ಪುದೀನಾ ರೈಸ್ ಮಾಡುವ ಸುಲಭ ವಿಧಾನ
Pudina Rice Recipe in Kannada
Kannada Recipes (itskannada) ಅಡುಗೆ-ಮನೆ : ಪುದೀನಾ ರೈಸ್ ಮಾಡುವ ಸುಲಭ ವಿಧಾನ-Pudina Rice Recipe in Kannada.ಸುಲಭವಾಗಿ ತಯಾರಿಸಬಹುದಾದ ಪುದೀನಾ ರೈಸ್ ಲಂಚ್ ಬಾಕ್ಸ್ ಗೆ ಸೂಕ್ತವಾದ ರೆಸಿಪಿ. ಪುದೀನಾ ರೈಸ್ ಮಾಡುವ ಸುಲಭ ವಿಧಾನ ದಕ್ಷಿಣ ಭಾರತೀಯ ಶೈಲಿಯ ಈ ಖಾದ್ಯ ತಾಜಾ ಪುದೀನ ಎಲೆಗಳಿಂದ ತಯಾರಿಸಬಹುದು. ಇದು ಚಿಕನ್ ಕರಿ ಅಥವಾ ಚಿಕನ್ ಕುರ್ಮಾದಂತಹ ಖಾದ್ಯದ ಜೋಡಿಯು ಅತ್ಯದ್ಭುತವಾಗಿ ಚೆನ್ನಾಗಿರುತ್ತದೆ ಮತ್ತು ಮಾಡಲು ತುಂಬಾ ಸುಲಭ. ಪುದೀನಾವನ್ನು ಹೆಚ್ಚಾಗಿ ಚಟ್ನಿಗೆ ಬಳಸಲಾಗುತ್ತದೆ. ಆದರೀಗ ಇದೆ ಪುದೀನಾವನ್ನು ಉಪಯೋಗಿಸಿ ಪುದೀನಾ ರೈಸ್ ಮಾಡುವ ಸುಲಭ ವಿಧಾನ ನೋಡೋಣ.
ಪುದೀನಾ ರೈಸ್ ಮಾಡುವ ಸುಲಭ ವಿಧಾನ-Pudina Rice Recipe in Kannada
ಬೇಕಾಗುವ ಸಾಮಗ್ರಿಗಳು
- ಅಕ್ಕಿ
- ಪುದಿನಾ
- ಕೊತ್ತಂಬರಿ ಸೊಪ್ಪು
- ಹಶಿ ಮೆಣಸು
- ಶುಂಟಿ
- ಬೆಳ್ಳುಳ್ಳಿ
- ಈರುಳ್ಳಿ
- ಆಲೂಗಡ್ಡೆ
- ಉಪ್ಪು ರುಚಿಗೆ ತಕ್ಕಷ್ಟು
- ನೀರು
- ಗರಂಮಸಾಲ
- ಅರಿಶಿನ ಪುಡಿ
ಒಗ್ಗರಣೆಗೆ
- ಎಣ್ಣೆ
- ತುಪ್ಪ
- ಪಲಾವ್ ಎಲೆ
- ಮೊಗ್ಗು
- ಜಾಕಾಯಿ ಪತ್ರೆ
- ಜೀರಿಗೆ
- ಲವಂಗ
- ಚಕ್ಕೆ
- ಏಲಕ್ಕಿ
- ಗೋಡಂಬಿ
ಪುದೀನಾ ರೈಸ್ ಮಾಡುವ ಸುಲಭ ವಿಧಾನ
- ಮೊದಲು ಅಕ್ಕಿಯನ್ನು ತೊಳೆದು ೧೫ ನಿಮಿಷ ನೆನೆಸಿ ಇಟ್ಟುಕೊಳ್ಳಬೇಕು.
- ನಂತರ ಮಿಕ್ಸರ್ ಗೆ ಅರ್ಧದಸ್ಟು ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು,ಹಶಿ ಮೆಣಸು, ಶುಂಟಿ, ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಬೇಕು.
- ಕುಕ್ಕರ್ ನಲ್ಲಿ ಎಣ್ಣೆ ಮತ್ತು ತುಪ್ಪ ಬಿಸಿ ಮಾಡಿ ಒಗ್ಗರಣೆಯ ಎಲ್ಲ ಸಾಮಗ್ರಿಗಳನ್ನು ಹಾಕಬೇಕು.
- ಒಗ್ಗರಣೆ ಪರಿಮಳ ಬರಲು ಆರಂಭಿಸಿದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಬೇಕು.
- ನಂತರ ಅಲೂಗಡ್ಡೆ, ಗರಂಮಸಾಲ,ಅರಿಶಿನಪುಡಿ ಮತ್ತು ಉಳಿದ ಪುದೀನಾ ಎಲೆ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಬೇಕು.
- ನಂತರ ರುಬ್ಬಿದ ಮಸಾಲೆ ಹಾಕಿ ಹಶಿ ವಾಸನೆ ಹೋಗುವ ವರೆಗೆ ಫ್ರೈ ಮಾಡಬೇಕು.
- ಕೊನೆಗೆ ಅಕ್ಕಿ, ೩ ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಳ ಮುಚ್ಚಿ ೩ ಕೂಗು ಕೂಗಿಸಬೇಕು.
- ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪುದೀನಾ ರೈಸ್ ಸವಿಯಲು ಸಿದ್ದ.
/// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Recipes
Webtitle : ಪುದೀನಾ ರೈಸ್ ಮಾಡುವ ಸುಲಭ ವಿಧಾನ-Pudina Rice Recipe in Kannada