Doodh Peda: ದೂಧ್ ಪೇಡಾ ಮಾಡುವ ವಿಧಾನ
Doodh Peda: ನಿಮ್ಮ ನೆಚ್ಚಿನ ಸಿಹಿ ತಿಂಡಿ ದೂಧ್ ಪೇಡಾ ಮಾಡುವ ಸುಲಭ ವಿಧಾನ ತಿಳಿಯಿರಿ
Doodh Peda Recipe: ಸಿಹಿ ತಿಂಡಿ ಭಕ್ಷ್ಯಗಳ ಪ್ರಿಯರು ನೀವಾಗಿದ್ದರೆ, ನೀವೇ ನಿಮ್ಮ ಕೈಯಾರೆ ದೂಧ್ ಪೇಡಾ (Doodh Peda) ಮಾಡಿ ತಿನ್ನಬಹುದು ಜೊತೆಗೆ ನಿಮ್ಮ ಮನೆಯವರಿಗೂ ಬಡಿಸಬಹುದು, ಹಾಗಾದರೆ ಬನ್ನಿ ದೂಧ್ ಪೇಡಾ ಮಾಡುವ ಸುಲಭ ವಿಧಾನ ತಿಳಿಯೋಣ.
ದೂಧ್ ಪೇಡಾ ಮಾಡಲು ಬೇಕಾದ ಪದಾರ್ಥಗಳು
ಹಾಲುಖೋವಾ 450 ಗ್ರಾಂ
ಮೈದಾಹಿಟ್ಟು 35 ಗ್ರಾಂ
ಅಕ್ಕಿ ಹಿಟ್ಟು 4 ಟೀ ಚಮಚ
ಸಕ್ಕರೆ 300 ಗ್ರಾಂ
ಏಲಕ್ಕಿ 10
ದೂಧ್ ಪೇಡಾ ಮಾಡುವ ವಿಧಾನ
ಹಾಲು ಖೋವಾಕ್ಕೆ ಹದವಾಗಿ ಹುರಿದ ಮೈದಾಹಿಟ್ಟಿನಲ್ಲಿ ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಏಲಕ್ಕಿ ಪುಡಿ, ಒಂದು ಟೇಬಲ್ ಚಮಚ ಅಕ್ಕಿ ಹಿಟ್ಟು, ಎರಡು ಟೇಬಲ್ ಚಮಚ ಕುಟ್ಟಿದ ಸಕ್ಕರೆ ಹಾಕಿ ಚೆನ್ನಾಗಿ ನಾದಬೇಕು.
ಮಿಕ್ಕಿರುವ ಅಕ್ಕಿಹಿಟ್ಟನ್ನು ಮತ್ತು ಸಕ್ಕರೆಯೆಯನ್ನು ಬೆರಸಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಕಲಸಿರುವ ಖೋವಾವನ್ನು ಸಣ್ಣ ಉಂಡೆಗಳಂತೆ ಮಾಡಿಕೊಂಡು, ಒಂದೊಂದು ಉಂಡೆಯನ್ನೂ ಸ್ವಲ್ಪ ತಟ್ಟಿ, ಬೆರಸಿಟ್ಟಿರುವ ಅಕ್ಕಿ ಹಿಟ್ಟು ಮತ್ತು ಸಕ್ಕರೆಯ ಮಿಶ್ರಣದಲ್ಲಿ ಎರಡೂ ಕಡೆಯೂ ಅದ್ದಿ ತೆಗೆದಿಟ್ಟುಕೊಳ್ಳಿ.
Follow us On
Google News |