ದಿಡೀರ್ ಟೊಮೊಟೊ ಚಿತ್ರಾನ್ನ
tomato chitranna rice | itskannada Recipes
(itskannada): ದಿಡೀರ್ ಟೊಮೊಟೊ ಚಿತ್ರಾನ್ನ – ಮಾಡುವುದು ಸುಲಭ , ತಿನ್ನಲು ರುಚಿಕರ. ಮನೆಗೆ ಗೆಳೆಯರು ಅಥವಾ ನೆಂಟರು ಬಂದಾಗ , ಸ್ವಲ್ಪ ಸಮಯದಲ್ಲಿಯೇ ಈ ದಿಡೀರ್ ಟೊಮೋಟೊ ಚಿತ್ರಾನ್ನ ಮಾಡಬಹುದು. ಇದಕ್ಕೇನು ಅಷ್ಟು ಶ್ರಮ ಬೇಕಾಗಿಲ್ಲವಾದ್ದರಿಂದ ಬೇಗನೆ ಮಾಡುವ ಸುಲಭ ಅಡುಗೆ ಟೊಮೊಟೊ ಚಿತ್ರಾನ್ನ .
ಈ ಹಿಂದಿನ ಲೇಖನದಲ್ಲಿ 5 ನಿಮಿಷದಲ್ಲಿ ಘೀರೈಸ್ ಮಾಡುವುದು ಹೇಗೆ ? ಎಂದು ತಿಳಿದುಕೊಂಡಿದ್ದಾಯಿತು , ಹಾಗಾದರೆ ಈಗ ದಿಡೀರ್ ಟೊಮಟೊ ಚಿತ್ರಾನ್ನ ಮಾಡುವುದು ಹೇಗೆ ಎಂಬ ವಿಧಾನ ಕಲಿಯೋಣ. ಹಾಗೂ ಬೇಗನೆ ಮಾಡಬಹುದಾದ ಅಡುಗೆಗಳಲ್ಲಿ ಇದೂ ಕೂಡ ಒಂದು.
ದಿಡೀರ್ ಟೊಮೊಟೊ ಚಿತ್ರಾನ್ನ ಮಾಡಲು ಬೇಕಾದ ಪದಾರ್ಥಗಳು .
- ಅಕ್ಕಿ
- ಕಡಲೆಬೇಳೆ
- ಟೊಮೊಟೊ
- ಉದ್ದಿನಬೇಳೆ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸಿನ ಕಾಯಿ
- ಕರಿಬೇವಿನ ಸೊಪ್ಪು
- ಎಣ್ಣೆ
- ಜೀರಿಗೆ
- ಸಾಸಿವೆ
ದಿಡೀರ್ ಟೊಮೊಟೊ ಚಿತ್ರಾನ್ನ ಮಾಡುವ ವಿಧಾನ .
ಒಳ್ಳೆಯ ಅಕ್ಕಿಯನ್ನು ಆಯ್ದುಕೊಳ್ಳಿ , ಅಕ್ಕಿಯನ್ನು ನೀರಿನಲ್ಲಿ ನೆನೆಆಕಿ , ಸ್ವಲ್ಪ ಸಮಯದ ನಂತರ ನೀರಿನಿಂದ ಅಕ್ಕಿಯನ್ನು ಬೇರ್ಪಡಿಸಿ. ಉದುರುದುರಾಗಿ ಆಗಬೇಕಾದ್ದರಿಂದ ಅನ್ನ ಮಾಡುವ ಕುಕ್ಕರ್ ಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ. ಅಡುಗೆ ಎಣ್ಣೆ ಹಾಕುವುದರಿಂದ ಅನ್ನವು ಉದುರುದುರಾಗಿ ಆಗುತ್ತದೆ.
ಇಲ್ಲಿ ಮುಖ್ಯವಾಗಿ ಜಾಗರೂಕತೆಯಿಂದ ಮಾಡಬೇಕಾಗಿರುವುದು ಅನ್ನವಾದ್ದರಿಂದ , ಅನ್ನವು ಚನ್ನಾಗಿ ಆಗುವಂತೆ ನೋಡಿಕೊಳ್ಳಿ. ಅನ್ನವು ಮುದ್ದೆಯಾಗಿ ಆದರೆ ನೋಡಲು ಹಾಗೂ ತಿನ್ನಲು ಅಷ್ಟು ಚನ್ನಾಗಿರುವುದಿಲ್ಲ.
