ಮಸಾಲೆ ದೋಸೆ ಮಾಡುವ ಸುಲಭ ವಿಧಾನ

Masala Dosa Recipe in Kannada

Kannada Recipes (itskannada) ಮಸಾಲೆ ದೋಸೆ ಮಾಡುವ ಸುಲಭ ವಿಧಾನ-Masala Dosa Recipe in Kannada: ಇಲ್ಲಿದೆ ನೋಡಿ ಮಸಾಲೆ ದೋಸೆ ಮಾಡುವ ವಿಧಾನ.ಬಾಯಲ್ಲಿ ನೀರೂರುವಂತೆ ಮಸಾಲೆ ದೋಸೆ ಮನೆಯಲ್ಲಿಯೇ ಮಾಡಿ ತಿಂದಾಗ ಅದರ ಮಜವೇ ಬೇರೆ. ಆಗಿದ್ದರೆ ಇನ್ನೇಕೆ ತಡ ಬನ್ನಿ ಮಸಾಲೆ ದೋಸೆ ಮಾಡುವ ಸುಲಭ ವಿಧಾನ ನೋಡೋಣ.

ಮಸಾಲೆ ದೋಸೆ ಮಾಡುವ ಸುಲಭ ವಿಧಾನ-Masala Dosa Recipe in Kannada

ಬೇಕಾಗುವ ಪದಾರ್ಥಗಳು: ಒಂದು ಕೆ.ಜಿ ಅಕ್ಕಿ ಹಿಟ್ಟು, 1/4 ಕೆ.ಜಿ ಹುರಿಗಡಲೆ ಹಿಟ್ಟು, 1/4 ಕೆ.ಜಿ ಗೋಧಿ ಹಿಟ್ಟು, ಒಂದು ಹಿಡಿ ಉಪ್ಪು 2 ಚಿಟಕಿ ಸೋಡಪುಡಿ, ಹುಳಿ ಮೋಸರು ಒಂದು ಪ್ಯಾಕೇಟ್, ಅರ್ಧ ಚಮಚ ಅರಿಸಿಣ ಪುಡಿ, 1 ನಿಂಬೆ ಹಣ್ಣಿನ ಗಾತ್ರದ ಹುಣಸೆ ಹಣ್ಣು, 1/2 ಕೆಜಿ ಕೊತ್ತೊಂಬರಿ ಸೊಪ್ಪು. 1/4 ಕೆ.ಜಿ ಎಣ್ಣೆ, 1/4 ಕೆ.ಜಿ. ತುಪ್ಪ 15 ಒಣಮೆಣಸಿನಕಾಯಿ, ಒಂದು ಚಮಚ ಸಾಸಿವೆ, ಅರ್ಧ ಹೋಳು ತೆಂಗಿನ ಕಾಯಿ ತುರಿ.
ಮಾಡುವ ವಿಧಾನ: ಅಕ್ಕಿ ಹಿಟ್ಟು, ಹುರಿಗಡಲೆ ಹಿಟ್ಟು, ಗೋಧಿ ಹಿಟ್ಟು ಮೂರನ್ನು ಸುಮಾರು ಮೂರು ಸೇರು ನೀರಿನಲ್ಲಿ ಕಲೆಸಿ ಕೊಳ್ಳುವುದು. ಅದಕ್ಕೆ ಉಪ್ಪು , ಸೋಡಪುಡಿ, ಹುಳಿ ಮೊಸರು ಹಾಕಿ ಕದಡಿ ಇಡುವುದು. ಕಲೆಸಿದ ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಬೇಕು. ಮತ್ತು ಮಸಾಲೆ ದೋಸೆ ಮಾಡುವ ಮಾಡುವ ಹಿಂದಿನ ದಿನವೇ ಹಿಟ್ಟನ್ನು ಕಲೆ ಸಿರಬೇಕು.
