ಸವಿಯಿರಿ ರುಚಿಕರ ಕಾಶ್ಮೀರಿ ಪಲಾವ್

Taste The delicious Kashmiri Pulav-palav

ಸವಿಯಿರಿ ರುಚಿಕರ ಕಾಶ್ಮೀರಿ ಪಲಾವ್

ಹಲವು ಬಗೆಯ ಪಲಾವ್ ಮಾಡಿ , ತಿಂದ ಅನುಭವ ನಿಮಗಾಗಿರುತ್ತದೆ. ಒಮ್ಮೆ ಈ ಕಾಶ್ಮೀರಿ ಪಲಾವ್ ಮಾಡಿ ಅದರ ರುಚಿಯನ್ನು ಸವಿಯಿರಿ. ಮತ್ತೆ ಮತ್ತೆ ಮಾಡಿ ತಿನ್ನೋ ಆಸೆ ನಿಮ್ಮಲ್ಲಿ ಹುಟ್ಟುತ್ತದೆ.

ಕಾಶ್ಮೀರಿ ಪಲಾವ್ ಮಾಡಲು ಬೇಕಾದ ಪದಾರ್ಥಗಳು

  • ಬಾಸುಮತಿ ಅಕ್ಕಿ : 4 ಲೋಟ
  • ಹುರುಳಿಕಾಯಿ : 100 ಗ್ರಾಂ
  • ಎಲೆಕೋಸು : 200 ಗ್ರಾಂ
  • ಕ್ಯಾರೆಟ್ : 4
  • ತೆಂಗಿನಕಾಯಿ : 1 ಹೋಳು
  • ಕೇಸರಿಬಣ್ಣ : ಅರ್ಧ ಸ್ಪೂನ್
  • ಲವಂಗ : 4
  • ಪಲಾವ್ ಎಲೆ : 2
  • ದಾಲ್ಚಿನ್ನಿ : 4 ಚೂರು
  • ಕಾಳು ಮೆಣಸು :  10
  • ಕಲ್ಲು ಹೂ : 1
  • ಹಸಿಶುಂಠಿ : 1 ಚೂರು
  • ಈರುಳ್ಳಿ : 4
  • ಹಸಿಮೆಣಸಿನಕಾಯಿ : 8
  • ಕೊತ್ತಂಬರಿ ಸೊಪ್ಪು : 8 ಎಸಳು
  • ತುಪ್ಪ : 2 ಸ್ಪೂನ್
  • ಅಡುಗೆ ಎಣ್ಣೆ : ಅರ್ಧ ಲೋಟ
  • ಸೋಂಪು : 1 ಸ್ಪೂನ್
  • ಉಪ್ಪು : ರುಚಿಗೆ ತಕ್ಕಷ್ಟು

ಕಾಶ್ಮೀರಿ ಪಲಾವ್ ಮಾಡುವ ಸುಲಭ ಅಡುಗೆ ವಿಧಾನ

ಮೆಣಸಿನಕಾಳು , ಲವಂಗ , ಪಲಾವ್ ಎಲೆ , ದಾಲ್ಚಿನ್ನಿ , ಕಲ್ಲು ಹೂ ಗಳನ್ನು ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಹುರುಯಿರಿ. ನಂತರ ಅದನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಬಳಿಕ ಹಸಿ ಶುಂಠಿ , ಹಸಿ ಮೆಣಸಿನಕಾಯಿ , ಕೊತ್ತಂಬರಿ ಸೊಪ್ಪು , ತೆಂಗಿನಕಾಯಿ ತೂರಿ ಸೇರಿಸಿ ರುಬ್ಬಿರಿ.

ಅದಕ್ಕೆ ಕುಟ್ಟಿ ಪುಡಿ ಮಾಡಿದ ವಸ್ತುಗಳು ಮತ್ತು ಜಾಯಿಕಾಯಿ ಹಾಕಿ ಇನ್ನೊಮ್ಮೆ ರುಬ್ಬಿರಿ. ಹುರುಳಿಕಾಯಿಯನ್ನು ಉದ್ದುದ್ದ ಹೋಳುಗಳನ್ನಾಗಿ ಸೀಳಿ ಹೆಚ್ಚಿರಿ.

