ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ
Vegetable Biryani-Easy Method | itskannada Recipes
ಬೆಂ, ಡಿಸೆಂಬರ್ 30 (itskannada): ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ : ತರಕಾರಿ ಬಿರಿಯಾನಿ ಮಾಡಬೇಕೆ ? ಹಾಗಾದರೆ ಇಲ್ಲಿದೆ ಸಲಭ ವಿಧಾನ , ಸರಳವಾಗಿ ವೆಜಿಟೆಬಲ್ ಬಿರಿಯಾನಿ ಮಾಡೋದನ್ನ ನೀವು ಕಲಿಯಬಹುದು . ಹಬ್ಬ-ಹರಿ ದಿನಗಳಲ್ಲಿ ತಯಾರು ಮಾಡಿ ನಿಮ್ಮ ಕುಟುಂಬದೊಂದಿಗೆ ಸವಿಯಬಹುದು .
ಈ ಹಿಂದಿನ ಲೇಖನದಲ್ಲಿ ರುಚಿ-ರುಚಿಕರ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ ಎಂದು ಕಲಿತಾಯಿತಲ್ವಾ , ಹಾಗಾದರೆ ಈಗ ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ ನೋಡೋಣ . ನೀವೇ ಮಾಡಿ , ಅದರ ಸವಿಯನ್ನ ನಿಮ್ಮ ಕುಟುಂಬಕ್ಕೆ ಸವಿಯಲು ಕೊಡಿ.
ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ
ಮೊದಲಿಗೆ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು :
-
- ಬಾಸುಮತಿ ಅಕ್ಕಿ , ಬೀನ್ಸ್ , ಹೆಚ್ಚಿಕೊಂಡ ಕ್ಯಾರೆಟ್ , ಅಲೂಗಡ್ಡೆ, ಹೂಕೋಸು , ಹಸಿ ಬಟಾಣಿ, ಈರುಳ್ಳಿ .
- ರುಚಿಗೆ ತಕ್ಕಷ್ಟು ಉಪ್ಪು , ಅಡುಗೆ ಎಣ್ಣೆ , ಏಲಕ್ಕಿ , ದಾಲ್ಚಿನ್ನಿ ,ಲವಂಗ , ಮೊಗ್ಗು , ಪಲಾವ್ ಎಲೆ.
ಮೊದಲೇ ರುಬ್ಬಿಟ್ಟು ಕೊಳ್ಳಬೇಕಾದ ಪದಾರ್ಥಗಳು :
ತೆಂಗಿನ ತುರಿ , ಕೊತ್ತಂಬರಿ ಸೊಪ್ಪು , ಹಸಿಮೆಣಸಿನಕಾಯಿ , ಬೆಳ್ಳುಳ್ಳಿ .
ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ
ಬಾಸುಮತಿ ಅಕ್ಕಿಯನ್ನು ಸ್ವಚ್ಛ ಮಾಡಿಕೊಳ್ಳಿ , ನಂತರ ಒಂದು ಪಾತ್ರೆಗೆ ನೀರನ್ನು ಹಾಕಿ ಸ್ವಚ್ಛ ಮಾಡಿಕೊಂಡ ಅಕ್ಕಿಯನ್ನು ಆ ನೀರಿನಲ್ಲಿ ಹಾಕಿ ನೆನೆಯಲು ಬಿಡಿ .
೧೦ ರಿಂದ ೧೫ನಿಮಿಷಗಳ ಕಾಲ ಅಕ್ಕಿ ನೆನೆಯಲಿ , ಅಕ್ಕಿ ನೆಂದ ನಂತರ , ನೀರನ್ನು ಬಸೆದು ಅಕ್ಕಿಯನ್ನು ರೆಡಿಯಾಗಿ ಇಟ್ಟುಕೊಳ್ಳಿ.
