ಸೇವ್ ಪುರಿ ಮಾಡುವುದು ಹೇಗೆ ?

How to Make Sev Puri-In Kannada

Kananda Recipes (itskannada) ಅಡುಗೆ-ಮನೆ : ಸೇವ್ ಪುರಿ ಮಾಡುವುದು ಹೇಗೆ-How to Make Sev Puri-In Kannada : ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದಾದ,ಸೇವ್ ಪುರಿ ಮಾಡುವ ವಿಧಾನವನ್ನು ನೀವು ಕೇವಲ 5 ನಿಮಿಷಗಳಲ್ಲಿ ಕಲಿಯಬಹುದು. ನಿಮ್ಮ ಕೈಯಾರೆ ನೀವೇ ಮಾಡಿದ ಸೇವ್ ಪುರಿಯನ್ನು ನೀವು ಸವಿದು,ಕುಟುಂಬದವರಿಗೂ ಸವಿಯಲು ಕೊಟ್ಟಾಗ ಅದರ ಮಜವೇ ಬೇರೆ.ಬನ್ನಿ ಸೇವ್ ಪುರಿ ಮಾಡುವ ಸುಲಭ ವಿಧಾನ ನೋಡೋಣ –

ಬೇಕಾಗುವ ಸಾಮಗ್ರಿಗಳು

 • ಪುರಿ ೨೪
 • ಸೇವ್ ೧ ಕಪ್
 • ಬೇಯಿಸಿ ಕತ್ತರಿಸಿದ ಆಲೂಗಡ್ಡೆ ೧
 • ಸಣ್ಣಗೆ ಹೆಚ್ಚಿದ ಈರುಳ್ಳಿ ೧
 • ಹೆಚ್ಚಿದ ಟೊಮ್ಯಾಟೋ ೧
 • ಕೊತ್ತಂಬರಿ ಸೊಪ್ಪು ೧/೨ ಕಪ್
 • ಹಸಿರು ಚಟ್ನಿ ೧ ಕಪ್
 • ಸ್ವೀಟ್ ಚಟ್ನಿ ೧ ಕಪ್
 • ಕೆಂಪು ಮೆಣಸಿನ ಪುಡಿ ೧-೨ ಚಮಚ
 • ಜೀರಿಗೆ ಪುಡಿ೨ ಚಮಚ
 • ಚಾಟ್ ಮಸಾಲಾ ೨ ಚಮಚ
 • ಉಪ್ಪು ರುಚಿಗೆ ತಕ್ಕಷ್ಟು
 • ಲಿಂಬೆ ರಸ ೧ ಚಮಚ

ಮಾಡುವ ವಿಧಾನ

 • ಒಂದು ಪ್ಲೇಟ್ ನಲ್ಲಿ ಪುರಿ ಇಟ್ಟು ಅದರ ಮೇಲೆ ಬೇಯಿಸಿದ ಆಲೂಗಡ್ಡೆ ಹಾಕಬೇಕು.
 • ನಂತರ ಈರುಳ್ಳಿ ಮತ್ತು ಟೊಮೇಟೊ ಸೇರಿಸಬೇಕು.
 • ನಂತರ ಅದರ ಮೇಲೆ ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲ ಉದುರಿಸಿ ಹಸಿರು ಚಟ್ನಿ, ಮತ್ತು ಸ್ವೀಟ್ ಚಟ್ನಿ ಹಾಕಬೇಕು.
 • ಅದರ ಮೇಲೆ ಸೇವ್ ಹಾಕಿ ಮತ್ತೆ ಚಾಟ್ ಮಸಾಲ, ಕೆಂಪು ಮೆಣಸು ಪುಡಿ ಮತ್ತು ಕಪ್ಪು ಉಪ್ಪನ್ನು ಉದುರಿಸಬೇಕು.
 • ಕೊನೆಯಲ್ಲಿ ಲಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಸರ್ವ್ ಮಾಡಬೇಕು.
type="adsense" data-ad-client="ca-pub-4577160196132345" data-ad-slot="4977565719" data-auto-format="rspv" data-full-width="">
ಸೇವ್ ಪುರಿ ಮಾಡುವುದು ಹೇಗೆ ? - Kannada News

Follow us On

FaceBook Google News