ಸವಿಯಿರಿ ರುಚಿಕರ ಕಾಶ್ಮೀರಿ ಪಲಾವ್ - Kannada News

ಕ್ಯಾರೆಟ್ ಎಲೆಕೋಸುಗಳನ್ನು ಉದ್ದುದ್ದ ಹೋಳುಗಳನ್ನಾಗಿ ಹೆಚ್ಚಿರಿ. ಕುಕ್ಕರ್ ಒಲೆಯ ಮೇಲೆ ಇಟ್ಟು ಎಣ್ಣೆಯನ್ನು ಹಾಕಿರಿ. ಕಾದಮೇಲೆ ಒಲೆಯ ಉರಿ ಕಡಿಮೆ ಮಾಡಿ ಸೋಂಪು ಮತ್ತು ಹೆಚ್ಚಿದ ತರಕಾರಿಗಳನ್ನು ಹಾಕಿ ಹುರಿದುಕೊಳ್ಳಿ.

ಬಳಿಕ ಸ್ವಲ್ಪ ನೀರು ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಮೊಗಚು ಕೈಯಿಂದ ಕೆದಕಿರಿ. ಆಮೇಲೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ, ಪುನಃ ಕುಕ್ಕರನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆಯನ್ನು ಹಾಕಿ. ಕಾದಮೇಲೆ ಹೆಚ್ಚಿಕೊಂಡ ಈರುಳ್ಳಿ ಕರಿಬೇವು ಹಾಕಿ ಬಾಡಿಸಬೇಕು.

ನಂತರ ಅದಕ್ಕೆ ಸ್ವಚ್ಛಗೊಳಿಸಿದ ಅಕ್ಕಿಯನ್ನು ಹಾಕಬೇಕು. ಆಮೇಲೆ ಅದಕ್ಕೆ ಕೇಸರಿ ಬಣ್ಣ, ರುಬ್ಬಿಕೊಂಡ ಮಸಾಲೆ , ರುಚಿಗೆ ತಕ್ಕಷ್ಟು ಉಪ್ಪು, ಎಂಟು ಲೋಟ ನೀರು ಸೇರಿಸಿ ಮೊಗಚು ಕೈಯಿಂದ ಕಲಸಿ ಮುಚ್ಚಳ ಮುಚ್ಚಿ ಕಾಯಿರಿ.

ಎರಡು ವಿಶಲ್ ಸೌಂಡ್ ಬರುವ ತನಕ ಕಾದು ಒಲೆಯನ್ನು ಆರಿಸಿ. ಸ್ಟೀನ್ ಆರಿದ ಮೇಲೆ ಕುಕ್ಕರಿನ ಮುಚ್ಚಳ ತೆರೆದು , ಹುರಿದು ಬೇಯಿಸಿಕೊಂಡ ತರಕಾರಿಗಳನ್ನು ಮತ್ತು ಸ್ವಲ್ಪ ತುಪ್ಪವನ್ನೂ ಹಾಕಿ ಕಲಿಸಬೇಕು.

ಆನಂತರ ಪಲಾವನ್ನು ಒಂದು ಪಾತ್ರೆಯಲ್ಲಿ ಹಾಕಿ ಅಲಂಕಾರಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದಾರಿಸಿ …….

ಇದೀಗ ರುಚಿ ರುಚಿಯಾದ ಕಾಶ್ಮೀರಿ ಪಲಾವ್ ರೆಡಿ . ನೀವು ತಿನ್ನಿ ನಿಮ್ಮವರಿಗೂ ಕೊಡಿ…../////

WebTitle : ಸವಿಯಿರಿ ರುಚಿಕರ ಕಾಶ್ಮೀರಿ ಪಲಾವ್-Taste The delicious Kashmiri Pulav-palav

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Karnataka RecipesKannada Recipes 

Follow us On

FaceBook Google News