ಈಗ ಒಲೆಯ ಮೇಲೆ ಪಾತ್ರೆ ಅಥವಾ ಕುಕ್ಕರ್ ಇಟ್ಟು ಅಡುಗೆ ಎಣ್ಣೆಯನ್ನು ಹಾಕಿ ಎನ್ನೆಯು ಕಾಯಲು ಬಿಡಿ , ಕಾದ ಎಣ್ಣೆಗೆ ಮೊದಲೇ ತಯಾರಾಗಿಟ್ಟುಕೊಂಡ ಮಸಾಲೆ ಪದಾರ್ಥಗಳನ್ನು ಹಾಗೂ ಈರುಳ್ಳಿ , ಬೆಳ್ಳುಳ್ಳಿಯನ್ನು ಹಾಕಿ ಹುರಿಯಲು ಪ್ರಾರಂಭಿಸಿ. ಸ್ವಲ್ಪ ಕಡಿಮೆ ಉರಿಯಲ್ಲಿ ಹುರಿಯಿರಿ.
ಸ್ವಲ್ಪ ತಾಸು ಹುರಿದ ನಂತರ , ನೀರಿನಲ್ಲಿ ನೆನೆಸಿಟ್ಟು ಬೇರ್ಪಡಿಸಿದ ಅಕ್ಕಿಯನ್ನು ಇದಕ್ಕೆ ಹಾಕಿ ಮತ್ತೆ ಕೆದುಕಿ
ಹುರಿಯಿರಿ. ಎಲ್ಲಾ ತರಕಾರಿಗಳನ್ನು ಇನ್ನೊಂದು ಪಾತ್ರೆಯಲ್ಲಿ ಅರ್ದ ಬೇಯಿಸಿಕೊಳ್ಳಿ , ಬೇಯಿಸಿಕೊಂಡ ಆ ತರಕಾರಿಗಳನ್ನು ಈ ಕುಕ್ಕರ್ ಗೆ ಹಾಕಿ ಕೆದುಕಿಕೊಡಿ. ಸ್ವಲ್ಪ ತಾಸು ತಡೆದು , ಬೇಕಾಗಿರುವ ಮಟ್ಟಿಗೆ ಬಿಸಿನೀರು , ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿಕೊಟ್ಟು ಕುಕ್ಕರ್ ಮುಚ್ಚಳವನ್ನು ಹಾಕಿ . ಸ್ವಲ್ಪ ಉರಿ ಜಾಸ್ತಿ ಮಾಡಿ ಬೇಯಿಸಿ. ಬೆಂದ ಮೇಲೆ ಕುಕ್ಕರ್ ಕೆಳಗಿಳಿಸಿ, ಕುಕ್ಕರ್ ಪೂರ್ಣ ಆರುವ ತನಕ ಕಾಯಿರಿ , ಪೂರ್ಣ ಆರಿದ ಮೇಲೆ ಕುಕ್ಕರ್ ಮುಚ್ಚಳ ತೆರೆಯಿರಿ , ಈಗ ನಿಮ್ಮ ಬೋಬಾಟ್ ಘಮ ಘಮ ಬಿರಿಯಾನಿ ಸವಿಯಲು ಸಿದ್ದ. ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ ತಿಳಿದು ಕೊಂಡರಲ್ಲಾ … ಇನ್ನೇಕೆ ತಡ ಇಂದೇ ಬಿರಿಯಾನಿ ಮಾಡಿ ಸವಿಯಿರಿ. -| itskannada Recipes
WebTitle : Vegetable Biryani-Easy Method
Keyword : ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ , Vegetable Biryani-Easy Method ,
ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಅಡುಗೆಗಳಿಗಾಗಿ ಕೈ-ರುಚಿ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಅಡುಗೆ ಪುಟ –ಕನ್ನಡ ಅಡುಗೆ-ಇಲ್ಲವೇ ವಿಭಾಗ ಕರ್ನಾಟಕ ಅಡುಗೆಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada Recipes click Kannada Recipes or look at Karnataka Recipes
Follow us On
Google News |