ಮಾರನೆಯ ದಿನ ಆಲೂಗೆಡ್ಡೆಯನ್ನು ಕುದಿಯುವ ನೀರಿಗೆ ಹಾಕಿ ಇಡಿಯಾಗಿ ಬೇಯಿಸಿ ಬೆಂದ ಮೇಲೆ ಸಿಪ್ಪೆ ತೆಗೆದು ಕಿವುಚಿ ಒಂದು ಪಾತ್ರೆ ಯಲ್ಲಿ ಇಟ್ಟುಕೊಳ್ಳಬೇಕು. ಒಲೆಯ ಮೇಲೆ ಒಂದು ಪಾತ್ರೆಯನ್ನಿಟ್ಟು ಎಣ್ಣೆ ಹಾಕಿ ಸ್ವಲ್ಪ ಸಾಸಿವೆ, ಎರಡು ಒಣ ಮೆಣಸಿನಕಾಯಿ ಚೂರು ಹಾಕಿ ಸಾಸಿವೆ ಸಿಡಿದ ಮೇಲೆ ಸಣ್ಣಗೆ ಹಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ,ಕೊತ್ತಂಬರಿ ಸೊಪ್ಪು,ಅರಿಸಿಣ ಪುಡಿ ಹಾಕಿ ಈರುಳ್ಳಿ ಬೆಂದ ಮೇಲೆ ಬೇಯಿಸಿ ಪುಡಿ ಮಾಡಿದ ಆಲೂಗಡ್ದೆ ಅದಕ್ಕೆ ತಕ್ಕಷ್ಟು ಉಪ್ಪು ಹಾಕಿ ಕೆದಕಿ ಕೆಳಗಿಸಿಟ್ಟುಕೊಳ್ಳುವುದು.
ಕಾಯಿತುರಿ,ಹುರಿಗಡಲೆ,ಒಣಮೆಣಸಿನಕಾಯಿ,ಉಪ್ಪು,ಒಂದು ಕಟ್ಟು ಕೊತ್ತಂಬರಿ ಸೊಪ್ಪು.ಹುಣಸೆಹಣ್ಣುಗಳನ್ನು ಒರಳಿಗೆ ಹಾಕಿಕೊಂಡು ನುಣ್ಣಗೆ ಚಟ್ನಿ ರುಬ್ಬಿ ಒಂದು ಪಾತ್ರೆಯಲ್ಲಿಟ್ಟುಕೊಳ್ಳುವುದು. ಒಲೆಯ ಮೇಲೆ ಕಾವಲಿಯನ್ನಿಟ್ಟು ಕಾವಲಿಗೆ ಎಣ್ಣೆ ತುಪ್ಪ ಬೆಸರಿ ಒಂದುಚಮಚದಷ್ಟು,ಹಿಟ್ಟು ಹಾಕಿ ಹರಡಿ ದೋಸೆಯನ್ನು ಹುಯ್ಯುವುದು.ದೋಸೆಬೆಂದ ಮೇಲೆ ಅದಕ್ಕೆ ಚಟ್ನಿಯನ್ನು ಸವರಿ,ಒಂದು ಹಿಡಿ ಆಲೂಗಡ್ಡೆ ಪಲ್ಯ ಹಾಕಿ ಮಧ್ಯಕ್ಕೆ ಮಡಿಸುವುದು.ಮತ್ತಷ್ಟು ತುಪ್ಪ ಹಾಕಿ ಮಗುಚಿ ಗರಿಗರಿಯಾಗಿ ಮಧ್ಯಕ್ಕೆ ಮಡಿಸಿದ ಮಸಾಲೆಯನ್ನು ಕೆಳಗಿಳಿಸುವುದು.ಒಂದೇ ಕಡೆ ಚೆನ್ನಾಗಿ ಬೇಯಿಸಬೇಕು.ತೆಳ್ಳಗೆ ಹಿಟ್ಟು ಹಾಕಿ ತುಪ್ಪವನ್ನು ಸುತ್ತಲೂ ಹಾಕಿದರೆ ಮಸಾಲೆ ದೋಸೆ ಗರಿಗರಿಯಗುತ್ತದೆ.ದೋಸೆ ಮಾಡುವಾಗ ಬೆಣ್ಣೆಯನ್ನು ಉಪಯೋಗಿಸಿದರೆ ಬೆಣ್ಣೆ ಮಸಾಲೆ ದೋಸೆಯಾಗುತ್ತದೆ.//   ಈ   ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –  Karnataka Recipes

WebTitle :  ಮಸಾಲೆ ದೋಸೆ ಮಾಡುವ ಸುಲಭ ವಿಧಾನ-Masala Dosa Recipe in Kannada

ಮಸಾಲೆ ದೋಸೆ ಮಾಡುವ ಸುಲಭ ವಿಧಾನ - Kannada News

ಅಕ್ಕಿ ದೋಸೆ ಮಾಡುವ ವಿಧಾನ – ವಾಂಗೀಬಾತ್ ಮಾಡುವ ಸುಲಭ ವಿಧಾನ

 

Follow us On

FaceBook Google News