ಅನ್ನವನ್ನು ಉದುರುದುರಾಗಿ ಮಾಡಿಕೊಂಡ ಮೇಲೆ , ಹಸಿಮೆಣಸಿನಕಾಯಿ , ಟೊಮೊಟೊ (ಟೊಮೋಟೊ ಚಿತ್ರಾನ್ನ ಕ್ಕೆ ಮುಖ್ಯವಾಗಿ ಬೇಕಾಗಿರುವುದು ) , ಈರುಳ್ಳಿ , ಕೊತ್ತಂಬರಿ ಸೊಪ್ಪು ಎಲ್ಲವನ್ನು ಹೆಚ್ಚಿಕೊಳ್ಳಿ , ಹೆಚ್ಚಿಕೊಂಡ ಮೇಲೆ , ಒಲೆ ಹಚ್ಚಿ , ಒಲೆಯ ಮೇಲೆ ಪಾತ್ರೆಯನ್ನಿಟ್ಟು ಪಾತ್ರೆಗೆ ಅಡುಗೆ ಎಣ್ಣೆಯನ್ನು ಹಾಕಿರಿ , ಎಣ್ಣೆಯನ್ನು ಕಾಯಲು ಬಿಡಿ.
ಎಣ್ಣೆಯು ಕಾದ ಮೇಲೆ ಸಾಸಿವೆಯನ್ನು ಹಾಕಿ. ಸಾಸಿವೆಯು ಎಣ್ಣೆಯಲ್ಲಿ ಚಿಟಿದ ಮೇಲೆ ಅದಕ್ಕೆ ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ ಚನ್ನಾಗಿ ಕೆದುಕಿ ಕೊಡಿ . ಸ್ವಲ್ಪ ಕಡಿಮೆ ಉರಿಯಲ್ಲಿಯೇ ಅವು ಇರಲಿ, ಇಲ್ಲದಿದ್ದಲ್ಲಿ ಹೆಚ್ಚಿಗೆ ಬಾಡಿಹೊಗುತ್ತವೆ … ಹಾಗೆಯೇ ಕೆದುಕಿ ಕೊಡುತ್ತಿರಿ ಹಾಗೂ ಅವು ಸ್ವಲ್ಪ ಕೆಂಬಣ್ಣಕ್ಕೆ ಬಂದ ನಂತರ , ಮೊದಲೇ ತಯಾರಾಗಿಟ್ಟುಕೊಂಡ ಮೆಣಸಿನಕಾಯಿ , ಜೀರಿಗೆ , ಈರುಳ್ಳಿಯನ್ನು ಹಾಕಿ ಮತ್ತೆ ಕೆದುಕಿ ಕೊಡಲು ಪ್ರಾರಂಭಿಸಿ.
ಸ್ವಲ್ಪ ಸಮಯದ ನಂತರ ಈ ಮೊದಲೇ ಹೆಚ್ಚಿಕೊಂಡಿರುವ ಟೊಮೊಟೊ , ಕೊತ್ತಂಬರಿ ಸೊಪ್ಪು , ಕರಿಬೇವನ್ನು ಹಾಕಿ ಮತ್ತೆ ಕೆದುಕಿ ಕೊಡಿ . ಇವೆಲ್ಲವೂ ಚೆನ್ನಾಗಿ ಬಾಡಲಿ , ಕಡಿಮೆ ಉರಿಯಲ್ಲಿಯೇ ಇವು ಬಾಡಲಿ . ಬಾಡಿಸಿದ ಮೇಲೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಇದೀಗ ಟೊಮೋಟೊ ಚಿತ್ರಾನ್ನ ತಯಾರಾದಂತೆ. ಇದನ್ನು ಅನ್ನಕ್ಕೆ ಹಾಕಿ ಬೇಕಾಗಿರುವಸ್ತು ಮಾತ್ರ ಕಲಸಿ , ಅದರ ರುಚಿಯನ್ನು ಸವಿಯಿರಿ. ದಿಡೀರ್ ಟೊಮೊಟೊ ಚಿತ್ರಾನ್ನ ಮಾಡುವುದು ಹೇಗೆ ಗೊತ್ತಾಯಿತಲ್ವಾ -|itskannada Recipes
Webtitle : ದಿಡೀರ್ ಟೊಮೊಟೊ ಚಿತ್ರಾನ್ನ-tomato chitranna rice
keyword : ದಿಡೀರ್ ಟೊಮೊಟೊ ಚಿತ್ರಾನ್ನ , ಟೊಮೊಟೊ ಚಿತ್ರಾನ್ನ , ಟೊಮೋಟೊ ಚಿತ್ರಾನ್ನ, tomato chitranna rice .
ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಅಡುಗೆಗಳಿಗಾಗಿ ಕೈ-ರುಚಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಅಡುಗೆ ಪುಟ –ಕನ್ನಡ ಅಡುಗೆ-ಇಲ್ಲವೇ ವಿಭಾಗ ಕರ್ನಾಟಕ ಅಡುಗೆಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Recipes click Kannada Recipes or look at Karnataka Recipes
Follow us On
Google News |