ರುಚಿಕರ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ
How to make Bisi bele bath | itskananda Recipe
(itskannada): ಬಿಸಿ ಬೇಳೆ ಬಾತ್ – ಅಬ್ಬಾ ನೆನೆದರೆ ಸಾಕು ಬಾಯಲ್ಲಿ ನೀರುರುತ್ತೆ ಅಲ್ಲವೇ , ಇದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.
ಜುಮುಜುಮು ಚಳಿಯ ಕಾಲದಲ್ಲಿ ಬಿಸಿಬೇಳೆ ಬಾತ್ ಮಾಡಿಕೊಂಡು ತಿಂದರೆ ಅದರ ಮಜವೇ ಬೇರೆ..
ಏನು ಮಾಡುವುದಕ್ಕೆ ಬರುವುದಿಲ್ಲವಾ.. ಚಿಂತೆ ಯಾಕೆ ಇಟ್ಸ್ ಕನ್ನಡ ರೆಸಿಪಿಯಲ್ಲಿ ನಿಮಗಾಗಿ ಇದನ್ನು ಮಾಡುವ ವಿಧಾನ…
ರುಚಿಕರ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ
ಮೊದಲಿಗೆ ರುಚಿಕರ ಬಿಸಿ ಬೇಳೆ ಬಾತ್ ಮಾಡಲು ಬೇಕಾಗುವ ಪದಾರ್ಥಗಳು:
- ತೊಗರಿಬೇಳೆ 1 ಕಪ್, ಅಕ್ಕಿ 2 ಕಪ್, 1 ಕಪ್ ತುಂಡರಿಸಿದ ಬೀನ್ಸ್, ದನಿಯ ( ಕೊತ್ತಂಬರಿ ಬೀಜ), ಒಣಮೆಣಸಿನಕಾಯಿ, ಎರಡು ಚಮಚ ಒಳ್ಳೆಮೆಣಸು, ಅರ್ದ ಚಮಚ ಜೀರಿಗೆ,
ಮೆಂತ್ಯೆ, ಲವಂಗ, ಉದ್ದಿನಬೇಳೆ, ಕಡಲೆಬೇಳೆ, ಅರಿಶಿನಪುಡಿ ,ದಾಲ್ಚಿನಿ ,ಚಕ್ಕೆ, ಒಣಕೊಬ್ಬರಿ ತುರಿ, ಎಣ್ಣೆ, ಮೆಣಸಿನಕಾಯಿ,ಹುಣಸೆ ಹಣ್ಣು , ತುಪ್ಪ.ಸಾಸಿವೆ, ಕಡಲೇಬೇಳೆ, ಉದ್ದಿನ ಬೇಳೆ,ಕರಿಬೇವು,ಗೇರುಬೀಜದ ಚೂರು.
( ಪದಾರ್ಥಗಳು ನೀವು ಎಷ್ಟು ಜನಕ್ಕೆ ಹಾಗು ಎಷ್ಟು ಅಕ್ಕಿಯಲ್ಲಿ ಬಿಸಿಬೇಳೆ ಬಾತ್ ಮಾಡಲು ಮುಂದಾಗಿದ್ದೀರಿ ಅದರ ಆದಾರದ ಮೇಲೆ ಆಯ್ಕೆ ಮಾಡಿಕೊಳ್ಳಿ.)
