಾನ-ಬೇಕಾದ ಪದಾರ್ಥಗಳು: 

*ಬೀಟ್‍ರೂಟ್
*ಹಾಲು
*ಸಕ್ಕರೆ
*ಏಲಕ್ಕಿ ಪುಡಿ
*ತುಪ್ಪ
*ಗೋಡಂಬಿ
*ಒಣ ದ್ರಾಕ್ಷಿ
*ಬಾದಾಮಿ
*ಕೋವಾ
* ಹಾಲು (ರುಚಿಗೆ ಬೇಕಿರುವಷ್ಟು)

ಬೀಟ್‍ರೂಟ್ ಹಲ್ವಾ ಮಾಡುವ ಸುಲಭ ವಿಧಾನ-ತಯಾರಿಸುವ ವಿಧಾನ :

1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ಸುಲಿಯಿರಿ.
2. ತುಪ್ಪವನ್ನು ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.
3. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.
4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.
5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿ ಕೊಡಿ.
8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.
9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.
10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.
/// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –  Karnataka Recipes
ಯಾವುದೇ ಎನರ್ಜಿ ಡ್ರಿಂಗ್ಸ್’ಗಿಂತ ಆರೋಗ್ಯಕ್ಕೆ ಬೀಟ್ ರೂಟ್ ಪಾನೀಯ ಉತ್ತಮ ಪೇಯ. ಯೌವ್ವನವನ್ನು ವೃದ್ಧಿಸುತ್ತದೆ. ನಿತ್ಯ ಬೀಟ್ ರೂಟ್ ಸೇವಿಸಿದರೆ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಪಲ್ಯ ಅಥವಾ ಸಾಂಬರ್ ಮಾಡಿದರೆ ಮಕ್ಕಳು ತಿನ್ನುವುದು ತುಂಬಾ ಕಷ್ಟ ಅದಕ್ಕಾಗಿ ಪರೋಟ, ಹಲ್ವಾ ಅಥವಾ ರುಚಿಕರವಾಗಿ ಜ್ಯೂಸ್ , ಅಥವಾ ಈ ಬೀಟ್‍ ರೂಟ್ ಹಲ್ವಾ ಮಾಡಿಕೊಟ್ಟು ನೋಡಿ . . .
Webtitle :ಬೀಟ್‍ ರೂಟ್ ಹಲ್ವಾ ಮಾಡುವ ಸುಲಭ ವಿಧಾನ-Beetroot Halwa Recipe in Kannada

Follow us On

FaceBook Google News