ವಾಂಗೀಬಾತ್ ಮಾಡುವ ಸುಲಭ ವಿಧಾನ
make vangibath super easy | itskannada Recipes
(itskannada): ವಾಂಗೀಬಾತ್ ಮಾಡುವ ಸುಲಭ ವಿಧಾನ : ವಾಂಗೀಭಾತ್ ಮಾಡೋದು ಸುಲಭ ,ನೀವು ಸುಲಭವಾಗಿ ಅರ್ಥಮಾಡಿಕೊಂಡು, ಕೆಲವೇ ನಿಮಿಷಗಳಲ್ಲಿ ಮಾಡಬಹುದಾದ ” ವಾಂಗೀಬಾತ್ ” ಸುಲಭ ವಿಧಾನಕ್ಕೆ ಹುಡುಕುತ್ತಿದ್ದರೆ , ನೀವು ಸರಿಯಾದ ಜಾಗದಲ್ಲಿದ್ದೀರಾ ! ಹೌದು ಇಲ್ಲಿದೆ ನಿಮ್ಮ ನೆಚ್ಚಿನ ವಾಂಗೀಬಾತ್ ಅಡುಗೆ ಮಾಡುವ ಸುಲಭ ವಿಧಾನ. ನಿಮಿಷಗಳಲ್ಲಿ ವಾಂಗೀಭಾತ್ ತಯಾರು,ವಾಂಗೀಬಾತ್ ಮಾಡುವ ಸುಲಭ ವಿಧಾನ.
ಈ ಹಿಂದಿನ ಲೇಖನದಲ್ಲಿ ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ ಕಲಿತಾಯಿತಲ್ವಾ , ಹಾಗಾದರೆ ಈಗ ವಾಂಗೀಬಾತ್ ಮಾಡುವ ಸುಲಭ ವಿಧಾನ ಕಲಿಯೋಣ ಬನ್ನಿ.
ವಾಂಗೀಬಾತ್ ಮಾಡುವ ಸುಲಭ ವಿಧಾನ
ಬೇಕಾಗುವ ಸಾಮಗ್ರಿಗಳು:
ವಾಂಗೀಭಾತ್ ಅಥವಾ ಬದನೆಕಾಯಿ ಅನ್ನ ಮಾಡಲು ಬೇಕಾದ ಪದಾರ್ಥಗಳು
- ಹೆಚ್ಚಿದ ಈರುಳ್ಳಿ, ಒಣಮೆಣಸಿನಕಾಯಿ,ಧನಿಯ,ಮೆಣಸು,ಕಡ್ಲೆಬೇಳೆ,ಉದ್ದಿನಬೇಳೆ,ಇಂಗು ಸ್ವಲ್ಪ,ಅರಿಶಿನ ,ತುಪ್ಪ ,ಎಣ್ಣೆ, ಸಾಸಿವೆ ಕರಿಬೇವು, ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ,ಉಪ್ಪು , ಹುಣಸೇರಸ ,ಕಾಯಿತುರಿ,ಕೊಬ್ಬರಿ ಸ್ವಲ್ಪ ಮತ್ತು ಕೊತ್ತುಂಬರಿ ಸೊಪ್ಪು.
- ತಯಾರಿಸುವ ವಿಧಾನ:
ಮೊದಲು ಅಕ್ಕಿ ನೆನೆಸಿ , ಉದುರಾಗಿ ಅನ್ನ ಮಾಡಿಕೊಳ್ಳಿ. ಅನ್ನ ಮುದ್ದೆಯಾದರೆ ಸವಿಯಲು ಅಷ್ಟು ಚನ್ನಾಗಿರುವುದಿಲ್ಲ. ಅನ್ನ ಮಾಡುವುದನ್ನು ಎಚ್ಚರಿಕೆಯಿಂದ ಮಾಡಿ . ಮಾಡಿಕೊಂಡ ಅನ್ನಕ್ಕೆ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ,ತಣ್ಣಗಾಗಲು ಬಿಡಿ.
- ವಾಂಗೀಭಾತ್ ಗೆ ಬೇಕಾದ ಮಸಾಲ ಪುಡಿ ತಯಾರಿಸಿ:
ಧನಿಯ,ಕಡಲೆಬೇಳೆ,ಮೆಣಸು,ಉದ್ದಿನಬೇಳೆ,ಒಣಮೆಣಸಿನಕಾಯಿ, ಎಲ್ಲವನ್ನು ಹುರಿದುಕೊಂಡು ಇಂಗು ಮತ್ತು ಕೊಬ್ಬರಿ ತುರಿಯೊಂದಿಗೆ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ. ಬದನೆಕಾಯಿ ಹೆಚ್ಚಿಕೊಂಡು ಉಪ್ಪು ನೀರಿಗೆ ಹಾಕಿಡಿ.