ರುಚಿಕರ ಬಿಸಿಬೇಳೆ ಬಾತ್ ಮಾಡುವ ವಿಧಾನ: ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕಿ , ತುಪ್ಪ ,ಅರಸಿನಪುಡಿ ಹಾಗೂ ಚೆನ್ನಗಿ ತೊಳೆದು ಇಟ್ಟುಕೊಂಡ ತೊಗರಿಬೇಳೆಯನ್ನು ಹಾಕಿ ಮುಚ್ಚಿ. ಸ್ವಲ್ಪ ಹೊತ್ತಿನ ತನಕ ಕುದಿಯಲು ಬಿಟ್ಟು , ಕುದಿದ ನಂತರ ಉರಿಯನ್ನು ಸಣ್ಣ ಮಾಡಿ . ಬೇಳೆ ಸಾದಾರಣ ಬೆಂದ ಮೇಲೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯೆತ್ತಿರುವ ಬೇಳೆಯ ಜೊತೆಗೆ ಹಾಕಿ. ನೀರು ಹಾಕಿ ಹುಣಸೆಹಣ್ಣನ್ನು ಸ್ವಲ್ಪ ನೀರಿನಲ್ಲಿ ಕಿವುಚಿ ಅದರ ರಸವನ್ನು ಬೇಯುತ್ತಿರುವ ಅಕ್ಕಿ ಮತ್ತು ಬೇಳೆಗೆ ಸುರಿದು ಅನ್ನ ಸಾದಾರಣ ಬೆಂದ ನಂತರ, ಉಪ್ಪು ಮತ್ತು ತುಂಡರಿಸಿದ ಬೀನ್ಸ್ ಹಾಕಿ ಮುಚ್ಚಿ, ಬೇರೆ ಪಾತ್ರೆಯಲ್ಲಿ ಕೊತ್ತೊಂಬರಿ ಬೀಜ,ಒಣಮೆಣಸಿನ ಕಾಯಿ,ಮೆಣಸು, ಜೀರಿಗೆ, ಉದ್ದಿನಬೇಳೆ, ಕಡಳೆಬೇಳೆ, ಮೆಂತ್ಯೆ,ಲವಂಗ,ಒಣಕೊಬ್ಬರಿ ತುರಿ,ದಾಲ್ಚಿನಿ, ಎಲ್ಲವನ್ನು ಸಣ್ಣ ಉರಿಯಲ್ಲಿ ಬೇರೆ ಬೇರೆ ಹುರಿಯ ಬೇಕು . ತೆಂಗಿನ ಕಾಯಿ ಸೇರಿ ಎಲ್ಲವನ್ನು ಕುಟ್ಟಿಪುಡಿ ಮಾಡಿ ಜರಡಿ ಹಿಡಿದು ಸಣ್ಣ ಪುಡಿಮಾಡಿ ಕೊಂಡು ಒಲೆಯ ಮೇಲೆ ಬೇಯಲು ಮುಚ್ಚಿರುವ , ಬೇಯಿತ್ತಿರುವ ಬೇಳೆ ಮತ್ತು ಅನ್ನ ಜೊತೆ ಸೇರಿಸಿ ಬೇಯಲು ಮುಚ್ಚಿ. ಕೊನೆಯದಾಗಿ ಒಗ್ಗರಣೆ ಹಾಕಿ ಸ್ವಲ್ಪ ಉರಿಯಲ್ಲಿ ಇಡಿ ……
- ಈಗ ನಿಮ್ಮ ನೆಚ್ಚಿನ ರುಚಿಕರ ಬಿಸಿ ಬೇಳೆ ಬಾತ್ ಸವಿಯಲು ಸಿದ್ದ. ನೀವೇ ಮಾಡಿದ ಬಿಸಿಬೇಳೆ ಬಾತ್ .. – | itskananda Recipes
webTitle : How to make Bisi Bele Bath
Keyword : ರುಚಿಕರ ಬಿಸಿ ಬೇಳೆ ಬಾತ್ , ರುಚಿಕರ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ , ಬಿಸಿ ಬೇಳೆ ಬಾತ್ , How to make Bisi Bele Bath , Bisi Bele Bath .
ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಅಡುಗೆಗಳಿಗಾಗಿ ಕೈ-ರುಚಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಅಡುಗೆ ಪುಟ –ಕನ್ನಡ ಅಡುಗೆ-ಇಲ್ಲವೇ ವಿಭಾಗ ಕರ್ನಾಟಕ ಅಡುಗೆಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Recipes click Kannada Recipes or look at Karnataka Recipes