ಅಕ್ಕಿ ದೋಸೆ ಮಾಡುವ ವಿಧಾನ
Rice Flour Dosa recipe
Kannada Recipes (itskannada) ಅಡುಗೆ-ಮನೆ : ಅಕ್ಕಿ ದೋಸೆ ಮಾಡುವ ವಿಧಾನ-Rice Flour Dosa recipe in Kannada : ಪ್ರತಿಯೊಬ್ಬರಿಗೂ ಬೇರೆಬೇರೆ ರೀತಿಯ ದೋಸೆಗಳೆಂದರೆ ಅಚ್ಚುಮೆಚ್ಚು. ವಿವಿಧ ರೀತಿಯ ದೋಸೆಗಳನ್ನು ಹೆಚ್ಚಾಗಿ ಎಲ್ಲರೂ ತಿಂದಿರುತ್ತಾರೆ.ಆದರೆ ಕೆಲವೊಂದು ಅಪರೂಪದ ದೋಸೆ ಗಳ ಬಗ್ಗೆ ತಿಳಿಯುವ ಕುತೂಹಲ ನಿಮ್ಮಲ್ಲಿದೆಯೇ? ಇಲ್ಲಿದೆ ಮಾಹಿತಿ. ಅಕ್ಕಿ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು :
1 ಕೆ.ಜಿ ಅಕ್ಕಿ
1 ಕಪ್ ಉದ್ದಿನ ಬೇಳೆ,
1 ಚಿಟಕೆ ಅಡಿಗೆ ಸೋಡಾ,
1 ಚಮಚ ಉಪ್ಪು ಮತ್ತು 1/4 ಕೆ.ಜಿ. ಎಣ್ಣೆ
ಮಾಡುವ ವಿಧಾನ : ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 2 -3 ಬಾರಿ ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ನೀರು ಹಾಕಿ ಎರಡನ್ನೂ ಒಟ್ಟಿಗೆ ಹಾಕಿ 4 ಗಂಟೆ ಕಾಲ ನೆನಸಬೇಕು. ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ ಇದಕ್ಕೆ ಅಡಿಗೆ ಸೋಡಾ, ಉಪ್ಪನ್ನು ಬೆರಸಿ ಒಂದು ಪಾತ್ರೆಗೆ ಹಾಕಿ ಗಾಳಿ ಹೋಗದಂತೆ ಮುಚ್ಚಿ ಇಡಬೇಕು. ಮಾರನೆಯ ದಿನ ಹಿಟ್ಟು ಉಕ್ಕಿರುತ್ತದೆ. ಆಮೇಲೆ ಕಾವಲಿಯನ್ನು ಇಟ್ಟು ತೆಂಗಿನ ಜುಟ್ಟಿನಿಂದ ಕಾವಲಿಗೆ ಎಣ್ಣೆ ಹಚ್ಚಿ ಒಂದೊಂದು ಸೌಟು ಹಿಟ್ಟನ್ನು ಗುಂಡಗೆ ಹರಡಿ ದೋಸೆ ಹುಯ್ದು ತಿರುವಿ ಹಾಕಿ ಎರಡೂ ಕಡೆಯೂ ಬೇಯಿಸುವುದು.//
ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Recipes
Follow us On
Google News |
Advertisement