ಒಂದು ಪಾತ್ರೆಗೆ ಸಾಕಾಷ್ಟು ಎಣ್ಣೆ ಹಾಕಿ,ಅದಕ್ಕೆ ಲವಂಗ, ಚೆಕ್ಕೆ, ಏಲಕ್ಕಿ,ಕರಿಬೇವು,ಪತ್ರೆ,ಇಂಗು ಎಲ್ಲವನ್ನು ಹಾಕಿ ಒಂದು ನಿಮಿಷ ತೆಳ್ಳನೆ ಉರಿಯಲ್ಲಿ ಹುರಿಯಿರಿ. ಈರುಳ್ಳಿಯನ್ನು ಹಾಕಿ, ಒಂದೆರಡು ನಿಮಿಷ ಹುರಿದು, ನಂತರ ಅದಕ್ಕೆ ಉದ್ದಗೆ ಹೆಚ್ಚಿಟ್ಟುಕೊಂಡ ಬದನೆಕಾಯಿ ಹಾಕಿ, ಅದರಲ್ಲಿಯೇ ಹುರಿಯಿರಿ, ಬದನೆಕಾಯಿ ಹೋಳುಗಳನ್ನು ಚೆನ್ನಾಗಿ ಹುರಿದು, ಅದು ಬೆಂದ ಮೇಲೆ, ಅದಕ್ಕೆ ಅರಿಶಿನ, ಹುರಿದು ಪುಡಿ ಮಾಡಿದ ಮಸಾಲೆಯನ್ನು ಮತ್ತು ಹುಣಸೇರಸ ಹಾಕಿ, ಉರಿಯಲ್ಲಿ ಇಡಿ ಮತ್ತು ನೀರು ಹಾಕದೆ ಉಪ್ಪು ಹಾಕಿ. ಎಲ್ಲ ಮಸಾಲೆ ಚೆನ್ನಾಗಿ ಬೆರೆಯುವಂತೆ ಕೆದುಕಿ ಕೊಡಿ. ನಂತರ ಅದನ್ನು ಕೆಳಗಿಳಿಸಿ. ಉರಿಯಿಂದ ಕೆಳಗಿಳಿಸಿದ ಪಾತ್ರೆ ಸ್ವಲ್ಪ ಆರುವಂತೆ ಬಿಡಿ, ಕಾರಣ ಬಿಸಿಯಲ್ಲಿಯೇ ಮಿಶ್ರಣ ಮಾಡಲು ಹೋದರೆ ಅನ್ನ ಮುದ್ದೆ ಆಗಬಹುದು. ಇನ್ನೇನು ಸವಿಯಲು ವಾಂಗಿಭಾತ್ ಸಿದ್ದವಾದಂತೆ. ನಿಮಗೆ ಬೇಕಿರುವಷ್ಟು ಮಾತ್ರ ಮಸಾಲೆ ತೆಗೆದುಕೊಂಡು ಅನ್ನಕ್ಕೆ ಹಾಕಿ, ಚೆನ್ನಾಗಿ ಕಲೆಸಿ, ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಅನ್ನಕ್ಕೆ ಸರಿಯಾಗಿ ಬೆರೆಯುವಂತೆ ಕಲೆಸಿ. ಮುಂದೆ ತಟ್ಟೆಗೆ ಬಡಿಸಿಕೊಂಡು ರುಚಿಯಾದ ಬಾತ್ ಸವಿಯಿರಿ. ಮಿಶ್ರಣವನ್ನು ಆಗೇ ಇಟ್ಟು ಕೊಂಡರೆ ಮತ್ತೆ ಬಳಸಬಹುದು. -| itskananda Recipes
WebTitle : make vangibath super easy
Keyword : ವಾಂಗೀಬಾತ್ ಮಾಡುವ ಸುಲಭ ವಿಧಾನ , make vangibath super easy , vangibath .
ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಅಡುಗೆಗಳಿಗಾಗಿ ಕೈ-ರುಚಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಅಡುಗೆ ಪುಟ –ಕನ್ನಡ ಅಡುಗೆ-ಇಲ್ಲವೇ ವಿಭಾಗ ಕರ್ನಾಟಕ ಅಡುಗೆಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Recipes click Kannada Recipes or look at Karnataka Recipes
Follow us On
Google News |